ಮಹೀಂದ್ರ ಬೊಲೆರೋ ಜೀಪನ್ನು ಭೋಪಾಲ್‌ನ ಸ್ಟಾರ್ಟ್ಅಪ್ ಕಂಪನಿ ಆಟೋನೋಮಸ್ ತಂತ್ರಜ್ಞಾನ ಬಳಸಿ ಚಾಲಕ ರಹಿತ ವಾಹನವಾಗಿ ಅಭಿವೃದ್ಧಿಪಡಿಸಲಾಗಿದೆ. ವಿಶೇಷ ಅಂದರೆ ವಾಹನ,ಜನ, ಜಾನುವಾರು ಸೇರಿದಂತೆ ಕಿಕ್ಕಿರಿದು ತುಂಬಿದ ರಸ್ತೆಯಲ್ಲಿ ಈ ಡ್ರೈವರ್‌ಲೆಸ್ ವಾಹನ ಪ್ರಯೋಗ ಯಶಸ್ವಿಯಾಗಿದೆ.
ಭೋಪಾಲ್(ಮಾ.12) ಟೆಸ್ಲಾ ಸೇರಿದಂತೆ ಕೆಲ ಕಂಪನಿಗಳು ವಿದೇಶಗಳಲ್ಲಿ ಚಾಲಕ ರಹಿತ ಆಟೋನೋಮಸ್ ಕಾರು ಅಭಿವೃದ್ಧಿಪಡಿಸಿದೆ. ಇದೀಗ ಭಾರತದಲ್ಲಿ ಸ್ಟಾರ್ಟ್ಅಪ್ ಕಂಪನಿಯೊಂದು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಟೆಸ್ಲಾಗೆ ಸೆಡ್ಡು ಹೊಡೆದಿದೆ. ಮಹೀಂದ್ರ ಬೊಲೆರೋ ಜೀಪನ್ನು ಡ್ರೈವರ್‌ಲೆಸ್ ವಾಹನವನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಆಟೋನೋಮಸ್ ವಾಹನವನ್ನು ಜನನಿಬಿಡ ರಸ್ತೆ, ಟ್ರಾಫಿಕ್ ನಿಯಮ ಪಾಲನೆ ಮಾಡದ, ಜಾನುವಾರು, ರಾಂಗ್ ಸೈಡ್ ಡ್ರೈವ್ ರಸ್ತೆಗಳಲ್ಲಿ ಪರೀಕ್ಷೆ ಮಾಡಿ ಯಶಸ್ವಿಯಾಗಿದ್ದಾರೆ.
ಭೋಪಾಲದ ಸ್ವಾಯತ್ ರೊಬೋಟ್ಸ್ ಅನ್ನೋ ಸ್ಟಾರ್ಟ್ಅಪ್ ಕಂಪನಿ ಈ ಡ್ರೈವರ್‌ಲೆಸ್ ವಾಹನ ಅಭಿವೃದ್ಧಿಪಡಿಸಿದೆ. ಮಹೀಂದ್ರ ಬೊಲೆರೋ ವಾಹನಕ್ಕೆ ಸ್ವಾಯತ್ ರೊಬೊಟ್ಸ್ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ತಂತ್ರಜ್ಞಾನದ ಅಟೋನೋಮಸ್ ಟೆಕ್ ಅಳವಡಿಸಿದ್ದಾರೆ. ಬಳಿಕ ಭೋಪಾಲದ ಕಾಲಿ ಮಾತಾ ಮಂದಿರ, ಇತರ ಟ್ಕಾಫಿಕ್ ರಸ್ತೆ, ಟ್ರಾಫಿಕ್ ನಿಯಮ ಪಾಲಿಸದ ರಸ್ತೆಗಳಲ್ಲಿ ಪರೀಕ್ಷೆ ಮಾಡಲಾಗಿದೆ. ಈ ಕುರಿತು ವಿಡಿಯೋವನ್ನು ಸ್ವಾಯತ್ ರೊಬೋಟ್ ಸ್ಟಾರ್ಟ್ಅಪ್ ಕಂಪನಿ ಸಂಸ್ಥಾಪಕ ಸಂಜೀವ್ ಶರ್ಮಾ ಹಂಚಿಕೊಂಡಿದ್ದಾರೆ.
undefined
ಬೆಂಗಳೂರು: ಮೊದಲ ಬಾರಿ ಹಳಿಯಲ್ಲಿ ಓಡಿದ ಡ್ರೈವರ್‌ಲೆಸ್ ಮೆಟ್ರೋ ರೈಲು..!
ಭಾರತದ ರಸ್ತೆಗಳಲ್ಲಿನ ವಾಹನ ದಟ್ಟಣೆ, ಟ್ರಾಫಿಕ್ ನಿಯಮ ಉಲ್ಲಂಘನೆ, ರಸ್ತೆಯಲ್ಲಿ ಜನರು, ಜಾನುವಾರಗಳ ಓಡಾಟವನ್ನು ಗಮನದಲ್ಲಿಟ್ಟುಕೊಂಡು ಈ ಆಟೋನೋಮಸ್ ತಂತ್ರಜ್ಞಾನವನ್ನು ಅಭಿವೃದ್ಧಪಿಡಿಸಿದ್ದಾರೆ. ಪರೀಕ್ಷೆ ವೇಳೆ ಇತರ ವಾಹನಗಳು ನಿಯಮ ಪಾಲನೆ ಮಾಡದೆ ವಿರುದ್ಧ ದಿಕ್ಕಿನಲ್ಲಿ ಸಾಗಿ ಬಂದು ಆಟೋನೋಮಸ್ ಕಾರನ್ನು ವಿಚಲಿತಗೊಳಿಸುವ ಪ್ರಯತ್ನವನ್ನೂ ಮಾಡಲಾಗಿದೆ. ಆದರೆ ಈ ಚಾಲಕ ರಹಿತ ಬೊಲೆರೋ ಯಶಸ್ವಿಯಾಗಿ ಸವಾಲು ಎದುರಿಸಿ ಸಾಗಿದೆ.
ಸ್ವಾಯತ್ ರೋಬೋಟ್ಸ್ ಸ್ಟಾರ್ಟ್ ಅಪ್ ಕಂಪನಿಯ ಇದೀಗ ಈ ತಂತ್ರಜ್ಞಾನಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಒದಗಿಸಲು ಮುಂದಾಗಿದೆ. ವಿಶೇಷ ಅಂದರೆ ವಿದೇಶಗಳ ತಂತ್ರಜ್ಞಾನದ ವೆಚ್ಚಕ್ಕೆ ಹೋಲಿಸಿದರೆ ಸ್ವಾಯತ್ ರೋಬೋಟ್ಸ್ ಸ್ಟಾರ್ಟ್ಅಪ್ ಕಂಪನಿ ಅಭಿವೃದ್ಧಿಪಡಿಸಿದ ಅಟೋನೋಮಸ್ ತಂತ್ರಜ್ಞಾನ ಅಗ್ಗವಾಗಿದೆ. ಕೆಲ ವರ್ಷಗಳ ಕಾಲ ಇದಕ್ಕಾಗಿ ಎಂಜಿನೀಯರ್ಸ್ ಕೆಲಸ ಮಾಡಿ ಯಶಸ್ವಿಯಾಗಿದ್ದಾರೆ.
ಭಾರತದ ಡ್ರೈವರ್ ಲೆಸ್ ಬೈಕ್, ವೈರಲ್ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರ!
ಕೈಗೆಟುಕುವ ದರದಲ್ಲಿ ಆಟೋನೋಮಸ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ಸ್ವಾಯತ್ ರೋಬೋಸ್ಟ್ ಕಂಪನಿ ಇದೀಗ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಮುಂದಾಗಿದೆ. ಇದೀಗ ಭಾರತದ ಸ್ಟಾರ್ಟ್ಅಪ್ ಕಂಪನಿಗೆ ವಿಶ್ವದೆಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆಲ ಅಂತಾರಾಷ್ಟ್ರೀಯ ಆಟೋ ಕಂಪನಿಗಳು ಈ ತಂತ್ರಜ್ಞಾನ ಬಳಸಿಕೊಳ್ಳಲು ಮುಂದಾಗಿದೆ.