ಬಿಜೆಪಿ ಆದಾಯ 3,623 ಕೋಟಿ, ಖರ್ಚು 1,651 ಕೋಟಿ: ಕಾಂಗ್ರೆಸ್‌ಗೆ ನಷ್ಟ!

Published : Aug 11, 2021, 09:44 AM ISTUpdated : Aug 11, 2021, 09:55 AM IST
ಬಿಜೆಪಿ ಆದಾಯ 3,623 ಕೋಟಿ, ಖರ್ಚು 1,651 ಕೋಟಿ: ಕಾಂಗ್ರೆಸ್‌ಗೆ ನಷ್ಟ!

ಸಾರಾಂಶ

ಕಾಂಗ್ರೆಸ್‌ಗೆ ನಷ್ಟ: ಆದಾಯ 682 ಕೋಟಿ, ಖರ್ಚು 998 ಕೋಟಿ 19-20ರಲ್ಲಿ ಬಿಜೆಪಿ ಆದಾಯ 3623 ಕೋಟಿ, ಖರ್ಚು 1651 ಕೋಟಿ

ನವದೆಹಲಿ(ಆ.11): 2019-20ನೇ ಸಾಲಿನಲ್ಲಿ ಬಿಜೆಪಿ ಒಟ್ಟು 3,623 ಕೋಟಿ ರು. ಆದಾಯ ಗಳಿಸಿದೆ. ಇದರಲ್ಲಿ ಚುನಾವಣಾ ಬಾಂಡ್‌ಗಳ ಮಾರಾಟದಿಂದ 2,555 ಕೋಟಿ ರು. ಗಳಿಸಿದೆ. 2018-18ನೇ ಸಾಲಿಗೆ ಹೋಲಿಸಿದರೆ ಬಿಜೆಪಿಯ ಗಳಿಕೆ ಶೇ. 50ರಷ್ಟುಏರಿಕೆಯಾಗಿದೆ.

ಚುನಾವಣೆ ಮತ್ತು ಪ್ರಚಾರಕ್ಕೆ ಬಿಜೆಪಿ 2019-20ನೇ ಸಾಲಿನಲ್ಲಿ 1651 ಕೋಟಿ ರು.ಗಳನ್ನು ಖರ್ಚು ಮಾಡಿದೆ. ಇದರಲ್ಲಿ 2019ರಲ್ಲಿ ನಡೆದ ಲೋಕಸಭಾ ಚುನಾವಣೆಗೆ 1352 ಕೋಟಿ ರು. ಖರ್ಚು ಮಾಡಿದೆ. ಕಳೆದ ಸಾಲಿಗೆ ಹೋಲಿಸಿದರೆ ಬಿಜೆಪಿಯ ಖರ್ಚು ಶೇ.64ರಷ್ಟುಏರಿಕೆಯಾಗಿದೆ. ಜಾಹಿರಾತಿಗಾಗಿ 400 ಕೋಟಿ ರು. ಹಣವನ್ನು ಬಿಜೆಪಿ ಖರ್ಚು ಮಾಡಿದೆ.

ಇದೇ ಸಾಲಿನಲ್ಲಿ ಕಾಂಗ್ರೆಸ್‌ 682 ಕೋಟಿ ರು. ಆದಾಯ ಗಳಿಸಿದೆ ಮತ್ತು 998 ಕೋಟಿ ರು. ಖರ್ಚು ಮಾಡಿದೆ. ತೃಣಮೂಲ ಕಾಂಗ್ರೆಸ್‌ ಒಟ್ಟಾರೆ 143 ಕೋಟಿ ರು. ಆದಾಯ ಗಳಿಸಿದ್ದು 107 ಕೋಟಿ ರು. ಖರ್ಚು ಮಾಡಿದೆ. ಸಿಪಿಎಂ 156 ಕೋಟಿ ಆದಾಯ ಗಳಿಸಿದ್ದು 105 ಕೋಟಿ ವೆಚ್ಚ ಮಾಡಿದೆ. ಎನ್‌ಸಿಪಿ 85 ಕೋಟಿ ಆದಾಯ ಗಳಿಸಿದ್ದು 109 ಕೋಟಿ ಖರ್ಚು ಮಾಡಿದೆ. ಬಿಎಸ್‌ಪಿ ಆದಾಯ 58 ಕೋಟಿ ಆಗಿದ್ದು 95 ಕೋಟಿ ಖರ್ಚು ಮಾಡಿದೆ. ಸಿಪಿಐ 6.58 ಕೋಟಿ ಆದಾಯ ಗಳಿಸಿದ್ದು 6.53 ಕೋಟಿ ವೆಚ್ಚ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

90ರ ವೃದ್ಧೆಯನ್ನು ಬೆನ್ನಮೇಲೆ ಹೊತ್ತು 500 ರೂ ಪಿಂಚಣಿಗಾಗಿ ನಡೆದುಕೊಂಡೇ ಬ್ಯಾಂಕ್ ತಲುಪಿದ ಮಹಿಳೆ
Kiss: ಯಶ್ ಮೇಲೆ UP ಸುಂದರಿಗೆ ಲವ್.. ರಾಕಿಂಗ್ ಸ್ಟಾರ್ ಕಟೌಟ್‌ಗೆ ಕಿಸ್ ಕೊಟ್ಟ ಲೇಡಿ ಫ್ಯಾನ್; ವಿಡಿಯೋ ವೈರಲ್!