ಸಂಸತ್ ದಾಳಿ ಮಾಸ್ಟರ್ ಮೈಂಡ್ ಲಲಿತ್ ಝಾ ಜೊತೆ ಟಿಎಂಸಿ ನಾಯಕನ ಫೋಟೋ ವೈರಲ್!

Published : Dec 15, 2023, 05:10 PM IST
ಸಂಸತ್ ದಾಳಿ ಮಾಸ್ಟರ್ ಮೈಂಡ್ ಲಲಿತ್ ಝಾ ಜೊತೆ ಟಿಎಂಸಿ ನಾಯಕನ ಫೋಟೋ ವೈರಲ್!

ಸಾರಾಂಶ

ಸಂಸತ್ ಭವನದ ಮೇಲೆ ಹೊಗೆ ಬಾಂಬ್ ದಾಳಿ ನಡೆಸಿದ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ ಈ ದಾಳಿಯ ಮಾಸ್ಟರ್ ಮೈಂಡ್ ಲಲಿತ್ ಝಾ ವಿಚಾರಣೆ ತೀವ್ರಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಟಿಎಂಸಿ ನಾಯಕನ ಜೊತೆ ಆರೋಪಿ ಲಲಿತ್ ಝಾ ಫೋಟೋವನ್ನು ಬಿಜೆಪಿ ಬಹಿರಂಗಪಡಿಸಿದೆ. ಇದು ಭಾರಿ ಕೋಲಾಹಲಕ್ಕೆ ಕಾರಣವಾಗಿದೆ.  

ನವದೆಹಲಿ(ಡಿ.15) ಸಂಸತ್ ಭವದನ ಮೇಲೆ ದಾಳಿ ಮಾಡಿದ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಕೆಲ ಸ್ಪೋಟಕ ಮಾಹಿತಿಗಳು ಬಹಿರಂಗವಾಗಿದೆ. ಈ ವಿಚಾರಣೆ ಬೆನ್ನಲ್ಲೇ ದಾಳಿಯ ಮಾಸ್ಟರ್ ಮೈಂಡ್ ಲಲಿತ್ ಝಾ , ಟಿಎಂಸಿ ನಾಯಕ ತಪಸ್ ರಾಯ್ ಜೊತೆಗಿನ ಫೋಟೋವನ್ನು ಭಾರಿ ಕೋಲಾಹಲ ಸೃಷ್ಟಿಸಿದೆ. ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುಕಾಂತ ಮುಜುಮ್ದಾರ್ ಈ ಫೋಟೋವನ್ನು ಬಹಿರಂಗಪಡಿಸಿದ್ದಾರೆ. ಇಷ್ಟೇ ಅಲ್ಲ ಸಂಸತ್ ದಾಳಿಯ ಆರೋಪಿ ಲಲಿತ್ ಝಾ ಹಾಗೂ ಟಿಎಂಸಿ ನಾಯಕ ಕಳೆದ ಹಲವು ದಿನಗಳಿಂದ ಆಪ್ತರಾಗಿದ್ದಾರೆ. ತನಿಖೆಗೆ ಈ ಸಾಕ್ಷ್ಯ ಸಾಕಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಸಂಸತ್ ಭವನದ  ಮೇಲೆ ದಾಳಿ ನಡೆಸಿದ ಆರೋಪಿಗಳ ಪೈಕಿ ಲಲಿತ್ ಝಾ ಮಾಸ್ಟರ್ ಮೈಂಡ್ ಆಗಿದ್ದಾರೆ. ಆದರೆ ಈತ ಟಿಎಂಸಿ ನಾಯಕ ತಪಸ್ ರಾಯ್ ಜೊತೆ ಹಲವು ದಿನಗಳಿಂದ ಆಪ್ತರಾಗಿದ್ದಾರೆ. ಇದು ಪ್ರಕರಣದ ತನಿಖೆಗೆ ಸಾಕ್ಷ್ಯವಾಗುವುದಿಲ್ಲವೇ ಎಂದು ಬಿಜೆಪಿ ನಾಯಕ ಸುಕಾಂತ ಮುಜುಮ್ದಾರ್ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ. 

ಸಂಸತ್‌ ಸ್ಮೋಕ್‌ ಬಾಂಬ್ ದಾಳಿ ಮಾಸ್ಟರ್‌ ಮೈಂಡ್‌ ಲಲಿತ್ ಝಾ ಅರೆಸ್ಟ್‌

ಸುಕಾಂತ ಮುಜುಮ್ದಾರ್ ಬಹಿರಂಗ ಮಾಡಿದ ಫೋಟೋ ಭಾರಿ ವೈರಲ್ ಆಗಿದೆ. ಇಷ್ಟೇ ಅಲ್ಲ ಪ್ರಕರಣದ ಹಿಂದೆ ಟಿಎಂಸಿ ನಾಯಕರ  ಲಿಂಕ್ ಅನುಮಾನಗಳು ವ್ಯಕ್ತವಾಗತೊಡಗಿದೆ. ಇದರ ಬೆನ್ನಲ್ಲೇ ತಪಸ್ ರಾಯ್ ಸ್ಪಷ್ಟನೆ ನೀಡಿದ್ದಾರೆ. ನನಗೆ ಆತನ ಬಗ್ಗೆ  ನನಗೆ ಗೊತ್ತಿಲ್ಲ, ಅರೆಸ್ಟ್ ಆಗಿದ್ದಾನೆ ಅನ್ನೋ ಮಾಹಿತಿ ಸಿಕ್ಕಿದೆ. ಬಿದೆಪಿ ಈ ಫೋಟೋ ಹಿಡಿದು ಏನು ಮಾಡಲು ಹೊರಟಿದೆ. ನನ್ನ ಜೊತೆಗಿರುವ ಇತರ ಫೋಟೋಗಳಿವಯೇ? ಇದಕ್ಕೆ ಪೂರಕ ಸಾಕ್ಷ್ಯಗಳಿವೇ?  ತಪಸ್ ರಾಯ್ ತಿರುಗೇಟು ನೀಡಿದ್ದಾರೆ. ಇಷ್ಟೇ ಅಲ್ಲ ಈ ಕುರಿತು ಬಿಜೆಪಿ ವಿರುದ್ದ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

 

 

ಇದೇ ಫೋಟೋದಲ್ಲಿ ಮತ್ತೋರ್ವ ಟಿಎಂಸಿ ನಾಯಕ ಸೌಮ್ಯ ಭಕ್ಷ್ ಕೂಡ ಇದ್ದಾರೆ. ಈ ಕುರಿತು ಸೌಮ್ಯ ಭಕ್ಷ್ ಈ ಫೋಟೋ ನಿಜ ಎಂದು ಖಚಿತಪಡಿಸಿದ್ದಾರೆ. ಆದರೆ ಫೋಟೋದಲ್ಲಿರುವ ವ್ಯಕ್ತಿ ಲಲಿತ್ ಝಾ ಯಾರು ಅನ್ನೋದೇ ಗೊತ್ತಿಲ್ಲ ಎಂದಿದ್ದಾರೆ. ಸಮಾರಂಭದಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ. ಫೋಟೋದಲ್ಲಿರುವ ವ್ಯಕ್ತಿಯ ಜೊತೆಗೆ ಯಾವುದೇ ಸಂಪರ್ಕವಿಲ್ಲ ಎಂದಿದ್ದಾರೆ. 

 

News Hour: ಕ್ರಾಂತಿಕಾರಿ ಹುಚ್ಚಿನಲ್ಲಿ ದೇಶದ ಹೃದಯಕ್ಕೆ ಸ್ಮೋಕ್‌ ಬಾಂಬ್‌ ಎಸೆದು ದುಷ್ಕೃತ್ಯ!

ಮಧ್ಯಾಹ್ನ 1 ಗಂಟೆ. ಲೋಕಸಭೆ ಕಲಾಪ ನಡೆಯುತ್ತಿತ್ತು. ಈ ಇಬ್ಬರು ಸಾರ್ವಜನಿಕರ ಗ್ಯಾಲರಿಯಿಂದ ಕಲಾಪ ನಡೆಯುವ ಸ್ಥಳಕ್ಕೆ (ಚೇಂಬರ್‌ಗೆ) ಹಾರಿದ್ದಾರೆ. ಒಬ್ಬ ಮೊದಲು ಜಿಗಿದರೆ ಇನ್ನೊಬ್ಬ ಮೇಲಿನಿಂದ ಕೆಲ ಸಮಯ ನೇತಾಡಿ ಕೆಳಗೆ ಜಿಗಿದಿದ್ದಾನೆ ಹಾಗೂ ಬೆಂಚುಗಳ ನಡುವೆ ನೆಗಯುತ್ತ ಮುಂದೆ ನುಗ್ಗಿದ್ದಾನೆ. ನೇತಾಡುವ ವ್ಯಕ್ತಿಯು ತನ್ನ ಕೈಯಲ್ಲಿ ಹೋಳಿ ಹಬ್ಬದ ವೇಳೆ ಬಳಸಲಾಗುವ ಡಬ್ಬಿಗಳಲ್ಲಿನ ಹಳದಿ ಬಣ್ಣ ಮಿಶ್ರಿತ ಹೊಗೆಯನ್ನು ಲೋಕಸಭೆಯಲ್ಲಿ ಬಿಟ್ಟಿದ್ದಾನೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು