10 ವರ್ಷದಿಂದ ಶಾಸಕನಾಗಿರುವ ಕ್ಷೇತ್ರದಲ್ಲೇ ಘಟಬಂದನ್ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್‌ಗೆ ಹಿನ್ನಡೆ

Published : Nov 14, 2025, 12:33 PM IST
tejashwi yadav

ಸಾರಾಂಶ

10 ವರ್ಷದಿಂದ ಶಾಸಕನಾಗಿರುವ ಕ್ಷೇತ್ರದಲ್ಲೇ ಘಟಬಂದನ್ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್‌ಗೆ ಹಿನ್ನಡೆ, ಮಹಾಘಟಬಂದನ್ ಭಾರಿ ಹಿನ್ನಡೆ ಅನುಭವಿಸಿದ ಬೆನ್ನಲ್ಲೇ ಇತ್ತ ತನ್ನ ಸ್ವಂತ ಕ್ಷೇತ್ರ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಲಾಲು ಯಾದವ್ ಪುತ್ರ. 

ಪಾಟ್ನಾ (ನ.14) ಬಿಹಾರ ವಿಧಾನಸಭಾ ಚುನಾವಣೆ ಎತಎಣಿಕೆ ತೀವ್ರ ಕುತೂಹಲ ಕೆರಲಿಸಿದೆ. ಸದ್ಯದ ಚುನಾವಣಾ ಆಯೋಗದ ವರದಿ ಪ್ರಕಾರ ಬಿಜೆಪಿ ನೇತೃತ್ವದ ಎನ್‌ಡಿಎ 190 ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದರೆ, ಆರ್‌ಜೆಡಿ-ಕಾಂಗ್ರೆಸ್ ನೇತೃತ್ವದ ಮಹಾಘಟಬಂದನ್ 49 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ.ಇತ್ತ ಪ್ರಶಾಂತ್ ಕಿಶೋರ್ ನೇತೃತ್ವದ ಜನ ಸುರಾಜ್ ಪಾರ್ಟಿ ಒಂದು ಕ್ಷೇತ್ರದಲ್ಲೂ ಮುನ್ನಡೆ ಸಾಧಿಸಿಲ್ಲ. ಇತರರು ನಾಲ್ಕು ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ. ಬಿಹಾರದಲ್ಲಿ ಭಾರಿ ಬದಲಾವಣೆ ತರುತ್ತೇವೆ ಎಂದಿದ್ದ ಮಹಾಘಟನಬಂದನ್‌ಗೆ ಜನ ಮನ್ನಣೆ ಹಾಕಿದಂತೆ ಕಾಣುತ್ತಿಲ್ಲ. ಮಹಾಘಟಬಂದನ್ ಹಿನ್ನಡೆ ಮಾತ್ರವಲ್ಲ, ಕಳೆದ 10 ವರ್ಷಗಳಿಂದ ಮಹಾಘಟನಬಂದನ್ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ರಘೋಪುರ್ ಕ್ಷೇತ್ರದಲ್ಲಿ ಶಾಸಕನಾಗಿದ್ದಾರೆ. ಆದರೆ ಈ ಕ್ಷೇತ್ರವೂ ತೇಜಸ್ವಿ ಯಾದವ್ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಹ್ಯಾಟ್ರಿಕ್ ಗೆಲುವಿನ ಕನಸು ಭಗ್ನವಾಗುತ್ತಾ?

ರಘೋಪುರ್ ಕ್ಷೇತ್ರದಲ್ಲಿ ಸದ್ಯದ ಮತಎಣಿಕೆ ವರದಿ ಪ್ರಕಾರ ತೇಜಸ್ವಿ ಯಾದವ್ 1,273 ಮತಗಳ ಅಂತರದಿಂದ ಹಿನ್ನಡೆಯಲ್ಲಿದ್ದಾರೆ. ಇತ್ತ ಬಿಜೆಪಿ ಅಭ್ಯರ್ಥಿ ಸತೀಶ್ ಕುಮಾರ್ ಯಾದವ್ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಕಳೆದ ಎರಡು ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಇದೇ ರಘೋಪುರ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. 10 ವರ್ಷಗಳಿಂದ ಈ ಕ್ಷೇತ್ರದ ಶಾಸಕನಾಗಿರುವ ತೇಜಸ್ವಿ ಯಾದವ್ ಈ ಬಾರಿ ಮಹಾಘಟಬಂದನ್ ಜೊತೆ ಇರುವ ಕ್ಷೇತ್ರವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ ಬಾರಿ ಗೆಲುವು ಸಾಧಿಸಿದ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ತೇಜಸ್ವಿ ಯಾದವ್ ಇದೀಗ ಕೈಯಲ್ಲಿದ್ದ ಸ್ಥಾನವೂ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ

ತ್ರಿಕೋನ್ ಫೈಟ್, ಬೆಜೆಪಿಗೆ ಲಾಭ

ರಘೋಪುರ್ ಕ್ಷೇತ್ರದಲ್ಲಿ ಪ್ರತಿ ಬಾರಿ ಆರ್‌ಜೆಡಿ ಹಾಗೂ ಬಿಜೆಪಿ ನಡುವೆ ನೇರಾ ನೇರಾ ಸ್ಪರ್ಧೆ ಎರ್ಪಡುತ್ತಿತ್ತು. ಈ ಸ್ಪರ್ಧೆಯಲ್ಲಿ ಕಳೆದೆರಡು ಬಾರಿ ತೇಜಸ್ವಿ ಯಾದವ್ ಗೆಲುವಿನ ನಗೆ ಬೀರಿದ್ದಾರೆ. ಆದರೆ ಈ ಬಾರಿ ಮಹಾಘಟನಬಂದನ್‌ ಬಗ್ಗೆ ಜನರಿಗಿರುವ ನಿರಾಸಕ್ತಿ ಹಾಗೂ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷದ ಪೈಪೋಟಿಯಿಂದ ತೇಜಸ್ವಿ ಯಾದವ್ ಈ ಬಾರಿ ಭಾರಿ ಹಿನ್ನಡೆಯಲ್ಲಿದ್ದಾರೆ. ಜನ ಸುರಾಜ್ ಪಕ್ಷದ ಚಂಚಲ್ ಸಿಂಗ್ ಪೈಪೋಟಿ ನೀಡಿದ್ದಾರೆ. ಮಹಾಘಟಬಂದನ್ ಮತಗಳ ಒಂದು ಪಾಲರನ್ನು ಜನ ಸೂರಾಜ್ ಕೈವಶ ಮಾಡಿದೆ. ಇದು ತೇಜಸ್ವಿ ಯಾದವ್ ಹಿನ್ನಡೆ ಕಾರಣವಾಗಿದೆ.

2020ರ ಬಿಹಾರ ಚುನಾವಣೆಯಲ್ಲಿ ಇದೇ ರಘೋಪುರ್ ಕ್ಷೇತ್ರದಲ್ಲಿ ತೇಜಸ್ವಿ ಯಾದವ್, ಬಿಜೆಪಿ. ಸತೀಶ್ ಕುಮಾರ್ ಯಾದವ್ ವಿರುದ್ಧ ಗೆಲುವು ಸಾಧಿಸಿದದ್ರು. 38,174 ಮತಗಳ ಅಂತರದಲ್ಲಿ ತೇಜಸ್ವಿ ಯಾದವ್ ಗೆಲುವು ಸಾಧಿಸಿದ್ದರು. ಶೇಕಡಾ 48.74ರಷ್ಟು ಮತಗಳನ್ನು ಪಡೆಯುವ ಮೂಲಕ ಗೆಲುವು ಸಂಭ್ರಮಿಸಿದ್ದರು. ಇಲ್ಲಿ ಸತೀಶ್ ಕುಮಾರ್ 59,230 ಮತಗಳನ್ನು ಪಡೆದಿದ್ದರು. ಸತೀಶ್ ಕುಮಾರ್ ವೋಟ್ ಶೇರ್ 28.64ರಷ್ಟಿತ್ತು. ಜನ್ನು ಲೋಕ ಜನಶಕ್ತಿ ಪಾರ್ಟಿಯ ರಾಕೇಶ್ ರೌಶನ್ 24,947 ಮತಗಳನ್ನು ಪಡೆದಿದ್ದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ