ಕಾಂಗ್ರೆಸ್‌ ಕಾಲದಲ್ಲಿ ರಫೇಲ್‌ ಕಿಕ್‌ಬ್ಯಾಕ್‌: ಬಿಜೆಪಿ ತಿರುಗೇಟು!

By Suvarna NewsFirst Published Nov 10, 2021, 7:21 AM IST
Highlights

* ಮಧ್ಯವರ್ತಿಗೆ ಲಂಚ ನೀಡಿದ್ದು 2007-2012ರ ಮಧ್ಯೆ

* ಆಗ ಯುಪಿಎ ಅಧಿಕಾರ ಕಾಂಗ್ರೆಸ್‌ಗೆ ತಿರುಗುಬಾಣ!

* ಕಾಂಗ್ರೆಸ್‌ ಕಾಲದಲ್ಲಿ ರಫೇಲ್‌ ಕಿಕ್‌ಬ್ಯಾಕ್‌: ಬಿಜೆಪಿ ತಿರುಗೇಟು

ನವದೆಹಲಿ(ನ.10): ಫ್ರಾನ್ಸ್‌ನಿಂದ ರಫೇಲ್‌ ಯುದ್ಧವಿಮಾನ ಖರೀದಿಸುವಾಗ ಅಕ್ರಮ ನಡೆದಿದೆ ಎಂಬ ಫ್ರೆಂಚ್‌ ಮಾಧ್ಯಮ ವರದಿಯ ಬೆನ್ನಲ್ಲೇ, ವರದಿಯಲ್ಲಿನ ಅಂಶಗಳನ್ನು ಮುಂದಿಟ್ಟುಕೊಂಡೇ ವಿಪಕ್ಷ ಕಾಂಗ್ರೆಸ್‌ ಮೇಲೆ ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ ಪ್ರತಿದಾಳಿ ನಡೆಸಿದೆ. ಫ್ರಾನ್ಸ್‌ನ ‘ಮೀಡಿಯಾಪಾರ್ಟ್‌’ ಹೇಳಿರುವಂತೆ ಮಧ್ಯವರ್ತಿಗೆ ಲಂಚ ನೀಡಿರುವುದು 2007-2012ರ ಅವಧಿಯಲ್ಲಿ. ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದು ಇದ್ದಿದ್ದು ಕಾಂಗ್ರೆಸ್‌ ನೇತೃತ್ವದ ಸರ್ಕಾರ ಎಂದು ಬಿಜೆಪಿ ತಿರುಗೇಟು ನೀಡಿದೆ. ಹೀಗಾಗಿ ಫ್ರಾನ್ಸ್‌ ಮಾಧ್ಯಮ ವರದಿ ಮುಂದಿಟ್ಟುಕೊಂಡು ಬಿಜೆಪಿ ಮೇಲೆ ಮುಗಿಬೀಳಲು ಮುಂದಾಗಿದ್ದ ಕಾಂಗ್ರೆಸ್‌ಗೆ ಇದೀಗ ಅದೇ ವಿಷಯ ತಿರುಗುಬಾಣವಾಗಿದೆ.

ಮೀಡಿಯಾಪಾರ್ಟ್‌ ವರದಿ ಮತ್ತು ಆ ಬಗೆಗಿನ ಕಾಂಗ್ರೆಸ್‌ ದಾಳಿಯ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ, ‘ರಫೇಲ್‌ ಖರೀದಿಗಾಗಿ ಮಧ್ಯವರ್ತಿ ಸುಶೇನ್‌ ಶರ್ಮಾಗೆ 2007ರಿಂದ 2012ರ ನಡುವೆ ಲಂಚ ಸಂದಾಯ ಆಗಿತ್ತು ಎಂದು ಫ್ರೆಂಚ್‌ ಮಾಧ್ಯಮ ಹೇಳಿದೆ. ಆಗ ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಇತ್ತು. ಅದು ಕಾಂಗ್ರೆಸ್‌ ಅಲ್ಲ ‘ಐ ನೀಡ್‌ ಕಮಿಶನ್‌’ (ಕಮಿಶನ್‌ ಬೇಕು) ಪಕ್ಷ. ಹೀಗಿದ್ದಾಗ ಮೋದಿ ಸರ್ಕಾರ ಇದರಲ್ಲಿ ಹೇಗೆ ದೋಷಿಯಾಗುತ್ತದೆ?’ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಈ ಬಗ್ಗೆ ರಾಹುಲ್‌ ಗಾಂಧಿ ಇಟಲಿಯಿಂದ ಪ್ರತಿಕ್ರಿಯಿಸಬೇಕು ಎಂದು ಕಿಚಾಯಿಸಿದ್ದಾರೆ. ಕಳೆದ ಕೆಲ ದಿನಗಳಿಂದ ರಾಹುಲ್‌ ವಿದೇಶ ಯಾತ್ರೆಯಲ್ಲಿದ್ದಾರೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ಪಾತ್ರ ಹೀಗೆ ರಾಹುಲ್‌ ಕಾಲೆಳೆದಿದ್ದಾರೆ.

ಈ ನಡುವೆ ಬಿಜೆಪಿ ಫ್ರಾನ್ಸ್‌ ಮಾಧ್ಯಮ ವರದಿ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ‘2015ರಲ್ಲಿ (ಮೋದಿ ಸರ್ಕಾರ ಇದ್ದಾಗ) ಒಪ್ಪಂದ ಕುರಿತ ರಹಸ್ಯ ದಾಖಲೆಗಳನ್ನು ಮಧ್ಯವರ್ತಿ ಶರ್ಮಾಗೆ ಹಸ್ತಾಂತರಿಸಲಾಗಿದೆ ಎಂದು ಫ್ರೆಂಚ್‌ ಮಾಧ್ಯಮ ಹೇಳಿದೆ. ಹೀಗಿದ್ದಾಗ ತನಿಖೆಗೆ ಸಿಬಿಐ ಹಿಂದೇಟು ಏಕೆ?’ ಎಂದು ಪ್ರಶ್ನಿಸಿದ್ದಾರೆ.

ಮತ್ತೊಂದೆಡೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿ, ‘ಸತ್ಯ ನಿಮ್ಮ ಮುಂದೆ ಇರುವಾಗ ಭ್ರಷ್ಟಬಿಜೆಪಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಹೆದರಬೇಡಿ. ಕಾಂಗ್ರೆಸ್ಸಿಗರು ಅಂಜದೇ ಈ ಬಗ್ಗೆ ಹೋರಾಡಬೇಕು’ ಎಂದು ಕರೆ ನೀಡಿದ್ದಾರೆ.

ಏನಿದು ಪ್ರಕರಣ?

ರಫೇಲ್‌ ಯುದ್ಧವಿಮಾನ ತಯಾರಕ ಫ್ರಾನ್ಸ್‌ನ ಡಸಾಲ್ಟ್‌ ಕಂಪನಿ, ನಕಲಿ ಇನ್‌ವಾಯ್‌್ಸ ಸೃಷ್ಟಿಸಿ 65 ಕೋಟಿ ರು. ಲಂಚವನ್ನು ಮಧ್ಯವರ್ತಿಯೊಬ್ಬನಿಗೆ ನೀಡಿತ್ತು. ಈ ಕುರಿತ ದಾಖಲೆಗಳು ಲಭ್ಯ ಇದ್ದರೂ ಸಿಬಿಐ ಹಾಗೂ ಇ.ಡಿ. ತನಿಖೆಗೆ ನಿರಾಕರಿಸಿದ್ದವು ಎಂದು ಫ್ರೆಂಚ್‌ ಆನ್‌ಲೈನ್‌ ಮಾಧ್ಯಮವಾದ ‘ಮೀಡಿಯಾಪಾರ್ಟ್‌’ ಸೋಮವಾರ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ಆರೋಪಿಸಿತ್ತು. 59 ಸಾವಿರ ಕೋಟಿ ರು. ಮೌಲ್ಯದ 36 ರಫೇಲ್‌ ಯುದ್ಧವಿಮಾನ ಖರೀದಿ ವ್ಯವಹಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಮೀಡಿಯಾಪಾರ್ಟ್‌ ಸರಣಿಯಾಗಿ ತನಿಖಾ ವರದಿಗಳನ್ನು ಪ್ರಕಟಿಸುತ್ತಿದೆ.

ಸತ್ಯವು ನಿಮ್ಮೊಂದಿಗಿರುವಾಗ ಭಯಪಡಬೇಡಿ‌ : ರಾಹುಲ್ ಗಾಂಧಿ

 

2007 ಮತ್ತು 2012 ರ ನಡುವೆ ಭಾರತದೊಂದಿಗೆ ರಫೇಲ್ (Rafale) ಒಪ್ಪಂದವನ್ನು ಭದ್ರಪಡಿಸಿಕೊಳ್ಳಲು ಮಧ್ಯವರ್ತಿಯೊಬ್ಬರಿಗೆ (Agent) ಕಿಕ್‌ಬ್ಯಾಕ್ ಪಾವತಿಸಿದ ಕುರಿತು ಫ್ರೆಂಚ್ ಮಾಧ್ಯಮ ವರದಿ ಮಾಡಿತ್ತು. ಈ ವಿವಾದದ ನಡುವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಮಂಗಳವಾರ ಪ್ರತಿ ಹಂತದಲ್ಲೂ "ಸತ್ಯ ಅವರೊಂದಿಗಿದೆ" ಎಂದು ಹೇಳಿದರು ಮತ್ತು "ಭ್ರಷ್ಟ" ಬಿಜೆಪಿ ಸರ್ಕಾರದ ವಿರುದ್ಧ ಹೋರಾಡುವುದನ್ನು ನಿಲ್ಲಿಸಬೇಡಿ ಅಥವಾ ಅವರಿಗೆ ಭಯಪಡಬೇಡಿ ಎಂದು ತಮ್ಮ ಪಕ್ಷದ ಸಹೋದ್ಯೋಗಿಗಳಿಗೆ ಸಲಹೆ ನೀಡಿದರು.‌

'ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿರಿ!'

"ಪ್ರತಿ ಹೆಜ್ಜೆಯಲ್ಲೂ ಸತ್ಯವು ನಿಮ್ಮೊಂದಿಗಿರುವಾಗ, ಚಿಂತೆ ಮಾಡಲು ಏನಿದೆ? ನನ್ನ ಕಾಂಗ್ರೆಸ್ ಸಹೋದ್ಯೋಗಿಗಳೇ - ಭ್ರಷ್ಟ ಕೇಂದ್ರ ಸರ್ಕಾರದ ವಿರುದ್ಧ ಹೀಗೆಯೇ ಹೋರಾಟ ಮಾಡುತ್ತಿರಿ. ನಿಲ್ಲಬೇಡಿ, ಆಯಾಸಗೊಳ್ಳಬೇಡಿ, ಭಯಪಡಬೇಡಿ, ಎಂದು ಕಾಂಗ್ರೇಸ್‌ ನಾಯಕ ರಾಹುಲ್ ಗಾಂಧಿ "#RafaleScam" ಎಂಬ ಹ್ಯಾಶ್‌ಟ್ಯಾಗ್ ಬಳಸಿ ಹಿಂದಿಯಲ್ಲಿ ಟ್ವಿಟ್‌ ಮಾಡಿದ್ದಾರೆ. 2007 ಮತ್ತು 2012 ರ ನಡುವೆ ಭಾರತದೊಂದಿಗೆ ರಫೇಲ್ ಒಪ್ಪಂದವನ್ನು ಭದ್ರಪಡಿಸಿಕೊಳ್ಳಲು ಮಧ್ಯವರ್ತಿಯೊಬ್ಬರಿಗೆ ಕಿಕ್‌ಬ್ಯಾಕ್ ಪಾವತಿಸಿದ ಕುರಿತು ಫ್ರೆಂಚ್ ಮಾಧ್ಯಮದ ವರದಿಯ ಹಿನ್ನೆಲೆಯಲ್ಲಿ ಈ ಟ್ವೀಟ್ ಬಂದಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ 2004 ಮತ್ತು 2014 ರ ನಡುವೆ ಅಧಿಕಾರದಲ್ಲಿತ್ತು.

ಫ್ರೆಂಚ್ ವಿಮಾನ ತಯಾರಕ ಡಸಾಲ್ಟ್ ಏವಿಯೇಷನ್‌ಗೆ (Dassault Aviation ) ಭಾರತದೊಂದಿಗೆ ರಫೇಲ್ ಒಪ್ಪಂದವನ್ನು ಭದ್ರಪಡಿಸಿಕೊಳ್ಳಲು ಸಹಾಯ ಮಾಡಲು ಮಧ್ಯವರ್ತಿಯೊಬ್ಬರಿಗೆ ಕನಿಷ್ಠ 7.5 ಮಿಲಿಯನ್ ಯುರೋಗಳನ್ನು ರಹಸ್ಯ ಕಮಿಷನ್‌ಗಳ(Commission) ರೂಪದಲ್ಲಿ ಪಾವತಿಸಲು ಸಾಧ್ಯವಾಗುವಂತೆ ನಕಲಿ ಇನ್‌ವಾಯ್ಸ್‌ಗಳನ್ನು (Fake Invoice) ಬಳಸಿದೆ ಎಂದು ತನಿಖಾ ಜರ್ನಲ್ ಮೀಡಿಯಾಪಾರ್ಟ್ ( Mediapart) ಹೇಳಿಕೊಂಡಿದೆ.

'INC ಎಂದರೆ 'ಐ ನೀಡ್‌ ಕಮಿಷನ್' '

ಏತನ್ಮಧ್ಯೆ, ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ (Sambit Patra) ಅವರು ಕಾಂಗ್ರೆಸ್ ನಾಯಕರು ಮತ್ತು ಯುದ್ಧ ವಿಮಾನ ಖರೀದಿಯಲ್ಲಿ ಬಿಜೆಪಿ ಭ್ರಷ್ಟಾಚಾರ ಮಾಡಿರುವ ಆರೋಪ ಮಾಡುತ್ತಿರುವ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರು ತಪ್ಪು ಮಾಹಿತಿ  ನೀಡುವುದರ ಮೂಲಕ ಸುಳ್ಳು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

click me!