ಅನಾವಶ್ಯಕ ಹೇಳಿಕೆ ನೀಡದಂತೆ ನೂತನ ಸಚಿವರಿಗೆ ಮೋದಿ ಸಲಹೆ!

By Suvarna NewsFirst Published Jul 10, 2021, 9:57 AM IST
Highlights

* ಸಾಮರ್ಥ್ಯವನ್ನು ಕೆಲಸದಲ್ಲಿ ತೋರಿಸಬೇಕೇ ಹೊರತು ಮಾತಿನಲ್ಲಿ ಅಲ್ಲ

* ಅನಾವಶ್ಯಕ ಹೇಳಿಕೆ ನೀಡದಂತೆ ನೂತನ ಸಚಿವರಿಗೆ ಮೋದಿ ಸಲಹೆ

* ನೂತನವಾಗಿ ಸಂಪುಟಕ್ಕೆ ಸೇರಿದ ಸಚಿವರ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ 

ನವದೆಹಲಿ(ಜು.10): ನೂತನ ಸಚಿವರು ತಮ್ಮ ಸಾಮರ್ಥ್ಯವನ್ನು ಕೆಲಸದಲ್ಲಿ ತೋರಿಸಬೇಕೇ ಹೊರತು ಮಾತಿನಲ್ಲಿ ಅಲ್ಲ. ಅನಾವಶ್ಯಕವಾಗಿ ಹೇಳಿಕೆ ನೀಡಿ ಮಾಧ್ಯಮಗಳಿಗೆ ಆಹಾರವಾಗಬಾರದು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

ನೂತನವಾಗಿ ಸಂಪುಟಕ್ಕೆ ಸೇರಿದ ಸಚಿವರ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದ್ದರು. ಈ ವೇಳೆ 12 ಸಚಿವರನ್ನು ಸಂಪುಟದಿಂದ ಕೈಬಿಟ್ಟಿರುವುದಕ್ಕೆ ಕಾರಣ ವಿವರಿಸಿದ ಅವರು, ಕೊನೆಯ ಮೈಲಿಯನ್ನು ತಲುಪುವವರೆಗೂ ವಿಶ್ರಮಿಸಬಾರದು ಎಂಬುದು ಸರ್ಕಾರದ ಕಾರ್ಯಸೂಚಿಯಾಗಿದೆ.

ಕೊರೋನಾ ಮೂರನೇ ಅಲೆ ಭೀತಿ ಮಧ್ಯೆ ಶುಭ ಸುದ್ದಿ ಕೊಟ್ಟ ಸಂಶೋಧಕರು!

ಆಡಳಿತ ವ್ಯವಸ್ಥೆಗೆ ನವ ಚೈತನ್ಯವನ್ನು ತುಂಬುವ ಉದ್ದೇಶದಿಂದ ಅವರನ್ನು ಬದಲಿಸಲಾಗಿದೆ. ಹಾಗೆಂದ ಮಾತ್ರಕ್ಕೆ ಅವರು ಅಸಮರ್ಥರು ಎಂಬ ಅರ್ಥವಲ್ಲ. ನೂತನ ಸಚಿವರು ಹಿಂದಿನ ಸಚಿವರನ್ನು ಭೇಟಿ ಮಾಡಿ ಅವರ ಕೆಲಸದ ಅನುಭವ ಪಡೆದುಕೊಳ್ಳಬೇಕು. ಇದೇ ವೇಳೆ ಸಚಿವರು ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗಬೇಕು. ಸಚಿವಾಲಯದ ಕೆಲಸದಲ್ಲಿ ಸಂಪೂರ್ಣ ಪರಿಶ್ರಮದಿಂದ ತಮ್ಮನ್ನು ತೊಡಗಿಸಿಕೊಳ್ಳಬೇಕು. ತುಳಿತಕ್ಕೆ ಒಳಗಾದವರಿಗೆ ಸಹಾಯ ಮಾಡುವುದು ಮೊದಲ ಆದ್ಯತೆ ಆಗಬೇಕು ಎಂದು ಸಲಹೆ ನೀಡಿದ್ದಾರೆ.

click me!