
ಅಸ್ಸಾಂ (ಮೇ 22): ಗಾಂಜಾ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಶಿಶ್ನವನ್ನು ಕತ್ತರಿಸಿದ ವಿಲಕ್ಷಣ ಘಟನೆ ಮೇ 19 ರಂದು ಅಸ್ಸಾಂನಲ್ಲಿ ನಡೆದಿದೆ. ಸೋನಿತ್‌ಪುರ ಜಿಲ್ಲೆಯ ದೇಕರ್ ಗ್ರಾಮದ ಎಂಡಿ ಸಹಜುಲ್ ಅಲಿ ಮಾನಸಿಕ ಅಸ್ವಸ್ಥ ಎಂದು ವರದಿಯಾಗಿದೆ. ಸಹಜುಲ್ ಅಲಿ ಗಾಂಜಾ ಸೇವಿಸಿ ಅಮಲಿನ ಸ್ಥಿತಿಯಲ್ಲಿದ್ದಾಗ ತನ್ನ ಶಿಶ್ನವನ್ನು ಕತ್ತರಿಸಿಕೊಂಡಿದ್ದಾನೆ, ಅಲ್ಲದೇ ಸಹಜುಲ್ ಅಲಿ ಗಾಂಜಾ ವ್ಯಸನಿಯಾಗಿದ್ದ ಎಂದು ತಿಳಿದುಬಂದಿದೆ.
ಗುವಾಹಟಿ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, ಅಲಿ ತನ್ನ ಧರ್ಮದಲ್ಲಿ ಗಾಂಜಾ ಸೇವನೆಯನ್ನು ಪಾಪವೆಂದು ಪರಿಗಣಿಸಲಾಗುತ್ತದೆ ಎಂದು ವಿವರಿಸಿದ್ದಾನೆ. ಆದರೆ ಅಲಿಗೆ ಡ್ರಗ್ ಇಲ್ಲದೆ ಬದುಕಲು ಸಾಧ್ಯವಿರಲಿಲ್ಲ. ಆದ್ದರಿಂದ, "ನನ್ನ ಪಾಪಗಳಿಗಾಗಿ ಪಶ್ಚಾತ್ತಾಪ ಪಡಲು ಶಿಶ್ನವನ್ನು ಕತ್ತರಿಸಿದ್ದೇನೆ" ಎಂದು ಅಲಿ ಹೇಳಿದ್ದಾನೆ.
“ನನ್ನ ಧರ್ಮವು ನನಗೆ ಗಾಂಜಾವನ್ನು ತೆಗೆದುಕೊಳ್ಳಲು ಅನುಮತಿಸುವುದಿಲ್ಲ. ನಾನು ಅದನ್ನು ಸೇದಿದ ನಂತರ, ಸಮಾಜಕ್ಕೆ ಏನಾದರೂ ಕೆಟ್ಟದಾಗಿ ಸಂಭವಿಸಲಿದೆ ಎಂದು ನಾನು ಯೋಚಿಸುತ್ತಿದ್ದೆ. ಹೆಚ್ಚಿನ ಒಳಿತಿಗಾಗಿ ಮತ್ತು ನನ್ನ ಕ್ರಿಯೆಗೆ ಪಶ್ಚಾತ್ತಾಪ ಪಡುವುದಕ್ಕಾಗಿ ನಾನು ನನ್ನ ಶಿಶ್ನವನ್ನು ಕತ್ತರಿಸಿದ್ದೇನೆ" ಎಂದು ಅಲಿ ಸಂದರ್ಶನದಲ್ಲಿ ಹೇಳಿದ್ದಾನೆ.
ಇದನ್ನೂ ಓದಿ: 2 ಶಿಶ್ನಗಳೊಂದಿಗೆ ಮಗು ಜನನ: ಶಸ್ತ್ರಚಿಕಿತ್ಸೆ ಮೂಲಕ ದೊಡ್ಡದನ್ನು ಕತ್ತರಿಸಿದ ವೈದ್ಯರು
ಮಾಧ್ಯಮಗಳೊಂದಿಗೆ ಮಾತನಾಡಿದ ಅಲಿ ಅವರ ಪುತ್ರ, ಅವರು ಮಾನಸಿಕವಾಗಿ ಅಸ್ಥಿರರಾಗಿದ್ದಾರೆ ಮತ್ತು ಅವರು ಧರ್ಮದ ಭಯದಿಂದ ಇಂತಹ ವಿಲಕ್ಷಣ ಕೆಲಸವನ್ನು ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. 2003 ರಲ್ಲಿ ಒಂದು ಬಾರಿ ಸಿಂಹದೊಂದಿಗೆ ರಾತ್ರಿ ಕಳೆದಿದ್ದನ್ನು ಒಳಗೊಂಡಂತೆ ಅವರು ಈಗ ಹಲವು ವರ್ಷಗಳಿಂದ ಇಂತಹ ವಿಚಿತ್ರ ಸನ್ನಿವೇಶಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅಲಿ ಅವರ ಸ್ನೇಹಿತ ಉಲ್ಲೇಖಿಸಿದ್ದಾರೆ.
ಇನ್ನು ಫೆಬ್ರವರಿಯಲ್ಲಿ, ಥಾಯ್ಲೆಂಡ್‌ನಲ್ಲಿ ವ್ಯಕ್ತಿಯೊಬ್ಬ ಗಾಂಜಾ ಸೇದಿದ ನಂತರ ಅವನ ಸಂಪೂರ್ಣ ಶಿಶ್ನವನ್ನು ಕತ್ತರಿಯಿಂದ ಕತ್ತರಿಸಿದ ಘಟನೆ ನಡೆದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ