ಭೋಜಶಾಲಾ ಮಸೀದಿ ಸಮೀಕ್ಷೆ: ಕಂದಕ ತೋಡಿ ಎಎಸ್‌ಐ ಸರ್ವೇ

By Kannadaprabha NewsFirst Published Mar 29, 2024, 9:27 AM IST
Highlights

ಭೋಜಶಾಲಾ ದೇಗುಲದಲ್ಲಿ ಇತಿಹಾಸದ ಪ್ರಕಾರ ರಾಜ ಭೋಜ ಎಂಬ ದೊರೆ ವಾಗ್ದೇವಿಯ ವಿಗ್ರಹವನ್ನು ಕ್ರಿ.ಶ.1034ರಲ್ಲಿ ಪ್ರತಿಷ್ಠಾಪನೆ ಮಾಡಿದ್ದ. ಅದನ್ನು ಬ್ರಿಟಿಷರು 1875ರಲ್ಲಿ ಲಂಡನ್‌ಗೆ ಕೊಂಡೊಯ್ದಿರುವುದಾಗಿ ತಿಳಿಸಿದ ಹಿಂದೂ ಪರ ಅರ್ಜಿದಾರರು 

ಧಾರ್‌(ಮ.ಪ್ರ.)(ಮಾ.29):  ವಿವಾದಿತ ಭೋಜಶಾಲಾ ದೇಗುಲ ಮತ್ತು ಮಸೀದಿಯ ಸಮೀಕ್ಷೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮುಂದುವರೆಸಿದ್ದು, 7ನೇ ದಿನವಾದ ಗುರುವಾರ ಕಂದಕಗಳನ್ನು ತೋಡಿ ಪರಿಶೀಲನೆ ನಡೆಸಿದೆ.

ಈ ವೇಳೆ ಹಿಂದೂಗಳ ಪರವಾಗಿ ಸರಸ್ವತಿ ದೇಗುಲದ ಆಶಿಶ್‌ ಗೋಯಲ್‌ ಹಾಗೂ ಗೋಪಾಲ್‌ ಶರ್ಮಾ ಉಪಸ್ಥಿತರಿದ್ದರೆ, ಕಮಲ ಮೌಲಾ ಮಸೀದಿಯ ಪರವಾಗಿ ಅಬ್ದುಲ್‌ ಸಮದ್‌ ಹಾಜರಿದ್ದರು. ಈ ವೇಳೆ ಮಾತನಾಡಿದ ಸಮದ್‌, ‘ಎಎಸ್‌ಐ ತನ್ನ ಸಮೀಕ್ಷಾ ಕಾರ್ಯವನ್ನು ಮಾಡುತ್ತಿದ್ದು, ಗುರುವಾರ ಪ್ರಾಂಗಣದ ಹಿಂಬದಿಯಲ್ಲಿ 6 ಅಡಿ ಆಳದ ಮೂರು ಕಂದಕಗಳನ್ನು ತೋಡಿ ಪರಿಶೀಲನೆ ಕೈಗೊಂಡಿದೆ. ಆದರೆ ನಾವು 2003ರ ಬಳಿಕ ಪ್ರತಿಷ್ಠಾಪಿಸಲಾದ ವಸ್ತುಗಳನ್ನು ಸಮೀಕ್ಷೆಯ ಭಾಗವಾಗಿ ಬಳಸಬೇಡಿ ಎಂದು ಕೋರುತ್ತೇವೆ’ ಎಂದು ತಿಳಿಸಿದರು.

ಭೋಜಶಾಲಾ ಮಸೀದಿ ಮೂಲತಃ ಸರಸ್ವತಿ ದೇಗುಲ: ಖ್ಯಾತ ಇತಿಹಾಸ ತಜ್ಞ ಮೊಹಮ್ಮದ್‌

ವಾಗ್ದೇವಿ ವಿಗ್ರಹ ಒಯ್ದಿದ್ದ ಬ್ರಿಟಿಷರು:

ಭೋಜಶಾಲಾ ದೇಗುಲದಲ್ಲಿ ಇತಿಹಾಸದ ಪ್ರಕಾರ ರಾಜ ಭೋಜ ಎಂಬ ದೊರೆ ವಾಗ್ದೇವಿಯ ವಿಗ್ರಹವನ್ನು ಕ್ರಿ.ಶ.1034ರಲ್ಲಿ ಪ್ರತಿಷ್ಠಾಪನೆ ಮಾಡಿದ್ದ. ಅದನ್ನು ಬ್ರಿಟಿಷರು 1875ರಲ್ಲಿ ಲಂಡನ್‌ಗೆ ಕೊಂಡೊಯ್ದಿರುವುದಾಗಿ ಹಿಂದೂ ಪರ ಅರ್ಜಿದಾರರು ತಿಳಿಸಿದ್ದಾರೆ.

click me!