Agnipath Protest ಭಾರತ್ ಬಂದ್‌ನಿಂದ 742 ರೈಲು ಸಂಚಾರ ರದ್ದು, ಟಿಕೆಟ್ ಹಣ ಹಿಂಪಡೆಯುವುದು ಹೇಗೆ?

Published : Jun 20, 2022, 03:51 PM IST
Agnipath Protest ಭಾರತ್ ಬಂದ್‌ನಿಂದ 742 ರೈಲು ಸಂಚಾರ ರದ್ದು, ಟಿಕೆಟ್ ಹಣ ಹಿಂಪಡೆಯುವುದು ಹೇಗೆ?

ಸಾರಾಂಶ

ಸೇನಾ ನೇಮಕಾತಿ ವಿರೋಧಿಸಿ ಸಂಘಟನೆಗಳಿಂದ ಭಾರತ್ ಬಂದ್ ಸೇನಾ ನೇಮಕಾತಿ ಅಗ್ನಿಪಥ ವಿರೋಧಿಸಿ ಪ್ರತಿಭಟನೆ, ರೈಲು ಸಂಚಾರ ಸ್ಥಗಿತ ರೈಲು ಪ್ರಯಾಣಿಕರ ಪರದಾಟ, ಟಿಕೆಟ್ ಹಣ ಹಿಂಪಡೆಯುವುದು ಹೇಗೆ?

ನವದೆಹಲಿ(ಜೂ.20): ಕೇಂದ್ರ ಸರ್ಕಾರದ ಅಗ್ನಿಪಥ ಸೇನಾ ನೇಮಕಾತಿ ಯೋಜನೆ ವಿರೋಧಿಸಿ ಹಲವು ಸಂಘಟನೆಗಳು ಭಾರತ್ ಬಂದ್‌ಗೆ ಕರೆ ನೀಡಿದೆ. ಹೀಗಾಗಿ ಬಿಹಾರ, ಜಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರತ್ ಬಂದ್ ಪ್ರತಿಭಟನೆಗಳು ನಡೆಯುತ್ತಿದೆ. ಇದರಿಂದ ಸುಮಾರು 742ಕ್ಕೂ ಹೆಚ್ಚು ರೈಲು ಸಂಚಾರ ರದ್ದಾಗಿದೆ. ಇತ್ತ ಪ್ರಯಾಣಿಕರು ಪರದಾಡುವಂತಾಗಿದೆ. 

ಅಗ್ನಿಪಥ ವಿರೋಧಿಸಿ ಪ್ರತಿಭಟನಕಾರರು ರೈಲಿಗೆ ಬೆಂಕಿ ಹಚ್ಚಿದ್ದರೆ,  ರೈಲು ನಿಲ್ದಾಣ ದ್ವಂಸಗೊಳಿಸಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ. ಹೀಗಾಗಿ ದೇಶದ ಹಲವು ಭಾಗಗಳಿಗೆ ತೆರಳಬೇಕಿದ್ದ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಇಂದು 742 ರೈಲು ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ಕೇಂದ್ರ ರೈಲ್ವೇ ಸಚಿವಾಲಯ ಸ್ಪಷ್ಟಪಡಿಸಿದೆ.

ಹಿಂಸಾತ್ಮಕ ರೂಪ ಪಡೆದ 'ಅಗ್ನಿಪಥ' ಆಂದೋಲನ: ರೈಲುಗಳು ಧಗಧಗ!

ಭಾನುವಾರ 483 ರೈಲು ಸಂಚಾರ ರದ್ದು ಮಾಡಲಾಗಿತ್ತು. ಇದೇ ವೇಳೆ ರೈಲು ರದ್ದಾಗಿರುವ ಕಾರಣ ಹಲವು ಪ್ರಯಾಣಿಕರು ಪರದಾಡುವಂತಾಗಿದೆ. ಇತ್ತ ರೈಲ್ವೇ ಸಚಿವಾಯಲ, ಟಿಕೆಟ್ ಹಣ ಹಿಂಪಡೆಯುವುದು ಹೇಗೆ ಅನ್ನೋದರ ಕುರಿತು ಮಾಹಿತಿ ನೀಡಿದೆ.

ರೈಲು ಸಂಚಾರ ಸಂಪೂರ್ಣ ರದ್ದಾಗಿದ್ದರೆ ಸಂಪೂರ್ಣ ಹಣ ವಾಪಸ್ ಪಡೆಯಬಹುದು.ಆನ್‌ಲೈನ್ ಮೂಲಕ, ಆ್ಯಪ್ ಮೂಲಕ ಟಿಕೆಟ್ ಖರೀದಿಸಿದ್ದರೆ, ಹಣ ರೀಫಂಡ್‌ಗೆ  ಯಾವುದೇ ರೀತಿಯ ಅರ್ಜಿ ತುಂಬುವ ಅವಶ್ಯಕತೆ ಇಲ್ಲ, ಹಣ ನೇರವಾಗಿ ಖಾತೆಗೆ ಜಮೆ ಆಗಲಿದೆ. 

ಇನ್ನು ಕೆಲ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಅಥವಾ ಮಾರ್ಗ ಬದಲಿಸಲಾಗಿದೆ. ಇಂತಹ ರೈಲು ಟಿಕೆಟ್ ಹಣ ಹಿಂಪಡೆಯಲು ಸಾಧ್ಯವಿದೆ. ಆದರೆ IRCTC ನಿಯಮದನ್ವಯ ರಿಫಂಡ್ ಆಗಲಿದೆ. ಇನ್ನು ಬದಲಾದ ರೈಲು ಮಾರ್ಗ, ಸಮಯದಿಂದ ಪ್ರಯಾಣಿಕ ಟಿಕೆಟ್ ರದ್ದು ಮಾಡಲು ಇಚ್ಚಿಸಿದರೆ IRCTC ನಿಯಮದನ್ವಯ ರೀಫಂಡ್ ಪಡೆಯಲು ಸಾಧ್ಯವಿದೆ.

ರೈಲು ಟಿಕೆಟನ್ನು ರೈಲ್ವೇ ಕೇಂದ್ರ ಕೌಂಟರ್‌ನಲ್ಲಿ ಬುಕ್ ಮಾಡಿದ್ದರೆ, ಪ್ರಯಾಣಿಕ ಹತ್ತಿರದ ರೈಲು ಕೇಂದ್ರದ ಕೌಂಟರ್‌ಗೆ ತೆರಳಿ ಹಣ ಹಿಂಪಡೆಯಲು ಸಾಧ್ಯವಿದೆ. 

ಅಗ್ನಿಪಥ ಸೇನಾ ಯೋಜನೆ ವಿರುದ್ಧ ಪ್ರತಿಭಟನೆ, 200ಕ್ಕೂ ಹೆಚ್ಚು ರೈಲು ಸಂಚಾರ ಸ್ಥಗಿತ!

ಬೆಂಗಳೂರಿನಲ್ಲಿ ಭಾರಿ ಭದ್ರತೆ
ಸೇನೆಯಲ್ಲಿ ನೇಮಕಾತಿ ಕುರಿತು ಕೇಂದ್ರ ಸರ್ಕಾರದ ಘೋಷಿಸಿರುವ ಅಗ್ನಿಪಥ್‌ ಯೋಜನೆಯನ್ನು ವಿರೋಧಿಸಿ ಜೂ.20ರಂದು ಭಾರತ್‌ ಬಂದ್‌ಗೆ ವಿವಿಧ ಸಂಘಟನೆಗಳು ಕರೆ ನೀಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ಬಿಗಿ ಭದ್ರತೆಗೆ ಪೊಲೀಸರಿಗೆ ಹೆಚ್ಚುವರಿ ಪೊಲೀಸ್‌ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್‌ ಕುಮಾರ್‌ ಸೂಚಿಸಿದ್ದಾರೆ.

ಕೇಂದ್ರ ಸರ್ಕಾರದ ಸಂಸ್ಥೆಗಳಾದ ರೈಲ್ವೆ ನಿಲ್ದಾಣ, ಆದಾಯ ತೆರಿಗೆ ಕಚೇರಿ, ಬ್ಯಾಂಕ್‌ಗಳು, ಬಸ್‌ ನಿಲ್ದಾಣಗಳು ಹಾಗೂ ಕೇಂದ್ರದ ಆಡಳಿತರೂಢ ಪಕ್ಷದ ನಾಯಕರ ಮನೆಗಳಿಗೆ ಭದ್ರತೆ ಕಲ್ಪಿಸುವಂತೆ ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿದ್ದಾರೆ. ಬಂದ್‌ ಹೆಸರಿನಲ್ಲಿ ಪೆಟ್ರೋಲ್‌ ಬಾಂಬ್‌ ಎಸೆಯುವುದು ಸೇರಿದಂತೆ ಸಮಾಜಘಾತುಕ ಕೃತ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ರೈಲ್ವೆ ನಿಲ್ದಾಣ, ವಾಣಿಜ್ಯ ಪ್ರದೇಶಗಳು ಹಾಗೂ ಸರ್ಕಾರಿ ಸಂಸ್ಥೆಗಳ ಬಳಿ ಹೆಚ್ಚುವರಿ ಬಂದೋಬಸ್‌್ತ ವ್ಯವಸ್ಥೆ ಮಾಡಬೇಕು. ಬಂದೋಬಸ್‌್ತ ಉಸ್ತುವಾರಿಯನ್ನು ಆಯಾ ವಲಯ ಐಜಿಪಿಗಳು, ಜಿಲ್ಲಾ ಎಸ್ಪಿಗಳು ಖುದ್ದು ವಹಿಸಬೇಕು ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ
ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್