
ನವದೆಹಲಿ: ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು, 1494 ಕೋಟಿ ರು. ಖರ್ಚು ಮಾಡಿದ್ದು, ಇದು ಒಟ್ಟು ಚುನಾವಣಾ ವೆಚ್ಚದ ಶೇ.44.56ರಷ್ಟಾಗುತ್ತದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ತಿಳಿಸಿದೆ. 2ನೇ ಸ್ಥಾನದಲ್ಲಿ 620 ಕೋಟಿ ರು.(ಶೇ.18.5) ವೆಚ್ಚ ಮಾಡಿದ ಕಾಂಗ್ರೆಸ್ ಇದೆ.
ಲೋಕಸಭೆ ಮತ್ತು ಮಾ.16ರಿಂದ ಜೂ.6 ನಡೆದ ವರೆಗೆ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ಚುನಾವಣೆಗಳಿಗೆ 32 ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಒಟ್ಟು 3,352.81 ಕೋಟಿ ರು. ಖರ್ಚು ಮಾಡಿದ್ದವು. ಇದರಲ್ಲಿ ರಾಷ್ಟ್ರೀಯ ಪಕ್ಷಗಳು 2,204 ಕೋಟಿ ರು.ಗೂ (ಶೇ.65.75) ಅಧಿಕ ಖರ್ಚು ಮಾಡಿವೆ. ಅಂತೆಯೇ, ಸಂಗ್ರಹವಾದ ಒಟ್ಟು ನಿಧಿಯಲ್ಲಿ ರಾಷ್ಟ್ರೀಯ ಪಕ್ಷಗಳು 6,930.246 ಕೋಟಿ ರು. (ಶೇ.93.08) ಪಡೆದರೆ, ಪ್ರದೇಶಿಕ ಪಕ್ಷಗಳು 515.32 ಕೋಟಿ ರು. (ಶೇ.6.92) ಮೊತ್ತ ಪಡೆದವು ಎಂದು ಎಡಿಆರ್ ಹೇಳಿದೆ.
ಚುನಾವಣೆಯ ಬಳಿಕ, ನಿಯಮದಂತೆ ಎಲ್ಲಾ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮಾಹಿತಿಯ ಆಧಾರದಲ್ಲಿ ಈ ವರದಿ ತಯಾರಿಸಲಾಗಿದೆ.
ಯಾವುದಕ್ಕೆ ಎಷ್ಟು ಖರ್ಚು?:
ಪಕ್ಷಗಳು ಪ್ರಚಾರಕ್ಕಾಗಿ ಅತ್ಯಧಿಕ, 2,008 ಕೋಟಿ ರು. ಅಥವಾ ತಮ್ಮ ಒಟ್ಟು ವೆಚ್ಚದ ಶೇ.53ರಷ್ಟು ಖರ್ಚು ಮಾಡಿವೆ. ಉಳಿದಂತೆ ಸಂಚಾರಕ್ಕೆ 795 ಕೋಟಿ ರು., ಅಭ್ಯರ್ಥಿಗಳ ವೇತನಕ್ಕೆ 402 ಕೋಟಿ ರು., ವರ್ಚುವಲ್ ಪ್ರಚಾರಕ್ಕೆ 132 ಕೋಟಿ ರು., ಅಭ್ಯರ್ಥಿಗಳ ಕ್ರಮಿನಲ್ ಅಪರಾಧಗಳ ಪ್ರಕಟಣೆಗೆ 28 ಕೋಟಿ ರು. ಖರ್ಚಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ