Prophet Remark ಮತ್ತೆ ಸರ್ ತನ್‌ ಸೇ ಜುದಾ ಸದ್ದು, ಬಿಜೆಪಿ ನಾಯಕನಿಗೆ ಶಿರಚ್ಛೇದ ಎಚ್ಚರಿಕೆ!

Published : Sep 14, 2022, 03:59 PM ISTUpdated : Sep 14, 2022, 04:00 PM IST
Prophet Remark ಮತ್ತೆ ಸರ್ ತನ್‌ ಸೇ ಜುದಾ ಸದ್ದು, ಬಿಜೆಪಿ ನಾಯಕನಿಗೆ ಶಿರಚ್ಛೇದ ಎಚ್ಚರಿಕೆ!

ಸಾರಾಂಶ

ಸರ್ ತನ್ ಸೆ ಜುದಾ, ಏಕಿ ಸಜಾ, ಸರ್‌ ತನ್ ಸೇ ಜುದಾ...ಈ ಮಾತು ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿದೆ. ಪ್ರವಾದಿ ಮೊಹಮ್ಮದ್ ವಿರುದ್ದ ಹೇಳಿಕೆ ನೀಡಿದ  ಬಿಜೆಪಿ ನಾಯಕಿ ನೂಪುರ್ ಶರ್ಮಾಗೆ, ನೂಪುರ್ ಬೆಂಬಲಿಸಿದ ಕನ್ಹಯ್ಯ ಲಾಲ್‌ನ್ನು ಇದೇ ಟ್ಯಾಗ್ ಲೈನ್ ಅಡಿಯಲ್ಲಿ ಹತ್ಯೆ ಮಾಡಲಾಗಿದೆ. ಇದೀಗ ಮತ್ತೊರ್ವ ಪ್ರಮುಖ ಬಿಜೆಪಿ ನಾಯಕನಿಗೆ ಶಿರಚ್ಛೇದದ ಎಚ್ಚರಿಕೆ ಬಂದಿದೆ.  

ನವದೆಹಲಿ(ಸೆ.14):  ಸರ್ ತನ್ ಸೇ ಜುದಾ, ಸರ್ ತನ್ ಸೇ ಜುದಾ ಘೋಷಣೆ, ಹತ್ಯೆಗಳು, ಸೇಡು ಶಾಂತವಾಗುತ್ತಿದೆ ಅನ್ನುವಷ್ಟರಲ್ಲಿ ಮತ್ತೆ ಭಯಭೀತ ವಾತಾವರಣ ಸೃಷ್ಟಿಯಾಗುವ ಲಕ್ಷಣಗಳು ಗೋಚರಿಸುತ್ತಿದೆ.  ಗ್ಯಾನವ್ಯಾಪಿ ಮಸೀದಿ ವಿವಾದ ಕುರಿತು ವಾರಣಾಸಿ ಕೋರ್ಟ್ ಆದೇಶ, ಪೂಜಾ ಸ್ಥಳ ಕಾಯ್ದೆ ಮರುಪರಿಶೀಲನೆ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ ಸೇರಿದಂತೆ ಹಲವು ಕಾರಣಗಳಿಂದ ಕೆಲ ಸಮುದಾಯದ  ಉದ್ರಿಕ್ತರ ಗುಂಪು ಕೊತ ಕೊತ ಕುದಿಯುತ್ತಿದೆ. ಈ ಸೇಡು, ಹಳೇ ದ್ವೇಷ ತೀರಿಸಿಕೊಳ್ಳಲು ಇದೀಗ ಮತ್ತೆ ಸರ್ ತನ್ ಸೇ ಜುದಾ ಘೋಷಣೆ ಕೇಳಿಬಂದಿದ. ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿಕೆ ನೀಡಿದ್ದ ದೆಹಲಿ ಬಿಜೆಪಿ ನಾಯಕ ನವೀನ್ ಜಿಂದಾಲ್ ಈಗಾಗಲೇ ಹಲವು ಬೆದರಿಕೆ ಬಂದಿದೆ. ಇದೀಗ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಕರೆಯೊಂದು ಬಂದಿದೆ. ವಿವಾದಾತ್ಮಕ ಹೇಳಿಕೆಯಿಂದ ನವೀನ್ ಜಿಂದಾಲ್‌ರನ್ನು ಬಿಜೆಪಿ ಈಗಾಗಲೇ ಪಕ್ಷದಿಂದ ಉಚ್ಚಾಟಿಸಿದೆ. 

ನೂಪುರ್ ಶರ್ಮಾ ಬೆನ್ನಲ್ಲೇ ನವೀನ್ ಜಿಂದಾಲ್(Naveen Jindal) ಕೂಡ ವಿವಾದಕ್ಕೆ ಸಿಲುಕಿದ್ದರು. ಈ ಘಟನೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ನವೀನ್ ಜಿಂದಾಲ್ ಹಲವು ಬೆದರಿಕೆ ಎದುರಿಸಿದ್ದಾರೆ. ವಿವಾದ(Prophet Remark) ಬಳಿಕ ನವೀನ್ ಜಿಂದಾಲ್‌ಗೆ ಪೊಲೀಸ್ ಭದ್ರತೆಯನ್ನು(Police Protection) ಒದಗಿಸಲಾಗಿದೆ. ಇತ್ತೀಚೆಗೆ ನವೀನ್ ಜಿಂದಾಲ್ ಜೈ ಶ್ರೀರಾಮ್(Jai Sri Ram) ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ವ್ಯಕ್ತಿಯೊಬ್ಬ ಸರ್ ತನ್ ಸೇ ಜುದಾ(Sar tan se Juda) ಎಂದು ಪ್ರತಿಕ್ರಿಯಿಸಿದ್ದಾನೆ.

ಮಾತಿನ ಭರದಲ್ಲಿ ಏನೆಲ್ಲಾ ಮಾತನಾಡಬೇಡಿ, ಮಾಧ್ಯಮ ವಕ್ತಾರರಿಗೆ ಬಿಜೆಪಿಯ ಹೊಸ ನಿಯಮ!

ಈ ಕುರಿತು ನವೀನ್ ಜಿಂದಾಲ್ ದೆಹಲಿ ಪೊಲೀಸರ(Delhi Police) ಗಮನಕ್ಕೆ ತಂದಿದ್ದಾರೆ. ಇದರ ಬೆನ್ನಲ್ಲೆ ಜಿಂದಾಲ್ ಪೊಲೀಸ್ ಭದ್ರತೆಯನ್ನು ಹೆಚ್ಚಿಸಿದೆ. ಇತ್ತೀಚಗೆ ಹಲವು ಬಾರಿ ನವೀನ್ ಜಿಂದಾಲ್ ಶಿರಚ್ಛೇದನ ಶಿಕ್ಷೆ ಬೆದರಿಕೆ(Threat) ಎದುರಿಸಿದ್ದಾರೆ. ಇದೀಗ ಮತ್ತೆ ಇದೇ ರೀತಿ ಬೆದರಿಕೆ ಬಂದಿದೆ. 

 

 

ನೂಪುರ್ ಶರ್ಮಾ(Nupur Sharma) ಬೆಂಬಲಿಸಿದ ಉದಯಪುರದ ಟೈಲರ್ ಕನ್ಹಯ್ಯ ಲಾಲ್ ಮೇಲೆ ಸರ್ ತನ್ ಸೇ ಜುದಾ ಘೋಷಣೆ ಮೂಲಕ ಮುಸ್ಲಿಂ ಮೂಲಭೂತವಾದಿಗಳು ಹತ್ಯೆ ಮಾಡಿದ್ದರು. ಈ ಘಟನೆ ಬಳಿಕ ನವೀನ್ ಜಿಂದಾಲ್ ಹಲವು ಬಾರಿ ಇದೇ ರೀತಿ ಶಿಕ್ಷೆ ನೀಡಲಿದ್ದೇವೆ ಎಂಬ ಎಚ್ಚರಿಕೆ ಬಂದಿತ್ತು. 

ಪಾಕಿಸ್ತಾನ ತನ್ನ ಕೆಲಸವನ್ನು ನೋಡಿಕೊಳ್ಳಲಿ, ಭಾರತದ ತೀಕ್ಷ್ಣ ಉತ್ತರ

ಇನ್ನು ನಿನ್ನ ಶಿರಚ್ಛೇದದ ಸರದಿ: ನವೀನ್‌ ಜಿಂದಾಲ್‌ಗೆ ಬೆದರಿಕೆ
ಉದಯ್‌ಪುರದ ಭೀಕರ ಹತ್ಯೆ ಪ್ರಕರಣದ ಬೆನ್ನಲ್ಲೇ, ಇತ್ತೀಚೆಗೆ ಪಕ್ಷದಿಂದ ವಜಾಗೊಂಡಿದ್ದ ದೆಹಲಿ ಬಿಜೆಪಿ ಘಟಕದ ಮಾಧ್ಯಮ ವಿಭಾಗದ ಮುಖ್ಯಸ್ಥ ನವೀನ್‌ ಜಿಂದಾಲ್‌ಗೆ ಶಿರಚ್ಛೇದ ಎಚ್ಚರಿಕೆಯೊಂದು ರವಾನೆಯಾಗಿದೆ. ಬುಧವಾರ ಬೆಳಗ್ಗೆ ನವೀನ್‌ ಅವರ ಇ ಮೇಲ್‌ಗೆ ಸಂದೇಶವೊಂದು ರವಾನೆಯಾಗಿದ್ದು, ಅದರಲ್ಲಿ ‘ಉಗ್ರ ನವೀನ್‌ ಕುಮಾರ್‌ ಇದೀಗ ಶಿರಚ್ಛೇದವಾಗುವ ಸರದಿ ನಿನ್ನದು’ ಎಂದು ಎಚ್ಚರಿಸಲಾಗಿದೆ. ಈ ಮಾಹಿತಿಯನ್ನು ನವೀನ್‌ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪ್ರವಾದಿ ಮೊಹಮ್ಮದ್‌ ಕುರಿತು ನೂಪುರ್‌ ಶರ್ಮಾ ಹೇಳಿಕೆ ನೀಡಿದ ಸಮಯದಲ್ಲೇ ನವೀನ್‌ ಜಿಂದಾಲ್‌ ಅವರು ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಶಿಸ್ತಿನ ಕ್ರಮವಾಗಿ ಅವರನ್ನು ಬಿಜೆಪಿಯಿಂದ ವಜಾ ಮಾಡಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!