ಬೆಳಗಾವಿ ‘ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ’: ಉದ್ಧವ್ ವಿವಾದ| ಕೇಂದ್ರದಿಂದ ಕರ್ನಾಟಕಕ್ಕೇ ಬೆಂಬಲ: ಮಹಾ ಸಿಎಂ
ಮುಂಬೈ[ಫೆ.04]: ಮಹಾರಾಷ್ಟ್ರ ಮುಖ್ಯಮಂತ್ರಿ, ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಅವರು ಬೆಳಗಾವಿಯನ್ನು ‘ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ’ ಎಂದು ಕರೆಯುವ ಮೂಲಕ, ಕನ್ನಡಿಗರ ಭಾವನೆ ಕೆರಳಿಸುವ ಮನೋಭಾವ ಮುಂದುವರಿಸಿದ್ದಾರೆ.
ಶಿವಸೇನೆ ಮುಖವಾಣಿ ‘ಸಾಮ್ನಾ’ಗೆ ಸಂದರ್ಶನ ನೀಡಿರುವ ಅವರು, ‘ನಮ್ಮ ಸರ್ಕಾರವು ‘ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ’ದ ವಿವಾದ ಬಗೆಹರಿಸಲಿದೆ’ ಎಂದರು.
undefined
‘ಮಹಾರಾಷ್ಟ್ರವು ಕರ್ನಾಟಕದ ಮರಾಠಿ ಭಾಷಿಕ ಪ್ರದೇಶಗಳು ತನ್ನಲ್ಲಿ ವಿಲೀನ ಆಗಬೇಕು ಎಂದು ಬಯಸುತ್ತದೆ. ಈ ವಿಷಯ ಕೋರ್ಟ್‌ನಲ್ಲಿದೆ. ಆದರೆ ಈ ವಿಷಯದಲ್ಲಿ ತಟಸ್ಥ ಧೋರಣೆ ತಾಳುವುದನ್ನು ಬಿಟ್ಟು ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಸರ್ಕಾರ ಬೆಂಬಲ ನೀಡುತ್ತಿದೆ’ ಎಂದು ಆರೋಪಿಸಿದರು.
ಕಳೆದ ಡಿಸೆಂಬರ್‌ನಲ್ಲಿ ಕೂಡ ಬೆಳಗಾವಿಯನ್ನು ಉದ್ಧವ್ ‘ಕರ್ನಾಟಕ ಆಕ್ರಮಿತ ಕಾಶ್ಮೀರ’ ಎಂದು ಕರೆದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದರು. ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ ಪದಬಳಕೆಯಿಂದ ಸ್ಫೂರ್ತಿ ಪಡೆದು ಅವರು ಈ ಮಾತು ಆಡಿದ್ದರು.