ಜೂನ್ 5ಕ್ಕೆ ಆಯೋಧ್ಯೆ ರಾಮ ದರ್ಬಾರ್ ಪ್ರಾಣ ಪ್ರತಿಷ್ಠೆ, ಕೆಲವೇ ದಿನದಲ್ಲಿ ನಿರ್ಮಾಣ ಕಾರ್ಯ ಪೂರ್ಣ

Published : May 21, 2025, 07:56 PM IST
ಜೂನ್ 5ಕ್ಕೆ ಆಯೋಧ್ಯೆ ರಾಮ ದರ್ಬಾರ್ ಪ್ರಾಣ ಪ್ರತಿಷ್ಠೆ, ಕೆಲವೇ ದಿನದಲ್ಲಿ ನಿರ್ಮಾಣ ಕಾರ್ಯ ಪೂರ್ಣ

ಸಾರಾಂಶ

ಆಯೋಧ್ಯೆ ರಾಮ ಮಂದಿರದಲ್ಲಿ ಇದೀಗ ಮತ್ತೊಂದು ಅತೀ ದೊಡ್ಡ ಧಾರ್ಮಿಕ ಕಾರ್ಯ ನಡೆಯುತ್ತಿದೆ. ಜೂನ್ 5 ರಂದು ರಾಮ ದರ್ಬಾರ್ ಪ್ರಾಣಪ್ರತಿಷ್ಠೆ ನಡೆಯಲಿದೆ.ರಾಮ ಮಂದಿರದ ಸಂಪೂರ್ಣ ನಿರ್ಮಾಣ ಕಾರ್ಯ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ.

ಆಯೋಧ್ಯೆ(ಮಾ.21) ಆಯೋಧ್ಯೆ ರಾಮ ಮಂದಿ ಮತ್ತೊಂದು  ಅತೀ ದೊಡ್ಡ ಧಾರ್ಮಿಕಾ ಕಾರ್ಯಕ್ಕೆ ಸಜ್ಜಾಗಿದೆ. 2024ರ ಜನವರಿ 22ರಂದು ಆಯೋದ್ಯ ರಾಮ ಲಲ್ಲನ ಪ್ರಾಣಪ್ರತಿಷ್ಠೆ ನೆರವೇರಿಸಲಾಗಿತ್ತು. ಬಳಿಕ ಆಯೋಧ್ಯೆ ರಾಮ ಮಂದಿರ ಸಾರ್ವಜನಿಕರಿಗೆ ಮುಕ್ತವಾಗಿತ್ತು. ಆದರೆ ಮಹಡಿಗಳ ನಿರ್ಮಾಣ ಕಾರ್ಯ ಬರದಿಂದ ಸಾಗಿತ್ತು. ಇದೀಗ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಧ್ವಜಸ್ಥಂಬ ಸೇರಿದಂತೆ ಇತರ ಕಾಮಗಾರಿಗಳು ಪೂರ್ಣಗೊಂಡಿದೆ. ಮೇ ತಿಂಗಳ ಅಂತ್ಯಕ್ಕೆ ರಾಮ ಮಂದಿರದ ಕಾಮಗಾರಿ ಪೂರ್ಣಗೊಳ್ಳಲಿದೆ. ಜೂನ್ 5ಕ್ಕೆ ರಾಮ ದರ್ಬಾರ್ ಪ್ರಾಣಪ್ರತಿಷ್ಠೆ ನಡೆಯಲಿದೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ.

ರಾಮ ದರ್ಬಾರ್ ಪೂಜಾ ಕಾರ್ಯಗಳು ಜೂನ್ 3ರಿಂದ ಆರಂಭ
ಆಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯಗಳು ಬಹುತೇಕ ಪೂರ್ಣಗೊಂಡಿದೆ. ಇದೀಗ ಧ್ವಜಸ್ಥಂಬ, ಗರ್ಭಗುಡಿಯ ಮೇಲಿನ ಶಿಖರ್ ಸೇರಿದಂತೆ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದೆ. ಮೇ ಅಂತ್ಯದೊಳಗೆ ಎಲ್ಲಾ ಕಾಮಗಾರಿ ಪೂರ್ಣಗೊಳ್ಳಲಿದೆ. ಬಳಿಕ ಆಯೋಧ್ಯೆ ರಾಮ ಮಂದಿರವನ್ನು ಸಂಪೂರ್ಣ ಶುಚಿಗೊಳಿಸಲಾಗುತ್ತದೆ. ಜೂನ್ 3 ರಿಂದ ರಾಮ ದರ್ಬಾರ್ ಪ್ರಾಣಪ್ರತಿಷ್ಠೆ ಪೂಜಾ ಕಾರ್ಯಗಳು ಆರಂಭಗೊಳ್ಳಲಿದೆ. ಜೂನ್ 5 ರಂದು ರಾಮ ದರ್ಬಾರ್ ಪ್ರಾಣ ಪ್ರತಿಷ್ಠೆ ನೆರವೇರಲಿದೆ.

ಸಚಿವರು, ರಾಜಕೀಯ ನಾಯಕರಿಗೆ ಆಹ್ವಾನವಿಲ್ಲ
ರಾಮ ದರ್ಬಾರ್ ಪ್ರಾಣ ಪ್ರತಿಷ್ಠೆ ಕುರಿತು ಹೆಚ್ಚಿನ ಮಾಹಿತಿ ನೀಡಿದ ರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರ, ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ಆಯೋಧ್ಯೆ ರಾಮ ಮಂದಿರ ಬರೋಬ್ಬರಿ 500 ವರ್ಷಗಳ ಬಳಿಕ ನಿರ್ಮಾಣಗೊಂಡ ಹಿಂದೂಗಳ ಶ್ರದ್ಧಾ ಕೇಂದ್ರ. ಇದರ ಹಿಂದೆ ರಾಜಕೀಯವಿಲ್ಲ, ಕೇವಲ ಭಕ್ತಿ ಮಾತ್ರ. ಇದೀಗ ಆಯೋದ್ಯ ರಾಮ ದರ್ಬಾರ್ ಪ್ರಾಣಪ್ರತಿಷ್ಠೆಗೆ  ಕೇಂದ್ರ ಹಾಗೂ ರಾಜ್ಯದ ಯಾವುದೇ ರಾಜಕೀಯ ನಾಯಕರು, ಸಚಿವರು, ಶಾಸಕರಿಗೆ ಆಹ್ವಾನವಿಲ್ಲ ಎಂದಿದ್ದಾರೆ.

ಜೂನ್ ಎರಡನೇ ವಾರದಿಂದ ಭಕ್ತರಿಗೆ ಸಂಪೂರ್ಣ ದೇವಸ್ಥಾನ ಪ್ರವೇಶ ಮುಕ್ತ
ಆಯೋಧ್ಯೆ ರಾಮ ಮಂದಿರ ಕಳೆದ ವರ್ಷ ಜನವರಿಯಿಂದಲೇ ಭಕ್ತರಿಗೆ ಮುಕ್ತವಾಗಿದೆ. ಆದರೆ ಮಹಡಿ ನಿರ್ಮಾಣಗಳು ನಡೆಯುತ್ತಿತ್ತು. ಇದೀಗ ಎಲ್ಲಾ ಮಹಡಿಗಳ ನಿರ್ಮಾಣ ಕಾರ್ಯ ಮುಗಿದಿದೆ. ರಾಮ ದರ್ಬಾರ್ ಪ್ರಾಣ ಪ್ರತಿಷ್ಠೆ ಬಳಿಕ ಒಂದು ವಾರದಲ್ಲಿ ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ ಎಂದು ನೃಪೇಂದ್ರ ಮಿಶ್ರಾ ಹೇಳಿದ್ದಾರೆ.

ಆಯೋಧ್ಯೆಯಲ್ಲಿ ಭಾರತ ಪಥ ನಿರ್ಮಾಣ
ಆಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತಿರುವ ಬೆನ್ನಲ್ಲೇ ಆಯೋಧ್ಯೆಯಲ್ಲಿ ಮತ್ತಷ್ಟು ಕಾಮಗಾರಿಗಳು ಆರಂಭಗೊಳ್ಳುತ್ತಿದೆ. ಇದೀಗ ಆಯೋಧ್ಯೆಯಲ್ಲಿ 20 ಕಿಲೋಮೀಟರ್ ಭಾರತ ಪಥ ನಿರ್ಮಾಣಗೊಳ್ಳುತ್ತಿದೆ. ರಾಮ ಪಥ, ಭಕ್ತಿ ಪಥ ಕಾಮಗಾರಿ ಬೆನ್ನಲ್ಲೇ ಭಾರತ ಪಥ ಕಾಮಗಾರಿ ಆರಂಭಗೊಳ್ಳುತ್ತಿದೆ. ಇದು 900 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಯಾಗಿದೆ. ಈಗಾಗಲೇ ಉತ್ತರ ಪ್ರದೇಶ ಸರ್ಕಾರ ಈ ಕಾಮಗಾರಿಗೆ ಅನುಮೋದನೆ ನೀಡಿ ಅನುದಾನ ಹಂಚಿದೆ.

ಆಯೋಧ್ಯೆ ರಾಮ ಮಂದಿರ ಭಾರತದ ಇತಿಹಾಸದಲ್ಲೇ ಅತೀ ದೊಡ್ಡ ವಿವಾದಿತ ಕೇಂದ್ರವಾಗಿ ಮಾರ್ಪಟ್ಟಿತು. ಬ್ರಿಟಿಷ್ ಆಡಳಿತ ಅಂತ್ಯಗೊಂಡು ಸ್ವತಂತ್ರ ಭಾರತದಲ್ಲಿ ಸರ್ಕಾರ ರಚನೆ ಗೊಂಡರೂ ರಾಮ ಜನ್ಮಭೂಮಿ ವಿವಾದಿತ ಕೇಂದ್ರವಾಗಿಯೇ ಉಳಿದಿತ್ತು. ಆದರೆ ಹಿಂದೂಗಳು ತಮ್ಮ ಶ್ರದ್ಧಾಕೇಂದ್ರಕ್ಕೆ ಹೋರಾಟ ಮುಂದುವರಿಸಿದ್ದರು. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಆಯೋಧ್ಯೆಯಲ್ಲಿ ಬರೋಬ್ಬರಿ 500 ವರ್ಷಗಳ ಬಳಿಕ ಭವ್ಯ ರಾಮ ಮಂದಿರ ನಿರ್ಮಾಣಗೊಂಡಿದೆ. ಕಳೆದ ವರ್ಷದಿಂದ ಭಕ್ತರು ದಾಖಲೆ ಸಂಖ್ಯೆಯಲ್ಲಿ ದರ್ಶನ ಪಡೆಯುತ್ತಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ