ಗುಜರಾತ್‌ನಲ್ಲಿ ಗೆಲುವಿನತ್ತ ಬಿಜೆಪಿ ನಾಗಾಲೋಟ: ಹಲವೆಡೆ ಸಂಭ್ರಮಾಚರಣೆ ಶುರು

Published : Dec 08, 2022, 11:10 AM ISTUpdated : Dec 08, 2022, 11:28 AM IST
ಗುಜರಾತ್‌ನಲ್ಲಿ ಗೆಲುವಿನತ್ತ ಬಿಜೆಪಿ ನಾಗಾಲೋಟ: ಹಲವೆಡೆ ಸಂಭ್ರಮಾಚರಣೆ ಶುರು

ಸಾರಾಂಶ

ಗುಜರಾತ್ ಚುನಾವಣೆಯ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು, ಬಿಜೆಪಿ ಗೆಲುವಿನ ನಾಗಲೋಟದೊಂದಿಗೆ ಮುನ್ನುಗ್ಗುತ್ತಿದೆ. 182 ವಿಧಾನಸಭಾ ಕ್ಷೇತ್ರಗಳಿರುವ ಗುಜರಾತ್‌ನಲ್ಲಿ ಬಿಜೆಪಿ 152 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಸತತ 7ನೇ ಬಾರಿ ಗೆದ್ದು ದಾಖಲೆ ಬರೆಯಲು ಸಿದ್ಧವಾಗಿದೆ.

ಅಹ್ಮದಾಬಾದ್: ಗುಜರಾತ್ ಚುನಾವಣೆಯ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು, ಬಿಜೆಪಿ ಗೆಲುವಿನ ನಾಗಲೋಟದೊಂದಿಗೆ ಮುನ್ನುಗ್ಗುತ್ತಿದೆ. 182 ವಿಧಾನಸಭಾ ಕ್ಷೇತ್ರಗಳಿರುವ ಗುಜರಾತ್‌ನಲ್ಲಿ ಬಿಜೆಪಿ 152 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಸತತ 7ನೇ ಬಾರಿ ಗೆದ್ದು ದಾಖಲೆ ಬರೆಯಲು ಸಿದ್ಧವಾಗಿದೆ. ಇತ್ತ ಬಿಜೆಪಿ ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಂತೆ ಟ್ವಿಟ್ಟರ್‌ನಲ್ಲಿ ಗುಜರಾತ್ ಇಲೆಕ್ಷನ್ ಟ್ರೆಂಡಿಂಗ್‌ನಲ್ಲಿದ್ದು ಮೀಮ್ಸ್‌ಗಳ ಮಳೆ ಸುರಿಯುತ್ತಿದೆ. 

ಇತ್ತ ಗುಜರಾತ್‌ನಲ್ಲಿ ಬಿಜೆಪಿ ಭಾರಿ ಮುನ್ನಡೆ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಇದು ಪ್ರಧಾನಿಯವರ ಗುಜರಾತ್ ಮಾದರಿಗೆ ಘೋಷಣೆಗೆ ಜನರಿಂದ ಸಿಕ್ಕಿದ ಅನುಮೋದನೆ. ಗುಜಾರಾತ್ ಮಾದರಿಯನ್ನು ದೇಶದ ಮುಂದಿಡಲು ಸಿಕ್ಕಂತಹ ಒಪ್ಪಿಗೆ ಇದಾಗಿದೆ ಎಂದಿದ್ದಾರೆ. 

ಹಾಗೆಯೇ ಗುಜರಾತ್‌ನ ಮೊರ್ಬಿ ಸೇತುವೆ ದುರಂತದ ವೇಳೆ ಜನರನ್ನು ರಕ್ಷಿಸಿದ, ಮೊರ್ಬಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕಾಂತಲಾಲ್ ಅಮೃತಿಯಾ ( Kantilal Amrutia) ಅವರು 10,156 ಮತಗಳ ಮುನ್ನಡೆಯೊಂದಿಗೆ ಗೆಲುವಿಗೆ ಮುನ್ನಡಿ ಬರೆದಿದ್ದಾರೆ. ಇವರು ಸೇತುವೆ ದುರಂತದ ವೇಳೆ ಹಲವರನ್ನು ರಕ್ಷಿಸಿ ನಿಜವಾದ ಜನನಾಯಕ ಎನಿಸಿದ್ದರು. 

ಇದರೊಂದಿಗೆ ಗುಜರಾತ್ ಚುನಾವಣೆಗೆ ಸಂಬಂಧಿಸಿದ ಹಲವು ರೀತಿಯ ನಗು ತರಿಸುವ ಟ್ರೋಲ್‌ಗಳು ಮಿಮ್ಸ್‌ಗಳು ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿವೆ. ಪ್ರತಿ ಚುನಾವಣೆಯಲ್ಲಿ ಗುಜರಾಥ್ ಮತದಾರರು ಎಂದು ಬರೆದು ಗಂಧದ ಕಡ್ಡಿಯಲ್ಲಿ ಮೋದಿ ಫೋಟೋಗೆ ಅರತಿ ಬೆಳಗುತ್ತಿರುವ ವಿಡಿಯೋವೊಂದನ್ನು ಪೋಸ್ಟ್ ಮಾಡಲಾಗಿದೆ. ಮತ್ತೆ ಕೆಲವರು ಹೌ ಇಸ್ ದ ಜೋಶ್ ಎಂದು ಮೋದಿ ಫೋಟೋ ಹಾಕಿ ಕೇಳುತ್ತಿದ್ದಾರೆ. 

ಗುಜರಾತ್‌ನಲ್ಲಿ ಬಿಜೆಪಿ ಗೆಲುವಿನತ್ತ ದಾಪುಗಾಲಿಡುತ್ತಿದ್ದಂತೆ ಹಲವೆಡೆ ಸಂಭ್ರಮಾಚರಣೆ ಜೋರಾಗಿದೆ. ಸಂಭ್ರಮಾಚರಣೆಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!