ಬಡಪಾಯಿ ರೈತನಿಗೆ ಬಂಗಲೆ, ಆಡಿ ಕಾರ್ ಖರೀದಿ ಮಾಡುವಷ್ಟು ಕರೆಂಟ್ ಬಿಲ್ ಕೊಟ್ಟ ಸರ್ಕಾರ!

Published : Feb 15, 2025, 04:57 PM ISTUpdated : Feb 15, 2025, 05:14 PM IST
ಬಡಪಾಯಿ ರೈತನಿಗೆ ಬಂಗಲೆ, ಆಡಿ ಕಾರ್ ಖರೀದಿ ಮಾಡುವಷ್ಟು ಕರೆಂಟ್ ಬಿಲ್ ಕೊಟ್ಟ ಸರ್ಕಾರ!

ಸಾರಾಂಶ

ಎರಡು ಕೋಣೆಯ ಮನೆಯನ್ನು ಹೊಂದಿರುವ ಬಡಪಾಯಿ ರೈತನ ಮನೆಗೆ ವಿದ್ಯುತ್ ಇಲಾಖೆಯಿಂದ ಬರೋಬ್ಬರಿ 29 ಕೋಟಿ ರೂ. ಕರೆಂಟ್ ಬಿಲ್ ಕೊಡಲಾಗಿದೆ. ಹೊಸ ಸ್ಮಾರ್ಟ್ ಮೀಟರ್ ಅಳವಡಿಕೆಯಿಂದ ದುಬಾರಿ ಬಿಲ್ ಬಂದಿದ್ದು, ರೈತ ವಿದ್ಯುತ್ ಬಳಸಿದ್ದಾದರೂ ಹೇಗೆ ಎಂಬ ಚರ್ಚೆ ನಡೆಯುತ್ತಿದೆ.

ಸಾಮಾನ್ಯವಾಗಿ ಎರಡು ಕೋಣೆಯ ಮನೆಯಲ್ಲಿ ವಾಸವಾಗಿರುವ ಬಡಪಾಯಿ ರೈತನಿಗೆ ವಿದ್ಯುತ್ ಇಲಾಖೆಯಿಂದ ಬಿಲ್ಲಿಂಗ್ ಮತ್ತು ಮೀಟರ್ ರೀಡಿಂಗ್ ಸೌಲಭ್ಯ ಒದಗಿಸಲು ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಲಾಗಿದೆ. ಈ ಸ್ಮಾರ್ಟ್ ಮೀಟರ್ ಅಳವಡಿಕೆ ಬೆನ್ನಲ್ಲಿಯೇ ರೈತನಿಗೆ ಬರೋಬ್ಬರಿ 29 ಕೋಟಿ ರೂ. ಕರೆಂಟ್ ಬಿಲ್ ನೀಡಲಾಗಿದೆ. ಈ ಬಗ್ಗೆ ಇಡೀ ರಾಜ್ಯದಾದ್ಯಂತ ಭಾರೀ ಚರ್ಚೆ ನಡೆಯುತ್ತಿದೆ. 

ಈ ಘಟನೆ ರಾಜಸ್ಥಾನದ ನೋಖಾದಲ್ಲಿ ನಡೆದಿದೆ. ವಿದ್ಯುತ್ ಇಲಾಖೆಯಿಂದ ಸಾಮಾನ್ಯ 2 ಕೋಣೆಯ ಮನೆಯಲ್ಲಿ ವಾಸವಾಗಿರುವ ಒಬ್ಬ ಗ್ರಾಹಕರಿಗೆ 29 ಕೋಟಿ ರೂ. ಗಿಂತ ಹೆಚ್ಚಿನ ಬಿಲ್ ನೀಡಿದೆ. ಈ ವಿಷಯ ರಾಜಸ್ಥಾನದಲ್ಲಿ ಚರ್ಚೆಯ ವಿಷಯವಾಗಿದೆ. ಇದೀಗ ಈ ಸಾಮಾನ್ಯ ರೈತನ ಬಳಿ ಇಷ್ಟೊಂದು ದೊಡ್ಡಮಟ್ಟದ ಹಣವಿದ್ದರೆ ದೊಡ್ಡದೊಂದು ಬಂಗಲೆ ಹಾಗೂ ಆಡಿ, ಬೆಂಜ್ ಕಾರು ಖರೀದಿ ಮಾಡುತ್ತಿದ್ದನು ಎಂದು ಕೆಲವು ವಿದ್ಯುತ್ ಇಲಾಕೆ ವಿರುದ್ಧ ಜನರು ಕಿಡಿಕಾರಿದ್ದಾರೆ.

ನೋಖಾ ಪಟ್ಟಣದ ನಿವಾಸಿಗೆ ಶಾಕ್: ನೋಖಾ ನಿವಾಸಿ ನವೀನ್ ಅವರಿಗೆ 29 ಕೋಟಿ ರೂ. ಗಿಂತ ಹೆಚ್ಚಿನ ಬಿಲ್ ಬಂದಾಗ ಅವರು ದಂಗಾದರು. ಅವರ ಮೊಬೈಲ್‌ಗೆ 29,12,99,847 ರೂ. ಬಿಲ್ ಬಂದಿದೆ ಎಂದು ಸಂದೇಶ ಬಂದಿತು. ಬಿಲ್ ನೋಡಿದ ನಂತರ ಅವರು ತಕ್ಷಣ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದರು, ಆದರೆ ಯಾರೂ ಕರೆ ಸ್ವೀಕರಿಸಲಿಲ್ಲ. ಈಗ ಅವರು ವಿದ್ಯುತ್ ಇಲಾಖೆ ಕಚೇರಿಗೆ ಹೋಗಿ ದೂರು ನೀಡಲಿದ್ದಾರೆ.

ಇದನ್ನೂ ಓದಿ: ರಾಜ್ಯದ ಜನತೆಗೆ 5 ಲಕ್ಷ ಗೆಲ್ಲುವ ಬಂಪರ್ ಆಫರ್ ಕೊಟ್ಟ ಸರ್ಕಾರ!

3 ಬಲ್ಬ್, 1 ಟಿವಿ, 2 ಫ್ಯಾನ್ ಇರುವ ಮನೆಗೆ 29 ಕೋಟಿ ಬಿಲ್: ಕೆಲವು ತಿಂಗಳ ಹಿಂದೆ ನೋಖಾದಲ್ಲಿ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಲಾಗಿತ್ತು. ಈಗ ಜನರಿಗೆ ಸರಿಯಾದ ಬಿಲ್ ಸಿಗುತ್ತದೆ ಎಂದು ಹೇಳಲಾಗಿತ್ತು. ಆದರೆ ಈ ರೀತಿಯ ಲೋಪದೋಷದಿಂದ ಜನರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇಲಾಖೆ ತಪ್ಪು ಮಾಡಿದರೆ ನಾವು ಶಿಕ್ಷೆ ಅನುಭವಿಸಬೇಕಾ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ನವೀನ್ ಅವರು ಮನೆಯಲ್ಲಿ 6 ಕಿ.ವ್ಯಾ. ಸೋಲಾರ್ ಪ್ಲಾಂಟ್ ಅಳವಡಿಸಿದ್ದಾರೆ. ಪ್ರತಿ ತಿಂಗಳು ಅವರಿಗೆ ಸುಮಾರು 1000 ರೂ. ಮಾತ್ರ ಬಿಲ್ ಬರುತ್ತಿತ್ತು. ಆದರೂ ಇಷ್ಟು ದೊಡ್ಡ ಮೊತ್ತದ ಬಿಲ್ ನೀಡಲಾಗಿದೆ.

ಜೋಧ್‌ಪುರ್ ವಿದ್ಯುತ್ ವಿತರಣಾ ನಿಗಮದಿಂದ ಬಿಲ್: ಜೋಧ್‌ಪುರ್ ವಿದ್ಯುತ್ ವಿತರಣಾ ನಿಗಮ ನೀಡಿರುವ ಈ ಬಿಲ್‌ನ ವಿಶ್ಲೇಷಣೆ ಮಾಡಿದಾಗ, 25 ಕೋಟಿ ರೂ. ಗಿಂತ ಹೆಚ್ಚು ಮೊತ್ತವನ್ನು 'ಎನರ್ಜಿ ಚಾರ್ಜ್' ಎಂದು ನಮೂದಿಸಿರುವುದು ಕಂಡುಬಂದಿದೆ. ಸ್ಮಾರ್ಟ್ ಮೀಟರ್ ರೀಡಿಂಗ್ ತೆಗೆದುಕೊಳ್ಳುವಾಗ ಈ ತಪ್ಪು ಸಂಭವಿಸಿರಬಹುದು ಎಂದು ವಿದ್ಯುತ್ ಇಲಾಖೆ ಅಧಿಕಾರಿಗಳು ಸಬೂಬು ನೀಡುತ್ತಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ 27 ಕೆಜಿ ಚಿನ್ನ,1116 ಕೆಜಿ ಬೆಳ್ಳಿ ಆಭರಣ ವಾಪಸ್ ಕೊಟ್ಟ ಕರ್ನಾಟಕ!

ರಾಜಸ್ಥಾನದಲ್ಲಿ ಇದೇ ಮೊದಲಲ್ಲ: ಇದಕ್ಕೂ ಮೊದಲು ಬಿಲ್‌ಗಳಲ್ಲಿ ತಪ್ಪುಗಳಾಗಿರುವ ಹಲವು ಪ್ರಕರಣಗಳು ವರದಿಯಾಗಿವೆ. ಆದರೆ, ಬರೋಬ್ಬರಿ 29 ಕೋಟಿ ರೂ. ಗಿಂತ ಹೆಚ್ಚಿನ ಬಿಲ್ ನೀಡಿರುವುದು ಇದೇ ಮೊದಲು. ಇಲಾಖೆ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!