ಆಗಸ್ಟ್‌ ತಿಂಗಳಲ್ಲಿ ಸುರಿದಿದ್ದು 44 ವರ್ಷಗಳ ದಾಖಲೆ ಮಳೆ!

By Suvarna NewsFirst Published Aug 30, 2020, 12:08 PM IST
Highlights

ಆಗಸ್ಟ್‌ ತಿಂಗಳಲ್ಲಿ ಸುರಿದಿದ್ದು 44 ವರ್ಷಗಳ ದಾಖಲೆ ಮಳೆ| ಡ್ಯಾಂಗಳಲ್ಲಿ ಕಳೆದ ವರ್ಷಕ್ಕಿಂತ ಅಧಿಕ ನೀರು

ನವದೆಹಲಿ(ಆ.30): ಆಗಸ್ಟ್‌ ತಿಂಗಳಿನಲ್ಲಿ ಕಳೆದ 44 ವರ್ಷಗಳಲ್ಲೇ ಅತಿ ಹೆಚ್ಚಿನ ಮಳೆ ಸುರಿದಿದೆ. ಇದರ ಪರಿಣಾಮವಾಗಿ ದೇಶದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಆ.28ರ ವರೆಗೆ ಈ ತಿಂಗಳಿನಲ್ಲಿ ಸುರಿಯಬೇಕಿದ್ದ ಮಳೆಗಿಂತಲೂ ಶೇ.25ರಷ್ಟುಹೆಚ್ಚುವರಿ ಮಳೆ ಸುರಿದಿದೆ. ಅಲ್ಲದೇ 1983ರ ಆಗಸ್ಟ್‌ನಲ್ಲಿ ದಾಖಲಾದ ಅತ್ಯಧಿಕ ಮಳೆಯ ದಾಖಲೆಯನ್ನೂ ಮುರಿದಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಶೇ.23.8ರಷ್ಟು ಹೆಚ್ಚುವರಿ ಮಳೆ ಆಗಿತ್ತು.

ಹವಾಮಾನ ಇಲಾಖೆಯ ದಾಖಲೆಯ ಪ್ರಕಾರ 1976ರ ಆಗಸ್ಟ್‌ನಲ್ಲಿ ಹೆಚ್ಚುವರಿ ಶೇ. 28.4​ರಷ್ಟುಮಳೆ ಸುರಿದಿದ್ದು, ಈವರೆಗಿನ ದಾಖಲೆ ಎನಿಸಿಕೊಂಡಿದೆ. ದೇಶದಲ್ಲಿ ಪ್ರಸಕ್ತ ಮುಂಗಾರು ಋುತುವಿನಲ್ಲಿ ಸಾಮಾನ್ಯಕ್ಕಿಂತಲೂ ಶೇ.9ರಷ್ಟುಅಧಿಕ ಮಳೆ ಆಗಿದೆ. ಬಿಹಾರ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಗುಜರಾತ್‌ ಮತ್ತು ಗೋವಾದಲ್ಲಿ ಅತ್ಯಧಿಕ ಮಳೆ ಆಗಿದ್ದರೆ, ಸಿಕ್ಕಿಂನಲ್ಲಿ ವಿಪರೀತ ಮಳೆ ಸುರಿದಿದೆ.

ದೇಶದ ಜಲಾಶಯಗಳಲ್ಲಿ ಆ.27ಕ್ಕೆ ಅನುಗುಣವಾಗಿ ಕಳೆದ ವರ್ಷಕ್ಕಿಂತ ಉತ್ತಮ ಪ್ರಮಾಣದಲ್ಲಿ ನೀರು ಶೇಖರಣೆಯಾಗಿದೆ ಎಂದು ಜಲ ಆಯೋಗ ಮಾಹಿತಿ ನೀಡಿದೆ.

click me!