ಯುಪಿ ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪಟ್ಟಿ ಘೋಷಣೆ, ಸ್ಮೃತಿ ಇರಾನಿ, ಹರ್ದೀಪ್ ಪುರಿಗಿಲ್ಲ ಟಿಕೆಟ್

Published : Oct 05, 2026, 06:26 PM IST
nitin nabin

ಸಾರಾಂಶ

ಯುಪಿ ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಿಸಿದೆ. ಆದರೆ ನಾಯಕಿ ಸ್ಮೃತಿ ಇರಾನಿ, ಸಚಿವ ಹರ್ದೀಪ್ ಸಿಂಗ್ ಪುರಿಗೆ ಅವಕಾಶ ನೀಡಿಲ್ಲ. ಬಿಜೆಪಿ ಆಯ್ಕೆ ಮಾಡಿದ 8 ಅಭ್ಯರ್ಥಿಗಳು ಯಾರೆಲ್ಲಾ?

ನವದೆಹಲಿ (ಅ.05) ರಾಜ್ಯಸಭೆ ಚುನಾವಣೆ ಕಣ ರಂಗೇರುತ್ತಿದೆ. ಯುಪಿ ರಾಜ್ಯಸಭೆ ಚುನಾವಣೆಗೆ ಬಿಜೆಪಿ 8 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ವಿಶೇಷ ಅಂದರೆ ಇತ್ತೀಚೆಗೆ ಬಿಜೆಪಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡ ಸ್ಮೃತಿ ಇರಾನಿ, ಪ್ರತಿ ಬಾರಿ ಯುಪಿ ರಾಜ್ಯಸಭೆಗೆ ಆಯ್ಕೆಯಾಗುತ್ತಿದ್ದ ಸಚಿವ ಹರ್ದೀಪ್ ಸಿಂಗ್ ಪುರಿಗೆ ಈ ಬಾರಿ ಟಿಕೆಟ್ ನೀಡಿಲ್ಲ. ಈ ಬಾರಿ ಕೆಲ ಅಚ್ಚರಿ ನಿರ್ಧಾರಗಳನ್ನು ಬಿಜೆಪಿ ತೆಗೆದುಕೊಂಡಿದೆ.

ಯುಪಿ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

  1. ಧರ್ಮಪಾಲ್ ಸಿಂಗ್
  2. ರಾಧಾಕಾಂತ್ ಒಜಾ
  3. ಪ್ರಕಾಶ್ ಪಾಲ್
  4. ವಿದ್ಯಾಸಾಗರ್ ಸೊಂಕರ್
  5. ಗೋಪಿ ಕೃಷ್ಣ ಪಾಂಡೆ
  6. ಪ್ರಿಯಾಂಕ ಸಿಂಗ್ ರಾವತ್
  7. ರಾಮ್ ಪ್ರತಾಪ್ ಸಿಂಗ್ ಚೌವ್ಹಾನ್
  8. ಶ್ರುತಿ ಗಂಗ್ವಾರ್

ಯುಪಿ ರಾಜ್ಯಸಭೆಯಲ್ಲಿ ಬಿಜೆಪಿ 115 ಸಂಖ್ಯಾಬಲ ಹೊಂದಿದೆ. ಸದ್ಯ ರಾಜ್ಯಸಭೆಯಿಂದ ನಿವೃತ್ತಿಯಾಗುತ್ತಿರುವ ಬಿಜೆಪಿ ಪ್ರಮುಖ ನಾಯಕರ ಪೈಕಿ ಹರ್ದೀಪ್ ಸಿಂಗ್ ಪುರಿ, ಅರುಣ್ ಸಿಂಗ್, ಗೀತಾ ಶಖ್ಯಾ, ನೀರಜ್ ಶೇಕರ್, ಬ್ರಿಜ್‌ಲಾಲ್, ಬಿಎಲ್ ವರ್ಮಾ ಹಾಗೂ ಸೀಮಾ ದ್ವೇವೇದಿ ಪ್ರಮುಖರಾಗಿದ್ದಾರೆ. ಇನ್ನು ಸಮಾಜವಾದಿ ಪಾರ್ಟಿಯಿಂದ ರಾಮ್ ಗೋಪಾಲ್ ಯಾದವ್ ಹಾಗೂ ಬಿಎಸ್‌ಪಿಯಿಂದ ರಾಮ್ಜಿ ಗೌತಮ್ ನಿವೃತ್ತಿಯಾಗುತ್ತಿದ್ದಾರೆ.

ಸೆಪ್ಟೆಂಬರ್ 11 ರಿಂದ ರಾಜ್ಯಸಭೆಯ ಸಂಸದರಾಗಿದ್ದ ದಿನೇಶ್ ಶರ್ಮಾ ಸ್ಥಾನವೂ ಖಾಲಿ ಇದೆ. ದಿನೇಶ್ ಶರ್ಮಾ ಅವರನ್ನು ಕೇಂದ್ರ ಸರ್ಕಾರ ಅಂಡಮಾನ್ ನಿಕೋಬಾರ್ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಿದೆ. ಹೀಗಾಗಿ ಈ ತೆರವಾದ ಸ್ಥಾನಕ್ಕೂ ಚುನಾವಣೆ ನಡೆಯಲಿದೆ.

ಕಳೆದ ಹಲವು ದಿನಗಳಿಂದ ಬಿಜೆಪಿ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಮೃತಿ ಇರಾನಿ, ಹರ್ದೀಪ್ ಸಿಂಗ್ ಪುರಿ, ಹರೀಶ್ ದ್ವಿವೇದಿ, ಬಿಎಲ್ ವರ್ಮಾ ಹೆಸರುಗಳು ಇರಲಿದೆ ಅನ್ನೋ ಚರ್ಚೆಗಳು ನಡೆಯುತ್ತಿತ್ತು. ಇದೇ ವೇಳೆ ಮಾಜಿ ಸಂಸದರಾದ ಕುಶಾಲ್ ಕಿಶೋರ್ ಹಾಗೂ ಸಂಜೀವ್ ಬಲ್ಯಾನ್ ಹೆಸರು ಕೇಳಿಬಂದಿತ್ತು. ಬಿಜೆಪಿ ಪ್ರಧಾನ ಕಾರ್ಯದರ್ಶಿಗಳನ್ನು ಅಷ್ಟೇ ವೇಗದಲ್ಲಿ ರಾಜ್ಯಸಭೆಗೆ ಕಳುಹಿಸುವ ಪರಿಪಾಠ ಬಿಜೆಪಿಯಲ್ಲಿ ಇಲ್ಲ, ಇದೀಗ ಸ್ಮೃತಿ ಇರಾನಿ ಕಾಯಬೇಕಿದೆ.ಅಥವಾ ಮುಂದಿನ ಲೋಕಸಭೆ ಚುನಾವಣೆಗೆ ಸಜ್ಜಾಗಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ವಿರಾಟ್ ಕೊಹ್ಲಿಗೆ ₹5 ಕೋಟಿ ಹಣ ನೀಡಿ ಆಶ್ರಮಕ್ಕೆ ಕರೆತಂದಿದ್ದರು..' ಪ್ರೇಮಾನಂದ ಮಹಾರಾಜ್ ಆಶ್ರಮದ ಮೇಲೆ ಗಂಭೀರ ಆರೋಪ
CEC ಗ್ಯಾನೇಶ್ ಕುಮಾರ್ ಅಮಾನತು ಆದೇಶ ನಿರಾಕರಿಸಿದ ಸುಪ್ರೀಂ ಕೋರ್ಟ್, ಆಯೋಗಕ್ಕೆ ನೋಟಿಸ್