ಎದೆಹಾಲು ಗಂಟಲಲ್ಲಿ ಸಿಕ್ಕು ಮಗು ಸತ್ತಿದೆ ಎಂದು ತಿಳಿದ ತಾಯಿಯ ಆತ್ಮಹತ್ಯೆ ಯತ್ನ, ಬಳಿಕ ಗೊತ್ತಾಗಿದ್ದೇ ಬೇರೆ!

Published : Jan 30, 2025, 10:42 PM IST
ಎದೆಹಾಲು ಗಂಟಲಲ್ಲಿ ಸಿಕ್ಕು ಮಗು ಸತ್ತಿದೆ ಎಂದು ತಿಳಿದ ತಾಯಿಯ ಆತ್ಮಹತ್ಯೆ ಯತ್ನ, ಬಳಿಕ ಗೊತ್ತಾಗಿದ್ದೇ ಬೇರೆ!

ಸಾರಾಂಶ

ಎದೆಹಾಲು ಕುಡಿಸುವಾಗ ಮಾಡಿದ ತಪ್ಪಿನಿಂದ ಹಾಲು ಗಂಟಲಿಗೆ ಸಿಕ್ಕು ಮಗು ಸಾವು ಕಂಡಿದೆ ಎಂದು ಅಂದುಕೊಂಡ ತಾಯಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಬಳಿಕ ಆಕೆಯನ್ನು ರಕ್ಷಣೆ ಮಾಡಲಾಗಿದೆ.

ಬೆಂಗಳೂರು (ಜ.30): ಮಗು ಉಸಿರುಗಟ್ಟಿ ಸಾವು ಕಾಣಲು ತಾನೇ ಕಾರಣ ಎಂದು ಭಾವಿಸಿದ ಬಾಣಂತಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ಘಟನೆ ಕೇರಳದಲ್ಲಿ ನಡೆದಿದೆ. ಎದೆಹಾಲು ಕುಡಿಸುವಾಗ ಹಾಲು ಮಗುವಿನ ಗಂಟಲಲ್ಲಿ ಸಿಕ್ಕು ಉಸಿರಾಡಲು ಸಾಧ್ಯವಾಗದೆ ಮಗು ಸಾವು ಕಂಡಿದೆ ಎಂದು ತಾಯಿ ಭಾವಿಸಿದ್ದಳು. ಇದಕ್ಕಾಗಿ ತನ್ನ ಕೈಗಳನ್ನು ಕುಯ್ದುಕೊಂಡು ತಾಯಿ ಆತ್ಮಹತ್ಯೆಗೆ ಪ್ರತ್ನ ಮಾಡಿದ್ದಳು. ಕೇರಳ ಇಡುಕ್ಕಿ ಜಿಲ್ಲೆಯ ಪೂಚಫ್ರಾ ಮೂಲದ ಅನೂಪ್ ಮತ್ತು ಸ್ವಪ್ನಾ ಅವರ 33 ದಿನಗಳ ಗಂಡು ಮಗು ಬುಧವಾರ ಬೆಳಗಿನ ಜಾವ ಹಠಾತ್‌ ಆಗಿ ಸಾವು ಕಂಡಿತ್ತು. ಆರೋಗ್ಯ ಪರಿಸ್ಥಿತಿ ವಿಷಮಿಸಿದಾಗ ತಕ್ಷಣವೇ ಮಗುವನ್ನು  ತೊಡುಪುಳ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹೆರಿಗೆಯ ನಂತರ, ತಾಯಿ ಮತ್ತು ಮಗು ಕೂವಕಂಡಂನಲ್ಲಿರುವ ತಮ್ಮ ಮನೆಯಲ್ಲಿದ್ದರು. ಅಕಾಲಿಕವಾಗಿ ಮಗು ಜನಿಸಿದ್ದರಿಂದ ಜಾಗರೂಕವಾಗಿ ನೋಡಿಕೊಳ್ಳಲಾಗುತ್ತಿತ್ತು. ಜನನದ ಸಮಯದಲ್ಲಿ ಮಗುವಿನ ತೂಕ ಹಾಗೂ ಗಾತ್ರ ಕೂಡ ಬಹಳ ಕಡಿಮೆಯಿತ್ತು ಎಂದು ವರದಿಯಾಗಿದೆ.

 

ಜೊಮೋಟೋ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡ್ತಿದ್ದ ವ್ಯಕ್ತಿ ಇಂದು ಕೇರಳದಲ್ಲಿ ಸಿವಿಲ್‌ ಜಡ್ಜ್‌!

ಬಳಿಕ ಕಾಂಜಾರ್ ಎಸ್.ಐ. ಬೈಜು ಪಿ.ಬಾಬು ಮತ್ತು ತಂಡವು ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿ ಇಡುಕ್ಕಿ ಮೆಡಿಕಲ್ ಕಾಲೇಜಿಗೆ ಕಳುಹಿಸಿಕೊಟ್ಟರು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಗುವಿನ ಸಾವಿಗೆ ಹಾಲು ಗಂಟಲಿಗೆ ಸಿಕ್ಕಿಹಾಕಿಕೊಂಡಿದ್ದಲ್ಲ ಎಂದು ದೃಢಪಟ್ಟಿದೆ. ಹುಟ್ಟಿನಿಂದಲೇ ಇದ್ದ ಆರೋಗ್ಯ ಸಮಸ್ಯೆಯೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಕೈನರಗಳನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ತಾಯಿ ಕೋಟ್ಟಾಯಂ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ.

ರೇಪ್‌ & ಮರ್ಡರ್‌ ಮಾಡಿದವನಿಗೆ ಜೀವಾವಧಿ; ಗೆಳೆಯನಿಗೆ ವಿಷಹಾಕಿ ಕೊಂದವಳಿಗೆ ಗಲ್ಲು ಶಿಕ್ಷೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!