
ಭಾರತದ 79ನೇ ಸ್ವಾತಂತ್ರ ದಿನಾಚರಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಹೀಗಿರುವಾಗ ಅರುಣಾಚಲದ ಪ್ರದೇಶದ ಪುಟಾಣಿಯೊಬ್ಬಳು ನಮ್ಮ ದೇಶದ ರಾಷ್ಟ್ರಗೀತೆಗೆ ದನಿಗೂಡಿಸುತ್ತಿರುವ ಮುದ್ದಾದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. 79ನೇ ಸ್ವಾತಂತ್ರ ದಿನಾಚರಣೆಗೆ ಬರೀ 3 ದಿನವಷ್ಟೇ ಬಾಕಿ ಇದ್ದು, 79ರ ಸಂಭ್ರಮಕ್ಕಾಗಿ ಇಡೀ ದೇಶ ಸಜ್ಜುಗೊಳ್ಳುತ್ತಿದೆ. ಹೀಗಿರುವಾಗ ಅರುಣಾಚಲದ ಪುಟಾಣಿಯೊಬ್ಬಳು ನಮ್ಮ ರಾಷ್ಟ್ರಭಕ್ತಿಗೀತೆಯಾದ ಜನಗಣಮನಕ್ಕೆ ಕಣ್ಣುಮುಚ್ಚಿ ದನಿಗೂಡಿಸುತ್ತಿರುವ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗಿದೆ.
ಅರುಣಾಚಲದ ಪುಟಾಣಿಯ ವೀಡಿಯೋ ಭಾರಿ ವೈರಲ್
ಶಾಲಾ ಸಮವಸ್ತ್ರ ಧರಿಸಿರುವ ಪುಟಾಣಿ ಕಣ್ಣುಗಳನ್ನು ಮುಚ್ಚಿ ಬಹಳ ಭಾವಪರವಶವಾದವಳಂತೆ ನಮ್ಮ ದೇಶದ ರಾಷ್ಟ್ರಗೀತೆಗೆ ದನಿಗೂಡಿಸಿದ್ದಾಳೆ, ಮೈಕ್‌ನಲ್ಲಿ ಜನಗಣಮನ ಹಾಡು ಜೋರಾಗಿ ಸಂಗೀತಾದೊಂದಿಗೆ ಕೇಳಿ ಬರುತ್ತಿದ್ದರೆ, ಈ ಪುಟ್ಟ ಹುಡುಗಿಯೂ ಭಾವಪರವಶವಾಗಿ ಹಾಡಿದ್ದಾಳೆ. ಈ ವೀಡಿಯೋವನ್ನು ಅರುಣಾಚಲ ಪ್ರದೇಶದ ರಾಜ್ಯ ಬಿಜೆಪಿ ವಕ್ತಾರ Mutchu Mithi(@Mutchu4) ಎಂಬುವವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. 'ಅರುಣಾಚಲದಲ್ಲಿ ಎಲ್ಲೋ ಒಂದು ಸಣ್ಣ ಧ್ವನಿಯು ಪ್ರಬಲ ರಾಷ್ಟ್ರಗೀತೆಯನ್ನು ಪ್ರತಿಧ್ವನಿಸುತ್ತಾ, 'ನಾನು ಭಾರತ ಮತ್ತು ಭಾರತ ನಾನು' ಎಂದು ಜಗತ್ತಿಗೆ ತಿಳಿಸುತ್ತದೆ. ಜೈ ಹಿಂದ್' ಎಂದು ಅವರು ಬರೆದುಕೊಂಡಿದ್ದಾರೆ. 49 ಸೆಕೆಂಡ್‌ಗಳ ವೀಡಿಯೋವನ್ನು 4 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು ಪುಟ್ಟ ಬಾಲಕಿಯ ಕ್ಯೂಟ್ನೆಸ್ ಜೊತೆಗೆ ದೇಶಭಕ್ತಿಗೆ ತಲೆಬಾಗಿದ್ದಾರೆ. ವೀಡಿಯೋದ ಆರಂಭದಲ್ಲಿ ಕಣ್ಣು ಮುಚ್ಚಿ ರಾಷ್ಟ್ರಗೀತೆ ಹಾಡಲು ಶುರು ಮಾಡಿದ ಈ ಮಗು ಸಂಪೂರ್ಣ ಹಾಡು ಮುಗಿಯುವವರೆಗೂ ತನ್ನ ಕಣ್ಣನ್ನು ತೆರೆಯದೇ ಹಾಡಿನಲ್ಲಿ ಮಗ್ನಳಾಗಿದ್ದಾಳೆ.
ಮಗುವಿನ ದೇಶಭಕ್ತಿಗೆ ಫಿದಾ ಆದ ನೆಟ್ಟಿಗರು:
ವೀಡಿಯೋ ನೋಡಿದ ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಭಾರತದ ಈ ಹೆಣ್ಣು ಮಕ್ಕಳು ಮತ್ತು ಮೊಮ್ಮಕ್ಕಳು ರಾಷ್ಟ್ರದ ಹೆಮ್ಮೆಯ ರಕ್ಷಕರಾಗುತ್ತಾರೆ. ಹೆಮ್ಮೆ, ಸುಂದರ, ಬಲಿಷ್ಠ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ತುಂಬಾ ಮುದ್ದಾಗಿದೆ. ಅವರು ನಮ್ಮ ಉತ್ತರ ಮತ್ತು ದಕ್ಷಿಣ ಬ್ರಿಗೇಡ್‌ನ ಎಚ್ಚರಗೊಂಡ ವಿದ್ಯಾರ್ಥಿಗಳಿಗಿಂತ ಹೆಚ್ಚು ದೇಶಭಕ್ತರಾಗುತ್ತಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ. ನಮ್ಮ ಈಶಾನ್ಯ ಸಹೋದರ ಸಹೋದರಿಯರನ್ನು ನಿಂದಿಸುವ ಇದನ್ನು ನೋಡಿ ನಾಚಿಕೆಪಡಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.ಈ ಮಗು ತುಂಬಾ ಮುದ್ದಾಗಿದೆ. ಅದರ ಏಕಾಗೃತೆಯೂ ಚೆನ್ನಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಹೆಣ್ಣು ಮಗುವಿನ ಗಾಯನದಿಂದ ರಾಷ್ಟ್ರಗೀತೆ ಇನ್ನಷ್ಟು ಮುದ್ದಾಗಿ ಮೂಡಿಬಂದಿದೆ. ಸುಂದರ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಅವಳ ಪುಟ್ಟ ಧ್ವನಿಯಲ್ಲಿ, ಅರುಣಾಚಲದ ಪರ್ವತಗಳು ಮತ್ತು ಭಾರತದ ಹೃದಯದ ಪ್ರತಿಧ್ವನಿಗಳನ್ನು ನಾನು ಕೇಳುತ್ತೇನೆ. ದೇಶಭಕ್ತಿಯನ್ನು ಹಾಡುವುದು ಮಾತ್ರವಲ್ಲ, ಜೀವಂತಗೊಳಿಸಬೇಕು ಎಂಬುದಕ್ಕೆ ಇದು ಜ್ಞಾಪನೆ. ಜೈ ಹಿಂದ್ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಮಗುವಿಗೆ ರಾಷ್ಟ್ರೀಯತೆಯ ಚೈತನ್ಯವನ್ನು ಕಲಿಸಿದ ಪುಟ್ಟ ದೇವತೆಗಳ ಪೋಷಕರಿಗೆ ಧನ್ಯವಾದಗಳು. ಭಾರತದ ಉಳಿದ ಹೊಸ ಪೀಳಿಗೆಯ ಪೋಷಕರು ಮುಂದೆ ಆ ಹೆಜ್ಜೆಗಳನ್ನು ಇಡಬೇಕೆಂದು ನಾನು ಬಯಸುತ್ತೇನೆ. ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ಉಳಿದ ಭಾಗಗಳಿಗಿಂತ ಹೆಚ್ಚಿನ ಈಶಾನ್ಯ ಮಕ್ಕಳು ಹೆಚ್ಚು ರಾಷ್ಟ್ರೀಯತೆಯ ಪರವಾಗುತ್ತಿದ್ದಾರೆ ಎಂಬುದನ್ನು ನಾನು ನೋಡುತ್ತಿದ್ದೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಹಾಗಿದ್ರೆ ತಡ ಯಾಕೆ ನೀವು ಈ ಮುದ್ದಾದ ಮಗು ರಾಷ್ಟ್ರಗೀತೆ ಹಾಡುತ್ತಿರುವ ವೀಡಿಯೋವನ್ನು ನೋಡಿ ನಿಮಗೇನನಿಸಿತು ಕಾಮೆಂಟ್ ಮಾಡಿ. ವೀಡಿಯೋ ಲಿಂಕ್ ಕೆಳಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ