Published : Apr 09, 2026, 07:12 AM ISTUpdated : Apr 09, 2026, 12:46 PM IST

Elections 2026 Live: ಪುದುಚೇರಿ ಚುನಾವಣೆ - ವೋಟಿಂಗ್‌ ಮಷಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ, ಬೈಕ್‌ನಲ್ಲಿ ಬಂದು ವೋಟ್‌ ಮಾಡಿದ ಸಿಎಂ ರಂಗಸ್ವಾಮಿ!

ಸಾರಾಂಶ

ನವದೆಹಲಿ (ಏ.9): ಅಸ್ಸಾಂ, ಕೇರಳ ಮತ್ತು ಪುದುಚೇರಿಗಳಲ್ಲಿ ಇಂದು ಭಾರೀ ಕುತೂಹಲ ಕೆರಳಿಸಿರುವ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ಚುನಾವಣೆಗಳು ಅಸ್ಸಾಂ ಮತ್ತು ಪುದುಚೇರಿಯಲ್ಲಿ ಆಡಳಿತಾರೂಢ ಎನ್‌ಡಿಎಯ ಜನಪ್ರಿಯತೆಯನ್ನು ಪರೀಕ್ಷೆ ಮಾಡಲಿದ್ದರೆ, ಈ ಪ್ರದೇಶಗಳಲ್ಲಿ ಇಂಡಿಯಾ ಒಕ್ಕೂಟವು ಮತ್ತೆ ಅಧಿಕಾರಕ್ಕೆ ಬರುವ ಸಾಮರ್ಥ್ಯವನ್ನು ಅಳೆಯಲಿದೆ. ಮತದಾನ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿ ಸಂಜೆ 6 ಗಂಟೆಯವರೆಗೆ ನಡೆಯಲಿದ್ದು, ಮತದಾನ ಸುಗಮವಾಗಿ ನಡೆಯಲು ಸಾಕಷ್ಟು ಭದ್ರತಾ ವ್ಯವಸ್ಥೆಗಳು, ವೆಬ್‌ಕಾಸ್ಟಿಂಗ್ ಮತ್ತು ವಿಶೇಷ ಮತದಾರರ ಸೌಲಭ್ಯಗಳನ್ನು ಅಳವಡಿಸಲಾಗಿದೆ.

 

12:46 PM (IST) Apr 09

ಪುದುಚೇರಿ ಚುನಾವಣೆ - ವೋಟಿಂಗ್‌ ಮಷಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ, ಬೈಕ್‌ನಲ್ಲಿ ಬಂದು ವೋಟ್‌ ಮಾಡಿದ ಸಿಎಂ ರಂಗಸ್ವಾಮಿ!

ಪುದುಚೇರಿ ವಿಧಾನಸಭಾ ಚುನಾವಣೆಯ ಮತದಾನದ ವೇಳೆ ಕರೈಕಲ್‌ನ ಮತಗಟ್ಟೆಯೊಂದರಲ್ಲಿ ವಿವಿಪ್ಯಾಟ್ ಯಂತ್ರದಿಂದ ಹೊಗೆ ಬಂದ ಕಾರಣ ಮತದಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಮುಖ್ಯಮಂತ್ರಿ ಎನ್. ರಂಗಸ್ವಾಮಿ ದ್ವಿಚಕ್ರ ವಾಹನದಲ್ಲಿ ಬಂದು ಮತ ಚಲಾಯಿಸಿ, ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

Read Full Story

12:06 PM (IST) Apr 09

11 ಗಂಟೆ ವೇಳೆಗೆ ಮತದಾನದ ಪ್ರಮಾಣ..

ಪಂಚರಾಜ್ಯ ವಿಧಾನಸಭಾ ಚುನಾವಣೆ

11 ಗಂಟೆ ಮತದಾನ ಪ್ರಮಾಣ

ಅಸ್ಸಾಂ - ಶೇ 38.92

ಕೇರಳಂ- ಶೇ 33.28

ಪುದುಚೇರಿ -ಶೇ 37.06

11:59 AM (IST) Apr 09

ಮತಯಂತ್ರದಲ್ಲಿ ವೀಣಾ ಜಾರ್ಜ್ ಫೋಟೋ ಮಾತ್ರ ಕ್ಲಿಯರ್, ಉಳಿದವರದ್ದು ಮಸುಕು! ಪತ್ತನಂತಿಟ್ಟದಲ್ಲಿ ಕಾಂಗ್ರೆಸ್ ದೂರು!

ಕೇರಳ ವಿಧಾನಸಭಾ ಚುನಾವಣೆಯ ವೇಳೆ, ಪತ್ತನಂತಿಟ್ಟ ಜಿಲ್ಲೆಯ ಮತಗಟ್ಟೆಯೊಂದರಲ್ಲಿ ಎಲ್‌ಡಿಎಫ್ ಅಭ್ಯರ್ಥಿ ವೀಣಾ ಜಾರ್ಜ್ ಅವರ ಫೋಟೋ ಮಾತ್ರ ಸ್ಪಷ್ಟವಾಗಿದ್ದು, ಇತರರ ಚಿತ್ರಗಳು ಮಸುಕಾಗಿವೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. 

Read Full Story

11:44 AM (IST) Apr 09

ಮತಗಟ್ಟೆಗೆ ಕ್ಯಾಮೆರಾ ಇರುವ ಕನ್ನಡಕ ಧರಿಸಿ ಬಂದ ಯುಡಿಎಫ್ ಏಜೆಂಟ್ - ಕಾಸರಗೋಡಿನಲ್ಲಿ ಹೈಡ್ರಾಮಾ, ಗ್ಲಾಸ್‌ ವಶಕ್ಕೆ!

ಕೇರಳದ ಉದುಮಾದಲ್ಲಿ, ಯುಡಿಎಫ್ ಮುಖ್ಯ ಚುನಾವಣಾ ಏಜೆಂಟ್ ಕ್ಯಾಮೆರಾ ಅಳವಡಿಸಿದ ಕನ್ನಡಕ ಧರಿಸಿ ಮತಗಟ್ಟೆಗೆ ಬಂದಿದ್ದು, ಚುನಾವಣಾ ನಿಯಮ ಉಲ್ಲಂಘನೆಯಾಗಿದೆ. ಎಲ್‌ಡಿಎಫ್ ಕಾರ್ಯಕರ್ತರ ಪ್ರತಿಭಟನೆಯ ನಂತರ, ಪೊಲೀಸರು ಕನ್ನಡಕವನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Read Full Story

10:54 AM (IST) Apr 09

ಸಿಎಂ ಪಿಣರಾಯ್ ವಿಜಯನ್ 10 ವರ್ಷದ ಆಡಳಿತಕ್ಕೆ ಬೇಸತ್ತ ಜನ: ಕೆ.ಸಿ.ವೇಣುಗೋಪಾಲ್

ಕೇರಳ ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಗುವುದು ಖಚಿತ. 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲ್ಲಿದ್ದೇವೆ. ಜನರು ಬದಲಾವಣೆಯ ನಿರೀಕ್ಷೆಯಲ್ಲಿದ್ದಾರೆ. ಇಂಥ ಮುಂಗೋಪಿ ಮುಖ್ಯಮಂತ್ರಿ ಇನ್ನೂ ಐದು ವರ್ಷ ಮುಂದುವರೆಸಬೇಕಾ ಎನ್ನುವ ಪ್ರಶ್ನೆ ಮತದಾರರನ್ನು ಕಾಡುತ್ತಿದೆ. ಎಲ್ಲಿ ಹೋದರೂ ಇಂಥ ಮುಖ್ಯಮಂತ್ರಿ ಇನ್ನು ಅಧಿಕಾರದಲ್ಲಿ ಇರಬಾರದೆಂಬ ಅಭಿಪ್ರಾಯವೇ ವ್ಯಕ್ತವಾಗುತ್ತಿದೆ. ಅಯ್ಯಪ್ಪನ ಬಂಗಾರವನ್ನು ಕದಿಯಲಾಗಿದೆ. ಆದರೆ,ಈ ಸರಕಾರ ಅವೆಲ್ಲವನ್ನೂ ಮುಚ್ಚಿ ಹಾಕಲು ಯತ್ನಿಸುತ್ತಿದೆ. ಜನ ತೀರ್ಪು ಇಂಥ ಚಿನ್ನ ಕಳ್ಳರ ವಿರುದ್ಧವೇ ಇರಲಿದೆ, ಎಂದು ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

10:41 AM (IST) Apr 09

ತ್ರಿ ರಾಜ್ಯ ಚುನಾವಣೆ: ಎಲ್ಲೆಲ್ಲಿ ಎಷ್ಟಾಯಿತು ವೋಟಿಂಗ್

ಕೇರಳ ವಿಧಾನಸಭಾ ಚುನಾವಣೆ. ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತಿರುವ ಕೇರಳ ಬಿಜೆಪಿ ಅಧ್ಯಕ್ಷ ಮತ್ತು ನೇಮಮ್‌ನ ಅಭ್ಯರ್ಥಿ ರಾಜೀವ್ ಚಂದ್ರಶೇಖರ್. ತಿರುವನಂತಪುರಂನ ಮತಗಟ್ಟೆಯಲ್ಲಿ ಸರತಿ ಸಾಲಲ್ಲಿ ನಿಂತು ಮತ ಚಲಾಯಿಸಿದ್ದಾರೆ. 9 ಗಂಟೆ ಹೊತ್ತಿಗೆ ದೇವರ ನಾಡಿನಲ್ಲಿ ಸುಮಾರು ಶೇ 16.2 ಮತದಾನ ನಡೆದಿದೆ 

ಅಸ್ಸಾಂ ವಿಧಾನಸಭಾ ಚುನಾವಣೆ

9 ಗಂಟೆಯ ಮತದಾನದಂತೆ ಶೇ 17.87 ಮತದಾನ ನಡೆದಿದೆ 

ಪುದುಚೆರಿಯಲ್ಲಿ  ಶೇ 17.41 ಮತದಾನ ನಡೆದಿದೆ.

09:51 AM (IST) Apr 09

ಪುದುಚೇರಿಯಲ್ಲಿ ಶೇ. 17.41 ರಷ್ಟು ಮತದಾನ

ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ 9 ಗಂಟೆಯ ಮತದಾನ ಪ್ರಮಾಣ ಪ್ರಕಟವಾಗಿದ್ದು, ಶೇ 17.41 ಮತದಾನ ನಡೆದಿದೆ.

09:50 AM (IST) Apr 09

ಅಸ್ಸಾಂನಲ್ಲಿ ಶೇ. 17.87ರಷ್ಟು ಮತದಾನ

ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ 9 ಗಂಟೆಯ ಮತದಾನ ಪ್ರಮಾಣ ಪ್ರಕಟವಾಗಿದ್ದು, ಶೇ 17.87 ಮತದಾನ ನಡೆದಿದೆ.

 

09:45 AM (IST) Apr 09

ಕೇರಳದಲ್ಲಿ ಬೆಳಗ್ಗೆ 9 ಗಂಟೆ ವೇಳೆಗೆ ಶೇ. 16.22 ರಷ್ಟು ಮತದಾನ

ಕೇರಳಂ ವಿಧಾನಸಭಾ ಚುನಾವಣೆಯಲ್ಲಿ 9 ಗಂಟೆಯ ಮತದಾನ ಪ್ರಮಾಣ ಪ್ರಕಟವಾಗಿದ್ದು,  ಶೇ 16.2 ಮತದಾನ ನಡೆದಿದೆ.

09:43 AM (IST) Apr 09

ಪುದುಚೇರಿ ಚುನಾವಣೆಯಲ್ಲಿ ವೋಟರ್‌ಗಳ ಸ್ವಾಗತಿಸಿದ ರೋಬೋಟ್ - ಸೀರೆ ತೊಟ್ಟು ಮತದಾರರನ್ನು ಸ್ವಾಗತಿಸಿದ ಸುಂದರಿ 'ನೀಲಾ'!

ಪುದುಚೇರಿ ವಿಧಾನಸಭಾ ಚುನಾವಣೆಯ ಮತಗಟ್ಟೆಯೊಂದರಲ್ಲಿ, ಸೀರೆ ಉಟ್ಟ 'ನೀಲಾ' ಎಂಬ ಹ್ಯೂಮನಾಯ್ಡ್ ರೋಬೋಟ್ ಮತದಾರರನ್ನು ಸ್ವಾಗತಿಸಿ, ಮಾಹಿತಿ ನೀಡುವ ಮೂಲಕ ಗಮನ ಸೆಳೆಯಿತು. ಕೊಯಮತ್ತೂರಿನ 'ರೋಬೋ ಮಿರರ್' ಸಂಸ್ಥೆ ಇದನ್ನು ಅಭಿವೃದ್ಧಿಪಡಿಸಿದೆ.

Read Full Story

09:15 AM (IST) Apr 09

ಮತ ಚಲಾವಣೆ ಮಾಡಿದ ನಟ ಮೋಹನ್‌ ಲಾಲ್‌

ಕೇರಳದ ಹಿರಿಯ ನಟ ಮೋಹನ್‌ ಲಾಲ್‌ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಅದರೊಂದಿಗೆ ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ.

08:54 AM (IST) Apr 09

ಕಾಳಜಿ ವಹಿಸುವ ಸರ್ಕಾರಕ್ಕೆ ಮತ ಚಲಾಯಿಸಿ: ಮಲ್ಲಿಕಾರ್ಜುನ ಖರ್ಗೆ

ಕೇರಳವು ತನ್ನ ಹೊಸ ಸರ್ಕಾರವನ್ನು ಆಯ್ಕೆ ಮಾಡಲು ಮತ ಚಲಾಯಿಸುತ್ತಿರುವಾಗ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ರಾಜ್ಯದ ಜನರನ್ನು ಕಾಳಜಿ ವಹಿಸುವ ಪಕ್ಷಕ್ಕೆ ಮತ ಚಲಾಯಿಸುವಂತೆ ಹೇಳಿದ್ದಾಎ.

X ಕುರಿತ ಪೋಸ್ಟ್‌ನಲ್ಲಿ, ಖರ್ಗೆ ಕೇರಳದ ಶಕ್ತಿ ವೈವಿಧ್ಯತೆಯಲ್ಲಿ ಏಕತೆಯಾಗಿದೆ ಮತ್ತು ವಿಭಜನೆ ಅಥವಾ ಗೊಂದಲದ ಮೂಲಕ ಆ ಶಕ್ತಿಯನ್ನು ದುರ್ಬಲಗೊಳಿಸಲು ಬಿಡಬೇಡಿ ಎಂದು ಕೇಳಿಕೊಂಡರು.

"ಕೇರಳದ ನನ್ನ ಪ್ರೀತಿಯ ಸಹೋದರಿಯರೇ ಮತ್ತು ಸಹೋದರರೇ, ನೀವು ಯಾವಾಗಲೂ ಶಿಕ್ಷಣ, ಘನತೆ, ಜಾತ್ಯತೀತ ಮೌಲ್ಯಗಳು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಿಂತಿದ್ದೀರಿ. ಪ್ರಗತಿಪರ ಚಿಂತನೆಯ ನಿಜವಾದ ಅರ್ಥವನ್ನು ನೀವು ರಾಷ್ಟ್ರಕ್ಕೆ ತೋರಿಸಿದ್ದೀರಿ. ಈಗ, ಮತ್ತೊಮ್ಮೆ, ಜವಾಬ್ದಾರಿ ನಿಮ್ಮ ಕೈಯಲ್ಲಿದೆ." ಎಂದು ಬರೆದಿದ್ದಾರೆ.

08:51 AM (IST) Apr 09

ಕೇರಳದಲ್ಲಿ 100 ಸ್ಥಾನಗಳ ಯುಡಿಎಫ್ ಗೆಲುವಿನ ಭವಿಷ್ಯ ನುಡಿದ ಕಾಂಗ್ರೆಸ್ ಸಂಸದೆ

ಗುರುವಾರ ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯಸಭಾ ಸಂಸದೆ ಜೆಬಿ ಮಾಥರ್ ತಮ್ಮ ಮತ ಚಲಾಯಿಸಿದರು. "ನಾನು ಮತ ಚಲಾಯಿಸಿದ್ದೇನೆ. ಕೇರಳದ ಜನರು ಈಗಾಗಲೇ ತಮ್ಮ ಮನಸ್ಸನ್ನು ಮಾಡಿದ್ದಾರೆ - 100 ಸ್ಥಾನಗಳನ್ನು ಹೊಂದಿರುವ ಯುಡಿಎಫ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ" ಎಂದು ಅವರು ಹೇಳಿದರು.

 

 

07:16 AM (IST) Apr 09

ಮತದಾರರಿಗೆ ಪ್ರಧಾನಿ ಮೋದಿ ಸಂದೇಶ

ಅಸ್ಸಾಂ, ಕೇರಳ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಆರಂಭವಾದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಮತದಾರರಿಗೆ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ.


More Trending News