
ಮುಂಬೈ: ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿಯನ್ನ ಅವರ ಬಾಲ್ಯದ ಗೆಳೆಯರೊಬ್ಬರು ಭೇಟಿಯಾಗಿದ್ದರು. 81 ವರ್ಷದ ಸ್ನೇಹಿತ ತಮ್ಮ ಸಮಸ್ಯೆಯನ್ನ ಹೇಳಿಕೊಂಡು ಗೆಳೆಯನ (ಮೋದಿ) ಸಹಾಯ ಕೇಳಿದ್ದರು. ವಿಶೇಷ ಅಂದರೆ ದಶಕಗಳಿಂದ ಬಗೆಹರಿಯದಿದ್ದ ಆ ಸಮಸ್ಯೆ ಕೆಲವೇ ದಿನದಲ್ಲಿ ಬಗೆಹರಿದಿದೆ.
ಅಂದಹಾಗೆ ಮೋದಿ ಅವರ ಕ್ಲಾಸ್‌ಮೆಟ್ ಹೆಸರು ಅಸ್ಗರ್ ಅಲಿ ವೋರಾ (81). ಇವರಿಬ್ಬರು ಗುಜರಾತ್‌ನ ವಡ್‌ನಗರದ ಬಿ.ಎನ್.ಶಾಲೆಯಲ್ ಒಟ್ಟಿಗೆ ಓದಿದವರು. ಅಸ್ಗರ್ ಸಮಸ್ಯೆ ನೋಡೋದಾರೆ.. 1989ರಲ್ಲಿ ಮಹಾರಾಷ್ಟ್ರದ ಮೀರಾ-ಭಾಯಂದರ್‌ನಲ್ಲಿ ಸುಮಾರು 2,810 ಚದರ ಮೀಟರ್ ಜಮೀನನ್ನು ಕಾನೂನುಬದ್ಧವಾಗಿ ಖರೀದಿಸಿದ್ದರು. 2011ರಲ್ಲಿ ವೋರಾಗೆ ತಿಳಿಯದಂತೆ ಕೆಲವರು ನಕಲಿ ದಾಖಲೆ ಸೃಷ್ಟಿಸಿ ಆ ಜಮೀನನ್ನು ಎರಡು ಭಾಗ ಮಾಡಿದ್ದರು. ಇದರಲ್ಲಿ ಒಂದು ಭಾಗವನ್ನು ಬಿಜೆಪಿ ಮುಖಂಡ ನರೇಂದ್ರ ಮೆಹ್ತಾಗೆ ಸೇರಿದ ಸೆವೆನ್ ಇಲೆವೆನ್ ಕನ್ಸ್‌ಟ್ರಕ್ಷನ್ಸ್ ಎಂಬ ಕಂಪನಿಗೆ ಬರೆದುಕೊಡಲಾಗಿತ್ತು.
ಕೊನೆಗೆ ಒಂದು ದಿನ ತಾವು ಮೋಸ ಹೋಗಿರೋದು ಅಸ್ಗರ್‍ಗೆ ಗೊತ್ತಾಗಿದೆ. ಆ ಜಾಗವನ್ನು ವಾಪಸ್ ಪಡೆಯಲು ಪ್ರಯತ್ನಿಸಿದರು. ಇತ್ತ ಅಸ್ಗರ್ ಅವರ ವಿರೋಧದ ನಡುವೆಯೂ ಅಲ್ಲಿನ ಪಾಲಿಕೆ ಬಿಲ್ಡರ್‍ಗಳಿಗೆ ಕಟ್ಟಡ ಕಟ್ಟಲು ಅನುಮತಿ ಮಾಡಿಕೊಟ್ಟಿತ್ತು. ಈ ಸಂಬಂಧ 2015ರಲ್ಲಿ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ.
ನ್ಯಾಯಕ್ಕಾಗಿ ವರ್ಷಗಳಿಂದ ಅಲೆದಾಡಿ ಸುಸ್ತಾಗಿದ್ದ ಅಸ್ಗರ್ ಅಲಿ, ಸೆಪ್ಟೆಂಬರ್ 8 ರಂದು ತಮ್ಮ ಹಳೆಯ ಗೆಳೆಯ ಪ್ರಧಾನಿ ನರೇಂದ್ರ ಮೋದಿಯನ್ನು ಖುದ್ದಾಗಿ ಭೇಟಿಯಾದರು. ತಮಗಾದ ಅನ್ಯಾಯವನ್ನು ವಿವರಿಸಿ, CBI ತನಿಖೆ ನಡೆಸುವಂತೆ ಮನವಿ ಮಾಡಿದರು. ಮೋದಿ ಭೇಟಿ ಬೆನ್ನಲ್ಲೇ ವಿವಾದಿತ ಜಾಗದಲ್ಲಿ ಕಟ್ಟಡ ಕಟ್ಟಲು ಪಡೆದಿದ್ದ ಅನುಮತಿಯನ್ನು (Construction Permission) ‘ಸೆವೆನ್ ಇಲೆವೆನ್’ ಕಂಪನಿಯು ಪಾಲಿಕೆಗೆ ವಾಪಸ್ ಒಪ್ಪಿಸಿದೆ. ತಾವು ಕಟ್ಟಡ ಕಟ್ಟುವುದಿಲ್ಲ ಎಂದು ಅಧಿಕೃತವಾಗಿ ತಿಳಿಸಿದೆ.
ಈ ಹಿಂದೆ ವೋರಾ ಮತ್ತು ಅವರ ಕಡೆಯವರ ಮೇಲೆ ದಾಖಲಿಸಲಾಗಿದ್ದ ಹಳೆಯ ಪೊಲೀಸ್ ದೂರನ್ನು ಬಿಲ್ಡರ್ ಕಡೆಯವರು ವಾಪಸ್ ಪಡೆದಿದ್ದಾರೆ. ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಸಚಿವ ಪ್ರತಾಪ್ ಸರ್ನಾಯಕ್, ಪ್ರಧಾನಿ ಮೋದಿ ಮತ್ತು ಅಸ್ಗರ್ ಅಲಿ ವೋರಾ ಭೇಟಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಶಾಲಾ ಗೆಳೆಯನಿಗೆ ಅಂತಿಮವಾಗಿ ನ್ಯಾಯ ದೊರಕಿಸಿಕೊಟ್ಟಿದ್ದಾರೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ