
ಲಕ್ನೋ(ಜೂ.06): ಉತ್ತರ ಪ್ರದೇಶದ ರಾಜಕೀಯ ಅಖಾಡದಲ್ಲಿ ಚುನಾವಣೆ ಸಂಬಂಧ ಪ್ರಮುಖ ಚರ್ಚೆಗಳು ಆರಂಭವಾಗಿವೆ. ಹೌದು ಈಗ ಮುಲಾಯಂ ಅವರ ಕಿರಿಯ ಸೊಸೆ ಅಪರ್ಣಾ ಯಾದವ್‌ಗೆ ಬಿಜೆಪಿ ಎಸ್‌ಎಲ್‌ಸಿ ಟಿಕೆಟ್ ನೀಡಬಹುದು ಎಂಬ ಊಹಾಪೋಹಗಳು ಎದ್ದಿವೆ. 9 ಸ್ಥಾನಗಳಲ್ಲಿ ಬಿಜೆಪಿ MLC ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂಬುವುದು ಉಲ್ಲೇಖನೀಯ. ಮೂಲಗಳ ಪ್ರಕಾರ ಜೂನ್ 7ರೊಳಗೆ ಬಿಜೆಪಿಯ ಎಂಎಲ್ ಸಿ ಅಭ್ಯರ್ಥಿಗಳ ಪಟ್ಟಿ ಬರಬೇಕಿದೆ. 7 ಸ್ಥಾನಗಳಿಗೆ ಹೆಸರು ಅಂತಿಮಗೊಂಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬಿಜೆಪಿ 7 ಎಂಎಲ್‌ಸಿ ಆಗಲಿದೆ
ಯೋಗಿ ಸರ್ಕಾರದಲ್ಲಿ, 7 ಸಚಿವರು ಎಂಎಲ್‌ಸಿಗಳಾಗುವುದು ಬಹುತೇಕ ಖಚಿತವಾಗಿದೆ. ಇದರಲ್ಲಿ ಭೂಪೇಂದ್ರ ಚೌಧರಿ, ಜೆಪಿ ಎಸ್ ರಾಥೋಡ್, ಕೇಶವ್ ಪ್ರಸಾದ್ ಮೌರ್ಯ, ನರೇಂದ್ರ ಕಶ್ಯಪ್, ಡ್ಯಾನಿಶ್ ಆಜಾದ್ ಮತ್ತು ಜಸ್ವಂತ್ ಸೈನಿ ಹೆಸರು ಸೇರಿದೆ. ಠಾಕೂರ್ ಸಮಾಜದಿಂದ ಬರುವ ಜೆಪಿಎಸ್ ರಾಥೋಡ್ ಪರಿಷತ್ತಿಗೆ ತೆರಳಲು ಸಜ್ಜಾಗಿದ್ದಾರೆ. 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಈ ಹಿನ್ನೆಲೆಯಲ್ಲಿ ಜಾತಿ, ರಾಜಕೀಯ ಸಮೀಕರಣಗಳನ್ನು ಮುಂದಿಟ್ಟುಕೊಂಡು ಮತದಾರರನ್ನು ತಲುಪುವ ಕಸರತ್ತಿನಲ್ಲಿಯೂ ಪಕ್ಷ ತೊಡಗಿದೆ. ಈ ಬಗ್ಗೆ ಪಕ್ಷ ಚಿಂತನೆ ನಡೆಸಿದೆ.
ವಿಧಾನ ಪರಿಷತ್ತಿನ 13 ಸ್ಥಾನಗಳಿಗೆ ಚುನಾವಣೆ
ವಿಧಾನ ಪರಿಷತ್ತಿನ 13 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇದರಲ್ಲಿ ಎಸ್ಪಿ 4 ಮತ್ತು ಬಿಜೆಪಿ 9 ಸ್ಥಾನ ಪಡೆಯುವುದು ಖಚಿತವಾಗಿದೆ. ಅದೇ ಸಮಯದಲ್ಲಿ, ನಾಮನಿರ್ದೇಶಿತ ಕೋಟಾದ ಆರು ಸ್ಥಾನಗಳಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಅವಕಾಶ ಸಿಗುತ್ತದೆ. ಎರಡು ಸ್ಥಾನಗಳ ಉಪಚುನಾವಣೆಯಲ್ಲಿಯೂ ಬಿಜೆಪಿ ಗೆಲುವು ಬಹುತೇಕ ಖಚಿತ ಎಂದು ಪರಿಗಣಿಸಲಾಗಿದೆ.
ಯಾವ ಸದಸ್ಯರ ಅಧಿಕಾರಾವಧಿ ಕೊನೆಗೊಳ್ಳುತ್ತದೆ?
ಹಲವು ನಾಯಕರ ಅಧಿಕಾರಾವಧಿ ಇದೇ ಜುಲೈ 6ಕ್ಕೆ ಕೊನೆಗೊಳ್ಳಲಿದೆ. ಬಿಜೆಪಿಯಿಂದ ಕೇಶವ್ ಪ್ರಸಾದ್ ಮೌರ್ಯ, ಭೂಪೇಂದ್ರ ಸಿಂಗ್ ಮತ್ತು ಯೋಗಿ ಆದಿತ್ಯನಾಥ್ ಅವರಲ್ಲದೆ, ಕಾಂಗ್ರೆಸ್‌ನಿಂದ ದೀಪಕ್ ಸಿಂಗ್ ಅವರ ಅಧಿಕಾರಾವಧಿಯೂ ಕೊನೆಗೊಳ್ಳುತ್ತಿದೆ. ಇದಕ್ಕೂ ಮುನ್ನ ದೆಹಲಿಯಲ್ಲಿ ಬಿಜೆಪಿ ಯುಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಮತ್ತು ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಸಮ್ಮುಖದಲ್ಲಿ ಅಪರ್ಣಾ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಇದಾದ ನಂತರ ಅವರು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಮತ್ತು ಸಿಎಂ ಯೋಗಿ ಅವರನ್ನು ಭೇಟಿಯಾದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ