ಬೇಲ್‌ ನಿರಾಕರಿಸಲು ನಾನು ಬಿಲ್ಲಾ- ರಂಗಾ ಅಲ್ಲ: ಚಿದಂಬರಂ

By Web Desk  |  First Published Nov 28, 2019, 8:44 AM IST

ಪಿ.ಚಿದಂಬರಂ ಅವರಿಗೆ ಪದೇ ಪದೇ ಜಾಮೀನು ನಿರಾಕರಿಸುತ್ತಿರುವುದಕ್ಕೆ ತೀವ್ರ ಆಕ್ಷೇಪ| ಚಿದು ಬಿಲ್ಲಾ-ರಂಗಾ ಅಲ್ಲ; ಸುಪ್ರೀಂನಲ್ಲಿ ಸಿಬಲ್‌ ಗರಂ| 


ನವದೆಹಲಿ[ನ.28]: ಐಎನ್‌ಎಕ್ಸ್‌ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಪಿ.ಚಿದಂಬರಂ ಅವರಿಗೆ ಪದೇ ಪದೇ ಜಾಮೀನು ನಿರಾಕರಿಸುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಕೀಲ ಕಪಿಲ್‌ ಸಿಬಲ್‌, ಹೀಗೆ ಜಾಮೀನು ನಿರಾಕರಿಸಲು ಇಬ್ಬರು ಮಕ್ಕಳ ಅಪಹರಣ ಕೊಲೆ ಕೇಸಲ್ಲಿ 1978ರಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಬಿಲ್ಲಾ-ರಂಗಾ ಅಲ್ಲ ಎಂದು ವಾದಿಸಿದ ಘಟನೆ ಬುಧವಾರ ಸುಪ್ರೀಂಕೋರ್ಟ್‌ನಲ್ಲಿ ನಡೆಯಿತು.

ಆದರೆ ಈ ವಾದದ ಹೊರತಾಗಿಯೂ ಕೋರ್ಟ್‌ ಚಿದು ಅವರ ನ್ಯಾಯಾಂಗ ವಶವನ್ನು ಡಿ.11ರವರೆಗೆ ವಿಸ್ತರಿಸಿತು. ಈ ನಡುವೆ ಕಾಂಗ್ರೆಸ್‌ ಮುಖಂಡರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಬುಧವಾರ ಭೇಟಿಯಾಗಿದ್ದು, ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

Tap to resize

Latest Videos

ಒಬ್ಬ ವ್ಯಕ್ತಿಯನ್ನು 99 ದಿನಗಳ ಕಾಲ ಬಂಧನದಲ್ಲಿ ಇರಿಸಿರುವುದು ನ್ಯಾಯಸಮ್ಮತವಲ್ಲ ಎಂದರು. ಇದೇ ವೇಳೆ ಐಎನ್‌ಎಕ್ಸ್‌ ಮೀಡಿಯಾ ಕೇಸಲ್ಲಿ ಚಿದು ಅವರ ನ್ಯಾಯಾಂಗ ವಶವನ್ನು ಡಿ.11ರವರೆಗೂ ಸುಪ್ರೀಂಕೋರ್ಟ್‌ ವಿಸ್ತರಿಸಿದೆ.

click me!