ಸಣ್ಣ ಹಳ್ಳಿಗಳಲ್ಲಿ ಒಬ್ಬಿಬ್ಬರಿಗೆ ಕೊರೋನಾ ಬರೋದು ಹೊಸದಲ್ಲ. ಆದರೆ ಹಿಮಾಚಲ ಪ್ರದೇಶದಲ್ಲಿ ಹಳ್ಳಿಯೊಂದಲ್ಲಿ ಒಬ್ಬರನ್ನು ಹೊರತುಪಡಿಸಿ, ಉಳಿದೆಲ್ಲರಿಗೂ ಸೋಂಕು ಹಬ್ಬಿದೆ. ಅರೇ ಇದು ಹೇಗೆ? ಅನ್ನೋರು ಈ ಸುದ್ದಿ ಓದಲೇಬೇಕು
ಶಿಮ್ಲಾ(ನ.21): ಸಣ್ಣ ಹಳ್ಳಿಗಳಲ್ಲಿ ಒಬ್ಬಿಬ್ಬರಿಗೆ ಕೊರೋನಾ ಬರೋದು ಹೊಸದಲ್ಲ. ಆದರೆ ಹಿಮಾಚಲ ಪ್ರದೇಶದಲ್ಲಿ ಹಳ್ಳಿಯೊಂದಲ್ಲಿ ಒಬ್ಬರನ್ನು ಹೊರತುಪಡಿಸಿ, ಉಳಿದೆಲ್ಲರಿಗೂ ಸೋಂಕು ಹಬ್ಬಿದೆ. ಥೊರಾಂಗ್ ಎಂಬ ಗ್ರಾಮದಲ್ಲಿ ಇತ್ತೀಚೆಗೆ ಧಾರ್ಮಿಕ ಕಾರ್ಯಕ್ರಮವೊಂದು ನಡೆದಿತ್ತು. ಅದರಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರಿಗೆ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಉಳಿದವರಿಗೂ ಪರೀಕ್ಷೆ ನಡೆಸಿದಾಗ ಎಲ್ಲಾ 42 ಜನರಿಗೂ ಸೋಂಕು ಹಬ್ಬಿದ್ದು ಖಚಿತಪಟ್ಟಿದೆ.
ಆದರೆ, 52 ವರ್ಷದ ಭೂಷಣ್ ಠಾಕೂರ್ ಎಂಬ ವ್ಯಕ್ತಿ ಮಾತ್ರ ಕೊರೋನಾಕ್ಕೆ ತುತ್ತಾಗಿಲ್ಲ. ಕೊರೋನಾ ನಿಯಂತ್ರಣಕ್ಕೆ ಇರುವ ಮಾರ್ಗೋಪಾಯಗಳಾದ ಕೈ ತೊಳೆಯುವುದು, ಮಾಸ್ಕ್ ಧಾರಣೆ ಮತ್ತು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇನೆ. ಹೀಗಾಗಿ ನಾನು ಪಾರಾಗಿದ್ದೇನೆ ಎಂದಿದ್ದಾರೆ ಭೂಷಣ್ ಠಾಕೂರ್.
undefined
ಕೋವ್ಯಾಕ್ಸಿನ್ ಲಸಿಕೆ 3ನೇ ಹಂತದ ಪ್ರಯೋಗಕ್ಕೆ ಒಳಗಾದ ಹರಾರಯಣ ಸಚಿವ
ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಶೋಧಿಸಿರುವ ಕೋವಿಡ್ ಲಸಿಕೆ ‘ಕೋವ್ಯಾಕ್ಸಿನ್’ನ ಮೂರನೇ ಹಂತದ ಪ್ರಯೋಗ ಶುಕ್ರವಾರ ಹರ್ಯಾಣದಲ್ಲಿ ಆರಂಭವಾಗಿದ್ದು, ಅಲ್ಲಿನ ಆರೋಗ್ಯ ಸಚಿವ ಅನಿಲ್ ವಿಜ್ ಮೊದಲ ಪ್ರಯೋಗಾತ್ಮಕ ಲಸಿಕೆಯನ್ನು ಪಡೆದು ಮಾದರಿಯಾಗಿದ್ದಾರೆ. ಇಲ್ಲಿನ ಕಂಟೋನ್ಮೆಂಟ್‌ನಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ 67 ವರ್ಷದ ವಿಜ್ ಲಸಿಕೆ ಚುಚ್ಚಿಸಿಕೊಂಡಿದ್ದಾರೆ.
ಆ ಮೂಲದ ಪ್ರಯೋಗ ಹಂತದಲ್ಲಿರುವ ಲಸಿಕೆ ಪಡೆದ ದೇಶದ ಮೊದಲ ಸಚಿವ ಎಂಬ ಖ್ಯಾತಿ ತಮ್ಮದಾಗಿಸಿಕೊಂಡಿದ್ದಾರೆ. ಮಧುಮೇಹಿಯಾಗಿರುವ ಅವರು ಈ ಹಿಂದೆ ಸರ್ಜರಿಗೂ ಒಳಗಾಗಿದ್ದು, ತನಗೆ ಯಾವುದೇ ರೋಗ ಇಲ್ಲದಿರುವುದರಿಂದ ಅಡ್ಡ ಪರಿಣಾಮ ಬೀರದು ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.