* ಭಾಷೆ ಹೆಸರಲ್ಲಿ ಇಂದು ವಿವಾದ ಸೃಷ್ಟಿಸುವ ಯತ್ನ
* ಜನರು ಈ ಬಗ್ಗೆ ಎಚ್ಚರದಿಂದ ಇರಬೇಕು
* ಎಲ್ಲ ಭಾಷೆಗಳೂ ಗೌರವಕ್ಕೆ ಅರ್ಹ
* ಪ್ರಾದೇಶಿಕ ಭಾಷೆಗಳಿಗೆ ಶಿಕ್ಷಣ ನೀತಿಯಲ್ಲಿ ಆದ್ಯತೆ ನೀಡಿದ್ದೇವೆ
* ಎಲ್ಲ ಭಾಷೆಗಳಲ್ಲೂ ಬಿಜೆಪಿ ಸಾಂಸ್ಕೃತಿಕ ಪ್ರತಿಬಿಂಬ ನೋಡುತ್ತದೆ
ಜೈಪುರ(ಮೇ.21): ಇತ್ತೀಚೆಗೆ ಕೇಂದ್ರ ಸರ್ಕಾರವು ‘ಹಿಂದಿ ಹೇರಿಕೆ’ ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿರುವ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಮೌನ ಮುರಿದಿದ್ದಾರೆ. ‘ಭಾಷೆಯ ಆಧಾರದಲ್ಲಿ ಇಂದು ವಿವಾದ ಹುಟ್ಟಿಸುವ ಯತ್ನಗಳು ನಡೆಯುತ್ತಿದ್ದು, ಈ ಬಗ್ಗೆ ನಾಗರಿಕರು ಎಚ್ಚರದಿಂದ ಇರಬೇಕು. ಬಿಜೆಪಿ ಎಲ್ಲ ಭಾರತೀಯ ಭಾಷೆಗಳನ್ನು ‘ಭಾರತೀಯತೆಯ ಆತ್ಮ’ ಎಂದು ಪರಿಗಣಿಸುತ್ತದೆ’ ಎಂದಿದ್ದಾರೆ. ಈ ಮೂಲಕ ಹಿಂದಿ ಹೇರಿಕೆ ಆರೋಪ ಮಾಡುತ್ತಿರುವ ಪಕ್ಷಗಳು ಹಾಗೂ ವ್ಯಕ್ತಿಗಳಿಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿ ಪದಾಧಿಕಾರಿಗಳ ಸಮ್ಮೇಳನವನ್ನು ವರ್ಚುವಲ್ ರೂಪದಲ್ಲಿ ಉದ್ದೇಶಿಸಿ ಶುಕ್ರವಾರ ಮಾತನಾಡಿದ ಅವರು, ‘ಇಡೀ ದೇಶದ ಸಾಂಸ್ಕೃತಿಕ ಹಾಗೂ ಭಾಷಾ ವೈವಿಧ್ಯತೆಯನ್ನು ರಾಷ್ಟ್ರೀಯ ಅಸ್ಮಿತೆಯೊಂದಿಗೆ ಬಿಜೆಪಿ ಒಗ್ಗೂಡಿಸಿದೆ’ ಎಂದು ಸ್ಪಷ್ಟಪಡಿಸಿದರು.
'ಇದು ಹೊಸ ಭಾರತ': ಕಾನ್ಸ್ ಚಲನಚಿತ್ರೋತ್ಸವದಲ್ಲಿ ಪ್ರಧಾನಿ ಮೋದಿ ಡಿಜಿಟಲ್ ಆರ್ಥಿಕತೆ ಶ್ಲಾಘಿಸಿದ ನಟ ಆರ್ ಮಾಧವನ್
‘ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಗಳಿಗೆ ಪ್ರಾಧಾನ್ಯತೆ ನೀಡಲಾಗಿದೆ. ಇದು ಸ್ಥಳೀಯ ಭಾಷೆಗಳ ಬಗ್ಗೆ ಬಿಜೆಪಿ ಹೊಂದಿರುವ ಬದ್ಧತೆಯ ದ್ಯೋತಕ. ಬಿಜೆಪಿ ಎಲ್ಲ ಭಾರತೀಯ ಭಾಷೆಗಳನ್ನೂ ಭಾರತೀಯತೆಯ ಆತ್ಮ ಎಂದು ಪರಿಗಣಿಸುತ್ತದೆ. ದೇಶದ ಉತ್ತಮ ಭವಿಷ್ಯಕ್ಕೆ ದೇಶದ ಭಾಷೆಗಳು ಕೊಂಡಿ’ ಎಂದು ಹೇಳಿದರು.
‘ಭಾರತೀಯ ಜನತಾ ಪಕ್ಷ ಪ್ರತಿ ಭಾಷೆಯಲ್ಲಿ ಭಾರತೀಯ ಸಂಸ್ಕೃತಿಯ ಪ್ರತಿಬಿಂಬ ನೋಡುತ್ತದೆ. ಎಲ್ಲ ಭಾರತೀಯ ಭಾಷೆಗಳೂ ಗೌರವಕ್ಕೆ ಅರ್ಹವಾಗಿವೆ’ ಎಂದು ತಿಳಿಸಿದರು.
ಇತ್ತೀಚೆಗೆ ಅಧಿಕೃತ ಭಾಷಾ ಸಂಸದೀಯ ಸಮಿತಿ ಅಧ್ಯಕ್ಷರೂ ಆದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, ‘ಕೇಂದ್ರ ಸರ್ಕಾರ ಶೇ.70ರಷ್ಟುವ್ಯವಹಾರವನ್ನು ಹಿಂದಿಯಲ್ಲೇ ನಡೆಸುತ್ತದೆ. ಹೀಗಾಗಿ ಇಂಗ್ಲಿಷ್ ಬದಲಾಗಿ ಹಿಂದಿಯನ್ನು ಸಂಪರ್ಕ ಭಾಷೆಯಾಗಿ ಬಳಸಬಹುದು’ ಎಂದು ಹೇಳಿದ್ದರು. ಆದರೆ, ‘ಇತರ ಭಾರತೀಯ ಭಾಷೆಗಳಿಗೆ ಹಿಂದಿಯನ್ನು ಪರ್ಯಾಯವಾಗಿ ಬಳಸಬಾರದು’ ಎಂದು ಸ್ಪಷ್ಟಪಡಿಸಿದ್ದರು. ಇದರ ಬೆನ್ನಲ್ಲೇ, ನಟ ಅಜಯ್ ದೇವಗನ್ ಅವರು, ‘ಹಿಂದಿ ಭಾರತದ ರಾಷ್ಟ್ರೀಯ ಭಾಷೆ’ ಎಂದಿದ್ದರು. ಇದು ವಿವಾದ ಹುಟ್ಟುಹಾಕಿತ್ತು ಹಾಗೂ ಹಿಂದಿಯನ್ನು ಅಷ್ಟಾಗಿ ಇಷ್ಟಪಡದ ದಕ್ಷಿಣ ರಾಜ್ಯಗಳ ರಾಜಕಾರಣಿಗಳು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ಹಿಂದಿ ಮಾತಾಡೋರು ಪಾನಿಪುರಿ ಮಾರ್ತಾರೆ: ತಮಿಳ್ನಾಡು ಸಚಿವ!
‘ಹಿಂದಿ ಮಾತನಾಡುವವರು ಕೊಯಮತ್ತೂರಿನಲ್ಲಿ ಪಾನಿಪುರಿ ಮಾರುತ್ತಾರೆ’ ಎಂದ ತಮಿಳುನಾಡಿನ ಶಿಕ್ಷಣ ಸಚಿವ ಕೆ. ಪೊನ್‌ಮುಡಿ ಹಿಂದಿ ಹೇರಿಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಯಮತ್ತೂರಿನ ಭಾರತೀಯಾರ್ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ‘ತಮಿಳುನಾಡಿನಲ್ಲಿ ಈಗಾಗಲೇ ದ್ವಿಭಾಷಾ ಪದ್ಧತಿ ಜಾರಿಯಲ್ಲಿದೆ. ಇಂಗ್ಲೀಷ್ ಅಂತಾರಾಷ್ಟ್ರೀಯ ಭಾಷೆಯಾದರೆ ತಮಿಳು ಸ್ಥಳೀಯ ಭಾಷೆಯಾಗಿದೆ. ಇಲ್ಲಿ ಹಿಂದಿ ಕಲಿಕೆಯ ಅಗತ್ಯವೇನಿದೆ?’ ಎಂದು ಅವರು ಪ್ರಶ್ನಿಸಿದ್ದಾರೆ.
ಕಿವುಡರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಭಾರತ ತಂಡಕ್ಕೆ ಮೋದಿ ಔತಣಕೂಟ
‘ಹಿಂದಿ ಕಲಿತರೆ ಹೆಚ್ಚಿನ ಉದ್ಯೋಗಾವಕಾಶಗಳು ಸಿಗುತ್ತವೆಂದು ಹೇಳುತ್ತಾರೆ. ಹೋಗಿ ಕೊಯಮತ್ತೂರಿನಲ್ಲಿ ಒಮ್ಮೆ ನೋಡಿ. ಹಿಂದಿ ಮಾತನಾಡುವವರು ಇಲ್ಲಿ ಪಾನಿಪುರಿ ಮಾರುತ್ತಾರೆ’ ಎಂದು ವ್ಯಂಗ್ಯವಾಡಿದ್ದಾರೆ.
‘ತಮಿಳುನಾಡಿನ ವಿದ್ಯಾರ್ಥಿಗಳು ಯಾವುದೇ ಭಾಷೆಯನ್ನು ಕಲಿಯಲೂ ಸಿದ್ಧರಾಗಿದ್ದಾರೆ. ಹೀಗಾಗಿ ಹಿಂದಿಯನ್ನು ಐಚ್ಛಿಕ ಭಾ