ಬಾಂಗ್ಲಾ ಅಕ್ರಮ ವಲಸಿಗರ ಸಂಖ್ಯೆ ಶೇ.10 ರಷ್ಟು ಹೆಚ್ಚಾದರೂ ಅಸ್ಸಾಂ ಬಾಂಗ್ಲಾದೇಶದ ಭಾಗವಾಗಲಿದೆ: ಅಸ್ಸಾಂ ಸಿಎಂ

Published : Dec 24, 2025, 05:10 PM IST
Assam CM Himanta Biswa Sarma

ಸಾರಾಂಶ

ಅಸ್ಸಾಂನಲ್ಲಿ ಈಗಾಗಲೇ ರಾಜ್ಯದ ಜನಸಂಖ್ಯೆಯ ಶೇ. 40ರಷ್ಟು ಬಾಂಗ್ಲಾದೇಶಿಗರಿದ್ದುಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ ಶೇ. 10ರಷ್ಟು ಹೆಚ್ಚಾದರೆ, ರಾಜ್ಯವು ಸ್ವಯಂಚಾಲಿತವಾಗಿ ಬಾಂಗ್ಲಾದೇಶದ ಭಾಗವಾಗಲಿದೆ ಎಂದು ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಸರ್ಮಾ ಎಚ್ಚರಿಸಿದ್ದಾರೆ. 

ಛಬುವಾ: ದೇಶದೆಲ್ಲೆಡೆ ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ ತೀವ್ರವಾಗಿ ಹೆಚ್ಚಾಗಿರುವುದು ಗೊತ್ತೆ ಇದೆ. ಮುಂಬೈ ಮಹಾನಗರಿಯೊಂದರಲ್ಲೇ ಶೇಕಡಾ 70ರಷ್ಟು ಬಾಂಗ್ಲಾ ಅಕ್ರಮ ವಲಸಿಗರು ಭಾರತೀಯ ವೋಟರ್‌ಕಾರ್ಡ್ ಹೊಂದಿದ್ದಾರೆ ಎಂಬ ವಿಚಾರವೊಂದು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ಹೀಗಿರುವಾಗ ಅಕ್ರಮ ವಲಸಿಗರು ತೀವ್ರವಾಗಿ ಹೆಚ್ಚಿರುವ ಅಸ್ಸಾಂನಲ್ಲಿ ಇನ್ನೂ ಶೇಕಡಾ 10ರಷ್ಟು ಬಾಂಗ್ಲಾ ಅಕ್ರಮ ವಲಸಿಗರು ಹೆಚ್ಚಾದರೂ ಅಸ್ಸಾಂ ಬಾಂಗ್ಲಾದ ಪಾಲಾಗಲಿದೆ ಎಂದು ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಸರ್ಮಾ ಹೇಳಿದ್ದಾರೆ. ಈಶಾನ್ಯ ಭಾರತದ ರಾಜ್ಯಗಳಲ್ಲಿ ಬಾಂಗ್ಲಾದೇಶಿ ಅಕ್ರಮ ವಲಸಿಗರ ಸಂಖ್ಯೆ ಶೇಕಡಾ 10ರಷ್ಟು ಹೆಚ್ಚಾದರು ಆ ಭಾಗಗಳು ಸ್ವಯಂಚಾಲಿತವಾಗಿ ಬಾಂಗ್ಲಾದೇಶದ ಭಾಗವಾಗಲಿದೆ ಎಂದು ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಸರ್ಮಾ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಸರ್ಮಾ ಅವರು, ಕಳೆದ 5 ವರ್ಷಗಳಿಂದಲೂ ಈ ವಿಚಾರದ ಬಗ್ಗೆ ನಾನು ಧ್ವನಿ ಎತ್ತಿದ್ದೇನೆ. ಅಸ್ಸಾಂನಲ್ಲಿ ಅಲ್ಲಿನ ಜನಸಂಖ್ಯೆಯ ಶೇ. 40ರಷ್ಟು ಜನರು ಬಾಂಗ್ಲಾದೇಶಿಗರಾಗಿದ್ದಾರೆ. ಈ ಪ್ರಮಾಣವೂ ಶೇ. 10ಕ್ಕೆ ಏರಿಕೆಯಾದರೆ ನಾವು ಸ್ವಯಂಚಾಲಿತವಾಗಿ ಬಾಂಗ್ಲಾದೇಶಕ್ಕೆ ಸೇರಿದಂತೆ ಎಂದು ಅವರು ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧದ ಹಿಂಸಾಚಾರದ ಮಧ್ಯೆ ಅಲ್ಲಿನ ನಾಯಕರು ಭಾರತದ ಸೆವೆನ್ ಸಿಸ್ಟರ್ ಎಂದು ಕರೆಯಲ್ಪಡುವ ಈಶಾನ್ಯದ 7 ರಾಜ್ಯಗಳನ್ನು ಬಾಂಗ್ಲಾದ ಜೊತೆ ವಿಲೀನ ಮಾಡಿಕೊಳ್ಳುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ಹೇಳಿಕೆಗೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಸರ್ಮಾ, ಇದೇ ಕಾರಣಕ್ಕೆ ನಾನು ಕಳೆದ 5 ವರ್ಷಗಳಿಂದ ಬೊಬ್ಬೆ ಹೊಡೆಯುತ್ತಿರುವುದು ಎಂದು ಹೇಳಿದರು.

ಇದನ್ನೂ ಓದಿ: ಲೈಂಗಿಕ ಕಿರುಕುಳದ ಆರೋಪದ ನಂತರ ವಿದ್ಯಾರ್ಥಿ ಸಾವು: 4ನೇ ಮಹಡಿಯಿಂದ ಕೆಳಗೆ ಹಾರಿರುವ ಶಂಕೆ

ಈ ತಿಂಗಳ ಆರಂಭದಲ್ಲಿ ಬಾಂಗ್ಲಾದೇಶದಲ್ಲಿ ಹೊಸದಾಗಿ ರಚನೆಯಾದ ನ್ಯಾಷನಲ್ ಸಿಟಿಜನ್ ಪಾರ್ಟಿಯ ನಾಯಕ ಹಸ್ನತ್ ಅಬ್ದುಲ್ಲಾ ಮಾತನಾಡುತ್ತಾ, ಢಾಕಾವೂ ಭಾರತ ಈಶಾನ್ಯ ಭಾರತದ ರಾಜ್ಯಗಳನ್ನು ವಶಕ್ಕೆ ಪಡೆಯಬೇಕು ಹಾಗೂ ನವದೆಹಲಿಯೂ ಬಾಂಗ್ಲಾದೇಶವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡಿದರೆ, ಆ ಪ್ರದೇಶದಲ್ಲಿ ಪ್ರತ್ಯೇಕತೆಗೆ ಬೆಂಬಲಿಸಬೇಕು ಎಂದು ಹೇಳಿಕೆ ನೀಡಿದ್ದ. ಈಶಾನ್ಯ ರಾಜ್ಯಗಳು ಭೌಗೋಳಿಕವಾಗಿ ದುರ್ಬಲವಾಗಿವೆ ಏಕೆಂದರೆ ಅವು ಭಾರತೀಯ ಮುಖ್ಯ ಭೂಭಾಗದ ಸಂಪರ್ಕಕ್ಕಾಗಿ 'ಚಿಕನ್ ನೆಕ್' ಎಂದೂ ಕರೆಯಲ್ಪಡುವ ಕಿರಿದಾದ 'ಸಿಲಿಗುರಿ ಕಾರಿಡಾರ್' ಅನ್ನು ಅವಲಂಬಿಸಿವೆ ಎಂದು ಅಬ್ದುಲ್ಲಾ ಹೇಳಿದ್ದರು.

ಇದನ್ನೂ ಓದಿ: ಲಕ್ಸುರಿ ಕಾರುಗಳು, 1 ಕೇಜಿ ಚಿನ್ನ 100 ಕೋಟಿ ಆಸ್ತಿ: ಟ್ರಾನ್ಸ್‌ಪೋರ್ಟ್ ಅಧಿಕಾರಿಯ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆಳೆದ ಎಸಿಬಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

‘ಭಾರತದಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯಗಳ ಬಗ್ಗೆ ಬರೆಯಿರಿ..’: ಜಾಮಿಯಾ ಸೆಮಿಸ್ಟರ್ ಪರೀಕ್ಷೆ ಪ್ರಶ್ನೆ ಈಗ ವಿವಾದ, ಪ್ರೊಫೆಸರ್‌ ಅಮಾನತು
ಇಂಡಿಗೋ ಬಿಕ್ಕಟ್ಟಿನ ಬಳಿಕ ಎಚ್ಚೆತ್ತ ಕೇಂದ್ರ ಸರ್ಕಾರ, ಎರಡು ಹೊಸ ಏರ್‌ಲೈನ್ಸ್‌ಗೆ ಸಿಕ್ತು NOC