ದೇಶದಲ್ಲಿ ವೈರಸ್ ಹಾವಳಿ, ಮಾಂಸ ಮಾರುಕಟ್ಟೆ ಮೇಲೆ ಸರ್ಕಾರದ ನಿಯಂತ್ರಣ?

By Suvarna NewsFirst Published Sep 23, 2020, 1:43 PM IST
Highlights

ಜನಸಂಖ್ಯಾ ನಿಯಂತ್ರಣ ಸಂಬಂಧ ಲೋಕಸಭೆಯಲ್ಲಿ ಧ್ವನಿ ಎತ್ತಿದ ಬಿಜೆಪಿ ಸಂಸದ| ದೇಶದಲ್ಲಿ ವೈರಸ್ ಹಾವಳಿ, ಮಾಂಸ ಮಾರುಕಟ್ಟೆ ಮೇಲೆ ನಿಯಂತ್ರಣ ಸರ್ಕಾರದ ನಿಯಂತ್ರಣ?| ಶೂನ್ಯ ವೇಳೆಯಲ್ಲಿ ಸರ್ಕಾರಕ್ಕೆ ಬಿಜೆಪಿ ಸಂಸದನ ಹಲವು ಮನವಿ

ನವದೆಹಲಿ(ಸೆ.23): ಬಿಜೆಪಿ ಸಂಸದ ನಿಶಕಾಂತ್ ದುಬೆ ಮಂಗಳವಾರ ಲೋಕಸಭೆಯಲ್ಲಿ ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನು ಹಾಗೂ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಶೂನ್ಯಕಾಲದಲ್ಲಿ ಮಾತನಾಡಿದ ಸಂಸದ ಅಲ್ಲದೇ ಪರಿಶಿಷ್ಟ ಜಾತಿ ಹಾಗೂ ಪಂಗಡದಿಂದ ಮತಾಂತರಗೊಳ್ಳುವವರಿಗೂ ಯಾವುದೇ ಮೀಸಲಾತಿ ನೀಡಬಾರದೆಂದು ಆಗ್ರಹಿಸಿದ್ದಾರೆ.

ಅನೇಕ ಕಡೆ ಹಿಂದುಳಿದ ವರ್ಗದ ಜನರನ್ನು ಮತಾಂತರಗೊಳಿಸುತ್ತಿರುವುದು ಬೆಳಕಿಗೆ ಬಂದಿದೆ. ಹೀಗಘಾಇ ಇಂತಹವರಿಗೆ ಮೀಸಲಾತಿ ಸಿಗದಂತಹ ಕಾನೂನು ಜಾರಿಗೊಳಿಸುವಂತೆ ಆಗ್ರಹಿಸುತ್ತೇನೆ ಎಂದಿದ್ದಾರೆ. ಅಲ್ಲದೇ ಸಂವಿಧಾನದ 370 ನೇ ವಿಧಿ ರದ್ದುಗೊಳಿಸಿದ ಬಳಿಕ ಸದ್ಯ ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೊಳಿಸುವುದೂ ಅತೀ ಅಗತ್ಯವಾಗದೆ ಜೊತೆಗೆ ಸಮಾನ ನಾಗರಿಕ ಸಂಹಿತೆಯನ್ನೂ ಜಾಋಇಗೊಳಿಸುವಂತೆ ಒತ್ತಾಯಿಸಿದ್ದಾರೆ.

ತ್ರಿವಳಿ ತಲಾಖ್‌, 370ನೇ ವಿಧಿ ರದ್ದತಿ ಬೆನ್ನಲ್ಲೇ ಏಕರೂಪ ನಾಗರಿಕ ಸಂಹಿತೆ ಜಾರಿ?

ಇದನ್ನು ಹೊರತುಪಡಿಸಿ ಅನೇಕ ವೈರಸ್‌ಗಳು ಹಕ್ಕಿ ಹಾಗೂ ಕ್ರಮಿ ಕೀಟಗಳಿಂದ ಮನುಷ್ಯರಿಗೆ ಹರಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಾಣಿ ಮತ್ತು ಮಾಂಸದ ಮಾರುಕಟ್ಟೆಯನ್ನು ನಿಯಂತ್ರಿಸುವ ಅವಶ್ಯಕತೆಯಿದೆ ಈ ನಿಟ್ಟಿನಲ್ಲೂ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. 

ಏನಿದು ಏಕರೂಪ ನಾಗರಿಕ ಸಂಹಿತೆ?

ಹಿಂದು, ಮುಸ್ಲಿಂ, ಕ್ರೈಸ್ತ ಸೇರಿದಂತೆ ದೇಶದಲ್ಲಿರುವ ಎಲ್ಲ ಧರ್ಮಗಳಿಗೂ ಸೇರಿದ ನಾಗರಿಕರಿಗೆ ಅನ್ವಯವಾಗುವ ಒಂದೇ ರೀತಿಯ ವೈಯಕ್ತಿಕ ಕಾನೂನು. ವಿವಾಹ, ವಿಚ್ಛೇದನ, ಆಸ್ತಿ ಹಂಚಿಕೆ, ಉತ್ತರಾಧಿಕಾರಿ ನೇಮಕ ವಿಚಾರವಾಗಿ ಹಿಂದು, ಮುಸ್ಲಿಮರಲ್ಲಿ ಪ್ರತ್ಯೇಕ ವೈಯಕ್ತಿಕ ಕಾನೂನುಗಳಿವೆ. ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದರೆ ಅಂತಹ ಎಲ್ಲ ಕಾಯ್ದೆಗಳೂ ರದ್ದಾಗಿ, ದೇಶಾದ್ಯಂತ ಎಲ್ಲ ಧರ್ಮೀಯರಿಗೂ ಒಂದೇ ಕಾಯ್ದೆ ಬರುತ್ತದೆ.

click me!