ನವದೆಹಲಿ(ಮೇ.26): ಆಸ್ಟ್ರೇಲಿಯಾ ವಿಶ್ವವಿದ್ಯಾಲಯಗಳು ಮಹತ್ವದ ನಿರ್ಧಾರ ಪ್ರಕಟಿಸಿದೆ. ವಿಕ್ಟೊರಿಯಾ, ಎಡಿತ್ ಕೊವನ್ ಸೇರಿದಂತೆ ಪ್ರತಿಷ್ಠಿತ ಆಸ್ಟ್ರೇಲಿಯಾ ವಿಶ್ವ ವಿದ್ಯಾಲಯಗಳು ಭಾರತದ 6 ರಾಜ್ಯಗಳ ವಿದ್ಯಾರ್ಥಿಗಳಿಗೆ ನಿಷೇಧ ಹೇರಿದೆ. ಈ ರಾಜ್ಯಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಲು ನಿರ್ಧರಿಸಿದೆ. ಇದಕ್ಕೆ ಮುಖ್ಯ ಕಾರಣ ವಿದ್ಯಾರ್ಥಿ ವೀಸಾ ಅಕ್ರಮ. ಪಂಜಾಬ್, ರಾಜಸ್ಥಾನ, ಹರ್ಯಾಣ, ಗುಜರಾತ್, ಉತ್ತರ ಪ್ರದೇಶ, ಉತ್ತರಖಂಡದಲ್ಲಿ ವಿದ್ಯಾರ್ಥಿ ವೀಸಾ ಅಕ್ರಮ ಹಚ್ಚಾಗಿದೆ. ಇದು ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ತಲೆನೋವು ಹೆಚ್ಚಿಸಿದೆ. ಹೀಗಾಗಿ ಈ ಉಸಾಬರಿ ಬೇಡ ಎಂದು ಭಾರತದ 6 ರಾಜ್ಯಗಳ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದೆ.
ಆಸ್ಟ್ರೇಲಿಯಾದ ಟೊರೆನ್ಸ್ ವಿಶ್ವವಿದ್ಯಾಲಯ, ಸೌದರ್ನ್ ಕ್ರಾಸ್ ಯುನಿವರ್ಸಿಟಿ, ಎಡಿತ್ ಕೋವನ್, ವಿಕ್ಟೋರಿಯಾ ಸೇರಿದಂತೆ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಈ ನಿರ್ಧಾರ ಪ್ರಕಟಿಸಿತ್ತು. ಇದೀಗ ನ್ಯೂ ಸೌಥ್ ವೇಲ್ಸ್, ಫೆಡರೇಶನ್, ವೆಸ್ಟರ್ನ್ ಸಿಡ್ನಿ ಯುನಿವರ್ಸಿಟಿಗಳು ಭಾರತದ 6 ರಾಜ್ಯಗಳ ವಿದ್ಯಾರ್ಥಿಗಳಿಗೆ ನಿಷೇಧ ಹೇರಿದೆ. ಈ 6 ರಾಜ್ಯಗಳ ವಿದ್ಯಾರ್ಥಿಗಳ ಅರ್ಜಿಯನ್ನು ಅಲ್ಲಿಂಗ ವಿದೇಶಾಂಗ ಇಲಾಖೆ ತಿರಸ್ಕರಿದೆ. ವೀಸಾದಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮ ನಡೆಯುತ್ತಿರುವುದು ಬೆಳಕಿಗೆ ಬಂದಿರುವ ಕಾರಣ ಅರ್ಜಿ ತಿರಸ್ಕರಿಸಲಾಗುತ್ತಿದೆ.
ಗುಡ್ ನ್ಯೂಸ್: ಈ ವರ್ಷ 10 ಲಕ್ಷ ಭಾರತೀಯರಿಗೆ ಅಮೆರಿಕ ವೀಸಾ
ಅಕ್ರ ವಿದ್ಯಾರ್ಥಿ ವೀಸಾ ಕಾರಣದಿಂದ ಭಾರತದ ವಿದ್ಯಾರ್ಥಿಗಳ ಅರ್ಜಿಯನ್ನು ವಿದೇಶಾಂಗ ಇಲಾಖೆ ತರಿಸ್ಕರಿಸುತ್ತಿದೆ. ಇದು ತೀವ್ರ ತಲೆನೋವಿಗೆ ಕಾರಣವಾಗಿದೆ. ಅಕ್ರಮ ವಿದ್ಯಾರ್ಥಿ ವೀಸಾ, ಅಕ್ರಮ ದಾಖಲೆಗಳನ್ನು ಸಲ್ಲಿಕೆ ಮಾಡುತ್ತಿರುವ ಕಾರಣಗಳಿಂದ ವೀಸಾ ರಿಜೆಕ್ಟ್ ಆಗುತ್ತಿದೆ. ಇದಕ್ಕಾಗಿ ಆಯಾ ರಾಜ್ಯಗಳು ಈ ಕುರಿತು ಎಚ್ಚರಿಕೆ ವಹಿಸುವಂತೆ ಭಾರತದ ವಿದೇಶಾಂಕ ಇಲಾಖೆ ಸೂಚನೆ ನೀಡಿದೆ.
ವೊಲ್ಲಾಂಗಾಂಗ್ ಸೇರಿದಂತೆ ಕೆಲ ವಿಶ್ವವಿದ್ಯಾಲಯಗಳು ಭಾರತದ ಯಾವುದೇ ರಾಜ್ಯದ ವಿದ್ಯಾರ್ಥಿಗಳಿಗೆ ನಿಷೇಧ ಹೇರಿಲ್ಲ. ಇಂತಹ ನಿರ್ಧಾರ ನಾವು ತೆಗೆದುಕೊಂಡಿಲ್ಲ ಎಂದಿದೆ. ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ನಿಷೇಧ ಕ್ರಮವನ್ನು ಸ್ವಾಗತಿಸಿದೆ. ಅಕ್ರಮ ಎಂದಿಗೂ ಸಹಿಸಲು ಸಾಧ್ಯವಿಲ್ಲ. ಇದಕ್ಕೆ ಕಾನೂನು ಸೇರಿದಂತೆ ಎಲ್ಲೂ ಅವಕಾಶವಿಲ್ಲ ಎಂದು ವಿಶ್ವವಿದ್ಯಾಲಯಗಳು ಹೇಳಿವೆ.
ವೀಸಾ ಕೊಡಿಸುವುದಾಗಿ ₹50 ಲಕ್ಷ ರು. ಅಧಿಕ ವಂಚನೆ: ಆರೋಪಿ ಸುಧೀರ್ ರಾವ್ ಬಂಧನ
ಆಸ್ಟ್ರೇಲಿಯಾದ ಒಂದೊಂದೆ ವಿಶ್ವವಿದ್ಯಾಲಗಳು ನಿಷೇಧ ನಿರ್ಧಾರ ಘೋಷಿಸುತ್ತಿದ್ದಂತೆ ಇತ್ತ ಆಯಾ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡಿದೆ. ಅಕ್ರಮ ವೀಸಾ ಪ್ರಕರಣಕ್ಕೆ ಅಂತ್ಯಹಾಡಲು ಕಟ್ಟಿನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಪ್ರಮುಖವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮುಜುಗರ ಅನುಭವಿಸುವಂತಾಗಿದೆ. ಹೀಗಾಗಿ ಅಕ್ರಮ ದಾಖಲಾತಿ, ವೀಸಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲು ರಾಜ್ಯಗಳು ನಿರ್ಧರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ