ಕೋಲ್ಕತಾ (ಮೇ.31) ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಕಳೆದುಕೊಂಡಿರುವ ಟಿಎಂಸಿ ಹೇಗಾದರೂ ಮಾಡಿ ಸರ್ಕಾರ ಉರುಳಿಸಲು ಪ್ಲಾನ್ ಮಾಡುತ್ತಿದೆಯಾ? ಜನರನ್ನು ಭಾವನಾತ್ಮಕವಾಗಿ ಬೆಸೆದು ಬೀದಿ ಬೀದಿಯಲ್ಲಿ ಹೋರಾಟ ಮಾಡುವ ಹುನ್ನಾರ ನಡೆಯುತ್ತಿದೆಯಾ ಅನ್ನೋ ಚರ್ಚೆಗಳ ನಡುವೆ ಅಭಿಷೇಕ್ ಬ್ಯಾನರ್ಜಿ ಮೇಲಿನ ದಾಳಿ ಪ್ರಕರಣ ಚರ್ಚೆಗೆ ಮತ್ತಷ್ಟು ಪುಷ್ಠಿ ನೀಡಿದೆ. ಚುನಾವಣೋತ್ತರ ಹಿಂಸಾಚಾರದಲ್ಲಿ ಮೃತಪಟ್ಟ ಯುವಕನ ಮನೆಗೆ ಭೇಟಿ ವೇಳೆ ಅಭಿಷೇಕ್ ಬ್ಯಾನರ್ಜಿ ಮೇಲೆ ದಾಳಿ ನಡೆದಿತ್ತು. ಮೊಟ್ಟೆ ಎಸೆದು, ಕಾಲಿನಿಂದ ಒದ್ದು ಹಲ್ಲೆ ಮಾಡಲಾಗಿತ್ತು. ಈ ಘಟನೆ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಟಿಎಂಸಿ ಆರೋಪಿಸಿತ್ತು. ಆದರೆ ಇದೀಗ ಪ್ರಕರಣದಲ್ಲಿ ಭಾರಿ ತಿರುವು ಸಿಕ್ಕಿದೆ. ಅಭಿಷೇಕ್ ಬ್ಯಾನರ್ಜಿ ಮೇಲೆ ಹಲ್ಲೆ ಮಾಡಿದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಈತ ಟಿಎಂಸಿ ಮಾಜಿ ಶಾಸಕಿ ಲವ್ಲಿ ಮಿತ್ರಾ ಆಪ್ತ ಅನ್ನೋದು ಬೆಳೆಕಿಗೆ ಬಂದಿದೆ.
ಅಭಿಷೇಕ್ ಬ್ಯಾನರ್ಜಿ ಮೇಲೆ ತಾವೇ ಪ್ಲಾನ್ ಮಾಡಿ ಹಲ್ಲೆ ಮಾಡಿ ಬಿಜೆಪಿ ಮೇಲೆ ಹೊರಿಸಿ ಜನರ ವಿಶ್ವಾಸಗಳಿಸಲು ಟಿಎಂಸಿ ಯತ್ನಿಸಿತ್ತಾ ಅನ್ನೋ ಪ್ರಶ್ನೆ ಎದುರಾಗಿದೆ. ಕಾರಣ ಅಭಿಷೇಕ್ ಬ್ಯಾನರ್ಜಿ ಮೇಲೆ ಹಲ್ಲೆ ಮಾಡಿದ ಆರೋಪಿಗಳ ಪೈಕಿ ಐವರನ್ನು ಅರೆಸ್ಟ್ ಮಾಡಲಾಗಿದೆ. ಈ ಪೈಕಿ ವಿಡಿಯೋದಲ್ಲಿ ಸ್ಪಷ್ಟವಾಗಿ ಬ್ಯಾನರ್ಜಿ ಮೇಲೆ ಹಲ್ಲೆ ಮಾಡುತ್ತಿರುವ ಇಬ್ಬರಾದ ತಪನ್ ಮೈಟಿ ಹಾಗೂ ನಿರ್ಮಲಾ ಸೆನಗುಪ್ತ. ಈ ಇಬ್ಬರು ಟಿಎಂಸಿ ಮಾಜಿ ಶಾಸಕಿ ಲವ್ಲಿ ಮಿತ್ರಾ ಜೊತೆಗೆ ಲಿಂಕ್ ಇರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಇನ್ನು ಅರೆಸ್ಟ್ ಆಗಿರುವ ಕಾಜಲ್ ದಾಸ್ ಹಾಗೂ ದೇಬಶಿಶ್ ದತ್ತಾ ಇಬ್ಬರು ಟಿಎಂಸಿ ಮಾಜಿ ಕಾರ್ಪೋರೇಟರ್ ಜೊತೆ ಲಿಂಕ್ ಇರುವುದು ಪತ್ತೆಯಾಗಿದೆ. ಐದನೇ ಆರೋಪಿ ಅಕಾಶ್ ಗಯೆನ್ ಟಿಎಂಸಿ ಕಾರ್ಯಕರ್ತ ಅನ್ನೋದು ಬಹಿರಂಗವಾಗಿದೆ. ಅರೆಸ್ಟ್ ಆಗಿರುವ ಐದೂ ಆರೋಪಿಗಳು ಟಿಎಂಸಿ ಪಾರ್ಟಿ ಜೊತೆ ಲಿಂಕ್ ಇರುವುದು ಬಹಿರಂಗವಾಗಿದೆ.ಅಕಾಶ್ ಗಯೆನ್ ತಾಯಿ ಈ ಕುರಿತು ಮಾತನಾಡಿದ್ದಾರೆ. ಚುನಾವಣೆ ವೇಳೆ ಬೂತ್‌ನಲ್ಲಿ ಕೆಲಸ ಮಾಡುತ್ತಾನೆ. ಟಿಎಂಸಿ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಆಕಾಶ್ ಗಯೆನ್ ತಾಯಿ ಹೇಳಿದ್ದಾರೆ.
ಅರೆಸ್ಟ್ ಆಗಿರುವ ಮತ್ತೊರ್ವ ಆರೋಪಿ ಜೊಯ್ ಸೆನಾಗುಪ್ತ 1999ರಿಂದ ಟಿಎಂಸಿ ಕಾರ್ಯಕರ್ತನಾಗಿ, ಸ್ಥಳೀಯ ಮುಖಂಡನಾಗಿ ಗುರುತಿಸಿಕೊಂಡಿದ್ದಾನೆ. ಜೊಯ್ ಪೋಷಕರು ಬಂಧನ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಜೊಯ್ ಟಿಎಂಸಿ ಮುಖಂಡ ಅನ್ನೋದು ನಿಜ. ಆದರೆ ಅಭಿಷೇಕ್ ಬ್ಯಾನರ್ಜಿ ಮೇಲಿನ ಹಲ್ಲೆ ಪ್ರಕರಣದಲ್ಲಿ ಜೊಯ್ ಇಲ್ಲ. ಪೊಲೀಸರು ಸುಮ್ಮನೆ ಅರೆಸ್ಟ್ ಮಾಡಿದ್ದಾರೆ. ಪೊಲೀಸರ ನಡೆ ಅನುಮಾನ ಮೂಡಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ