ಬೈಕ್‌ನಲ್ಲಿ 'ಸಾರೀ ಗರ್ಲ್ಸ್‌' ಬರಹ: ಪೊಲೀಸರ ಪ್ರಶ್ನೆಗೆ ಉತ್ತರಿಸಲಾಗದೆ ಮಜುಗರಪಟ್ಟು, ನಾಚಿಕೊಂಡ ಹುಡುಗ!

Published : May 05, 2025, 08:09 PM ISTUpdated : May 06, 2025, 09:59 AM IST
ಬೈಕ್‌ನಲ್ಲಿ 'ಸಾರೀ ಗರ್ಲ್ಸ್‌' ಬರಹ: ಪೊಲೀಸರ ಪ್ರಶ್ನೆಗೆ ಉತ್ತರಿಸಲಾಗದೆ ಮಜುಗರಪಟ್ಟು, ನಾಚಿಕೊಂಡ ಹುಡುಗ!

ಸಾರಾಂಶ

ಆಂಧ್ರದಲ್ಲಿ ಬೈಕ್‌ನ ನಂಬರ್‌ ಪ್ಲೇಟ್‌ನಲ್ಲಿ ಹುಡುಗ-ಹುಡುಗಿ ಚುಂಬಿಸುವ ಚಿತ್ರದೊಂದಿಗೆ 'ಸಾರೀ ಗರ್ಲ್ಸ್‌, ಮೈ ಸಿಸ್ಟರ್‌ ಸ್ಟ್ರಿಕ್ಟ್‌' ಎಂಬ ಬರಹವಿತ್ತು. ಟ್ರಾಫಿಕ್‌ ಪೊಲೀಸರ ಪ್ರಶ್ನೆಗೆ ಉತ್ತರಿಸಲಾಗದೆ ಬೈಕ್‌ ಮಾಲೀಕ ನಾಚಿಕೆಪಟ್ಟ ಘಟನೆ ವೈರಲ್‌ ಆಗಿದೆ. ಇಂತಹ ಬರಹಗಳು ವಾಹನ ಮಾಲೀಕರ ವ್ಯಕ್ತಿತ್ವವನ್ನು ಬಿಂಬಿಸುತ್ತವೆ. ಆದರೆ, ನಿಯಮಗಳನ್ನು ಪಾಲಿಸುವುದು ಮುಖ್ಯ.

ಇತ್ತೀಚೆಗೆ ಬೈಕ್‌ ಹಿಂದೆ ಹಾಕಿಸಿಕೊಂಡ ನಂಬರ್‌ಪ್ಲೇಟ್‌ವೊಂದು ಭಾರೀ ಗಮನಸೆಳೆದಿದೆ. ಟ್ರಾಫಿಕ್‌ ಪೊಲೀಸ್‌ ಆ ಬೈಕ್‌ ನಿಲ್ಲಿಸಿ, ನಂಬರ್‌ಪ್ಲೇಟ್‌ ಬರೆದಿರೋ ಬರಹವನ್ನು ಪ್ರಶ್ನೆ ಮಾಡಿದ್ದಾರೆ. ಆಗ ಆ ಬೈಕ್‌ ಓನರ್‌ ಉತ್ತರ ಕೊಡಲಾಗದೆ ನಾಚಿಕೊಂಡಿದ್ದಾರೆ.

ಆಂಧ್ರಪ್ರದೇಶದಲ್ಲಿ ನಡೆದ ಘಟನೆ ಇದು! 
ಬೈಕ್‌ ಹಿಂದೆ ಹುಡುಗ-ಹುಡುಗಿ ಕಿಸ್‌ ಮಾಡುತ್ತಿರುವ ಫೋಟೋ ಇದೆ. ಅಲ್ಲಿ ʼಸಾರಿ ಗರ್ಲ್ಸ್‌ ಮೈ ಸಿಸ್ಟರ್‌ ಈಸ್‌ ವೆರಿ ಸ್ಟ್ರಿಕ್ಟ್‌ʼ ಎಂಬ ಬರಹ ಇದೆ. ಟ್ರಾಫಿಕ್‌ ಸಿಗ್ನಲ್ಸ್‌ ಕೂಡ ಇಲ್ಲಿ ಇದೆ. ಟ್ರಾಫಿಕ್‌ ಪೊಲೀಸ್‌ ಇದೇನು ಎಂದು ಪ್ರಶ್ನೆ ಮಾಡಿದ್ದಾರೆ. ಅದು ಏನು ಎಂದು ಉತ್ತರ ಕೊಡಲು ಬೈಕ್‌ ಮಾಲೀಕ ಪರದಾಡಿದ್ದಾನೆ. ಅವನಿಗೆ ಉತ್ತರ ನೀಡಲು ನಾಚಿಕೆ ಆಗಿದೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಒಟ್ಟಿನಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ಘಟನೆ ಇದು ಎನ್ನಲಾಗಿದೆ.

ಉತ್ತರ ಕೊಡಲಾಗದೆ ನಾಚಿಕೊಂಡ ಹುಡುಗ! 
ಪೊಲೀಸರು ಸಿಂಗಲ್‌ ಆಗಿರಬೇಕು, ಅದಕ್ಕೆ ಇದರ ಅರ್ಥ ಗೊತ್ತಿಲ್ಲ. ಇನ್ನು ಮುಗ್ಧ ಎನ್ನುವ ರೀತಿ ಪೊಲೀಸರು ನಾಟಕ ಮಾಡ್ತಿರಬಹುದು. ನನ್ನ ಬೈಕ್‌, ನನ್ನ ವಿಶ್‌ ಎಂದು ಕೂಡ ಕೆಲವರು ನೆಗೆಟಿವ್‌ ಕಾಮೆಂಟ್‌ ಮಾಡಿದ್ದಾರೆ. ಹುಡುಗ ಉತ್ತರ ಕೊಡಲಾಗದೆ ನಾಚಿಕೊಂಡಿದ್ದಾನೆ ಎಂದು ಕೂಡ ಕೆಲವರು ಕಾಮೆಂಟ್‌ ಮಾಡಿದ್ದಾರೆ. 

ಮಾಲೀಕನ ವ್ಯಕ್ತಿತ್ವ ತಿಳಿಸುತ್ತದೆ
ನಂಬರ್‌ಪ್ಲೇಟ್‌ ಇರಬಹುದು, ಬೈಕ್‌, ಆಟೋದಲ್ಲಿ ಬರೆದುಕೊಳ್ಳುವ ಬರಹಗಳನ್ನು ಓದೋದು ಒಂದು ರೀತಿ ಫನ್‌ ಎನ್ನಬಹುದು. ಕೆಲವರು ಸಿನಿಮಾ ಹೀರೋ, ಹೀರೋಯಿನ್‌ಗಳ ಫೋಟೋ ಹಾಕಿಕೊಳ್ತಾರೆ. ಇನ್ನೂ ಕೆಲವರು ಜೀವನಕ್ಕೆ ಪಾಠ ಹೇಳುವ ವಾಕ್ಯಗಳನ್ನು ಬರೆದುಕೊಳ್ತಾರೆ. ಇನ್ನೂ ಕೆಲವರು ಮುಖಕ್ಕೆ ಹೊಡೆಯುವ ರೀತಿಯಲ್ಲಿ ಕೆಲವರಿಗೆ ಬೈದಿರುತ್ತಾರೆ. ಒಟ್ಟಿನಲ್ಲಿ ಇದನ್ನೆಲ್ಲ ಓದೋದು ಚೆಂದ. ಈ ಬರಹಗಳ ವೆಹಿಕಲ್‌ ಮಾಲೀಕನ ವ್ಯಕ್ತಿತ್ವ ಏನು ಎಂದು ತೋರಿಸುತ್ತದೆ. 

ಒನ್‌ಲೈನ್‌ ಬರಹ!
ಇತ್ತೀಚಿಗೆ ವಾಹನ ಮಾಲೀಕರು ತಮ್ಮ ನಂಬರ್ ಪ್ಲೇಟ್‌ಗಳ ಮೇಲೆ ವಿಚಿತ್ರವಾದ, ಹಾಸ್ಯಮಯವಾದ ಅಥವಾ ಯೋಚಿಸುವಂತಹ ಬರಹಗಳನ್ನು ಬರೆದುಕೊಳ್ಳುತ್ತಾರೆ. ಒನ್-ಲೈನರ್‌ಗಳಿಂದ ಹಿಡಿದು ತಾತ್ವಿಕ ಚಿಂತನೆ ಮಾಡುವಂತಹ ಕಸ್ಟಮೈಸೇಶನ್‌ ಬರಹ ಇಲ್ಲಿ ಇರುವುದು. 

ವಾಹನ ನಂಬರ್ ಪ್ಲೇಟ್‌ಗಳ ಮೇಲೆ ಕ್ರೇಜಿ ಉಲ್ಲೇಖಗಳನ್ನು ಬಳಸುವ ಟ್ರೆಂಡ್ ಸ್ವಯಂ- ಅಭಿವ್ಯಕ್ತಿ ಮತ್ತು ಪರ್ಸನಲ್‌ ಇಂಟರೆಸ್ಟ್‌ ಆಗಿದೆ. ಸೋಶಿಯಲ್‌ ಮೀಡಿಯಾ ಸ್ಟ್ರಾಂಗ್‌ ಆಗುತ್ತಿದ್ದಂತೆ, ಜನರು ತಮ್ಮ ವಿಭಿನ್ನವಾದ ವ್ಯಕ್ತಿತ್ವವನ್ನು ಪ್ರದರ್ಶಿಸಲು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಕಸ್ಟಮೈಸ್ ಮಾಡಿದ ನಂಬರ್ ಪ್ಲೇಟ್‌ಗಳು ಪರ್ಸನಲ್‌ ಆದರೂ ಕೂಡ ಒಂದು ಮೋಜಿನ ಮಾರ್ಗವಾಗಿದ್ದರೂ, ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಬೇಕು. ಅನೇಕ ದೇಶಗಳಲ್ಲಿ, ನಂಬರ್ ಪ್ಲೇಟ್‌ಗಳು ನಿರ್ದಿಷ್ಟ ಮಾರ್ಗಸೂಚಿಗಳನ್ನು ಪಾಲಿಸಬೇಕು, ಇಲ್ಲಿ ಫಾಂಟ್ ಶೈಲಿ, ಗಾತ್ರ ಮತ್ತು ವಿಷಯವೂ ಸೇರಿವೆ. ಮಾಲೀಕರು ತಮ್ಮ ಪ್ಲೇಟ್‌ಗಳು ಆಕ್ಷೇಪಾರ್ಹ ಅಥವಾ ತಪ್ಪುದಾರಿಗೆಡವುವ ಮಾಹಿತಿಯನ್ನು ಹೊಂದಿರದಂತೆ ಖಚಿತಪಡಿಸಿಕೊಳ್ಳಬೇಕು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್