ಸ್ವಾಮಿ ವಿವೇಕಾನಂದ ಯೂನಿವರ್ಸಿಟಿಯಾಗುತ್ತಾ JNU? ಭಾರೀ ಸಂಚಲನ!

By Suvarna NewsFirst Published Nov 16, 2020, 5:49 PM IST
Highlights

ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯ ಹಲವು ಕಾರಣಗಳಿಂದ ಸುದ್ದಿಯಾಗಿದೆ. ಎಡಪಂಥಿಯ ನಿಲುವು ಸೇರಿದಂತೆ ಹಲವು ಆರೋಪಗಳು JNU ವಿದ್ಯಾದೇಗುಲದ ಮೇಲಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ JNU ವಿಶ್ವವಿದ್ಯಾನಿಲಿಯ ಕ್ಯಾಂಪಸ್‌ನಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣ ಮಾಡಿದ್ದರು. ಇದೀಗ ವಿಶ್ವವಿದ್ಯಾನಿಲಯ ಸ್ವಾಮಿ ವಿವೇಕಾನಂದ ವಿಶ್ವವಿದ್ಯಾನಿಲಯ ಎಂದು ಮರುನಾಮಕರಣಗೊಳ್ಳುತ್ತಿದೆಯಾ? ಇಲ್ಲಿದೆ ವಿವರ
 

ಬೆಂಗಳೂರು(ನ.16):  ಪ್ರಧಾನಿ ನರೇಂದ್ರ ಮೋದಿ ಇತ್ತೀಚಗೆ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲದ ಕ್ಯಾಂಪಸ್‌ನಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣ ಮಾಡಿದ್ದರು. ಪರ ವಿರೋಧದ ನಡುವೆ JNU ಕ್ಯಾಂಪಸ್‌ನಲ್ಲಿ ವಿವೇಕಾನಂದರ ಪ್ರತಿಮೆ ಅನಾವರಣಗೊಂಡಿತ್ತು. ಇದೀಗ ಜವಾಹರ್ ಲಾಲ್ ವಿಶ್ವವಿದ್ಯಾನಿಲಯವನ್ನು ಸ್ವಾಮಿ ವಿವೇಕಾನಂದ ವಿಶ್ವವಿದ್ಯಾನಿಲಯ ಎಂದು ಮರುನಾಮಕರಣ ಮಾಡುವುದು ಸೂಕ್ತ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.

It is Swami Vivekananda who stood for the "Idea of Bharat". His philosophy & values signify the "Strength of Bharat".

It is only right that Jawaharlal Nehru University be renamed as Swami Vivekananda University.

Life of Bharat's patriotic Saint will inspire generations to come.

— C T Ravi 🇮🇳 ಸಿ ಟಿ ರವಿ (@CTRavi_BJP)

ರಾಜ್ಯದ ಮುಖ್ಯಮಂತ್ರಿ ಬದಲಾವಣೆ ವಿಚಾರ : ಸಿ.ಟಿ.ರವಿ ರಿಯಾಕ್ಷನ್

ಟ್ವಿಟರ್ ಮೂಲರ ಸಿಟಿ ರವಿ ಇದೀಗ JNU ಮರುನಾಮಕರಣದ ಬಾಂಬ್ ಸಿಡಿಸಿದ್ದಾರೆ.  ಸ್ವಾಮಿ ವಿವೇಕಾನಂದರು  ಭಾರತ ಪರಿಕಲ್ಪನೆಯನ್ನು ಹುಟ್ಟು ಹಾಕಿದರು. ವಿವೇಕಾನಂದರ ತತ್ವ, ಜೀವನ ಮೌಲ್ಯಗಳು ಭಾರತದ ಶಕ್ತಿಯಾಗಿದೆ. ಇದೀಗ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯವನ್ನು ಸ್ವಾಮಿ ವಿವೇಕಾನಂದ ವಿಶ್ವವಿದ್ಯಾನಿಲಯ ಎಂದು ಮರುನಾಮಕರಣ ಮಾಡುವುದು ಸರಿಯಾಗಿದೆ. ದೇಶಭಕ್ತ ಸಂತ ಸ್ವಾಮಿ ವಿವೇಕಾನಂದರ ಆದರ್ಶಗಳು ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಿದೆ ಎಂದು ಸಿಟಿ ರವಿ ಟ್ವೀಟ್ ಮಾಡಿದ್ದಾರೆ.

JNU ಕ್ಯಾಂಪಸ್‌ನಲ್ಲಿ ವಿವೇಕಾನಂದರ ಪ್ರತಿಮೆ ಅನಾವರಣ ಮಾಡಿದ ಮೋದಿ!

ಪ್ರಧಾನಿ ನರೇಂದ್ರ ಮೋದಿ JNU ಯುನಿವರ್ಸಿಟಿಯಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣ ಮಾಡಿದ ಬೆನ್ನಲ್ಲೇ ವಿಶ್ವವಿದ್ಯಾನಿಲಯ ಹೆಸರ ಬದಲಾವಣೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆದಿತ್ತು. ಇನ್ನು ಪ್ರತಿಮೆ ಅನಾವರಣಕ್ಕೂ ಪರ ವಿರೋಧಗಳು ಕೇಳಿ ಬಂದಿತ್ತು. ಕೇಂದ್ರ ಸರ್ಕಾರದ ನಿರ್ಧಾರವನ್ನು ಹಲವರು ಸ್ವಾಗತಿಸಿದ್ದರೆ , ಕೆಲವರು ವಿರೋಧಿಸಿದ್ದರು.

ಜೆಎನ್‌ಯು ಕನ್ನಡ ಪೀಠ ರದ್ದಿಲ್ಲ: ಸಚಿವ ರವಿ ಸ್ಪಷ್ಟನೆ

ಗೋ ಬ್ಯಾಕ್ ಮೋದಿ ಎಂಬು ಘೋಷ ವಾಕ್ಯಗಳು ಮೊಳಗಿತ್ತು. ಇದೀಗ ಸಿಟಿ ರವಿ ಟ್ವಿಟರ್ ಪೋಸ್ಟ್‌ಗೆ ಪರ ವಿರೋಧಗಳು ವ್ಯಕ್ತವಾಗಿದೆ.  ಹೊಸ ವಿಶ್ವವಿದ್ಯಾನಿಲಯ ಸ್ಥಾಪಿಸಿ ಅದಕ್ಕೆ ಸ್ವಾಮಿ ವಿವೇಕಾನಂದರ ಹೆಸರಿಡಲು ಸಾಮಾಜಿಕ ಜಾಲತಾಣದಲ್ಲಿ ಸೂಚಿಸಿದ್ದಾರೆ

click me!