ಸೇನೆಗಾಗಿ ನಿರ್ಮಿಸಿದ ಅಟಲ್‌ ಸುರಂಗದಲ್ಲಿ ಸೇನಾ ವಾಹನ ನಿಷೇಧ?

By Suvarna NewsFirst Published Oct 17, 2020, 2:34 PM IST
Highlights

ಸೇನೆಗಾಗಿ ನಿರ್ಮಿಸಿದ ಅಟಲ್‌ ಸುರಂಗದಲ್ಲಿ ಸೇನಾ ವಾಹನ ನಿಷೇಧ?| ಭದ್ರತೆಯ ದೃಷ್ಟಿಯಿಂದ ಹಿಮಾಚರ ಪೊಲೀಸರ ಶಿಫಾರಸು

ಶಿಮ್ಲಾ(ಅ.17): ಲಡಾಖ್‌ ಗಡಿಗೆ ಸೇನಾ ತುಕಡಿಗಳ ತುರ್ತು ಮತ್ತು ತ್ವರಿತ ರವಾನೆಗೆಂದು ನಿರ್ಮಿಸಲಾದ ಲೇಹ್‌ ಮತ್ತು ಮನಾಲಿ ನಡುವಿನ ಅಟಲ್‌ ಸುರಂಗ ಮಾರ್ಗದಲ್ಲಿ ಸೇನಾ ವಾಹನ, ಶಸ್ತಾ್ರಸ್ತ್ರಗಳು, ಸ್ಫೋಟಕಗಳ ಸಾಗಣೆಗೆ ನಿಷೇಧ ಹೇರುವ ಭೀತಿ ಎದುರಾಗಿದೆ.

ಸುರಂಗದ ಸುರಕ್ಷತೆ ನಿಟ್ಟಿನಲ್ಲಿ ಈ ಮಾರ್ಗದಲ್ಲಿ ಸೇನಾ ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಬೇಕೆಂದು ಹಿಮಾಚಲ ಪ್ರದೇಶ ಸರ್ಕಾರಕ್ಕೆ ಸಮಿತಿಯೊಂದು ಶಿಫಾರಸು ಮಾಡಿದೆ. ಆದರೆ, ಲಡಾಖ್‌ಗೆ ಸರ್ವಋುತುವಿನಲ್ಲೂ ಸಂಪರ್ಕ ಕಲ್ಪಿಸುವ ಈ ಸುರಂಗ ಮಾರ್ಗದಲ್ಲಿ ಸೇನಾ ವಾಹನಗಳ ಸಂಚಾರಕ್ಕೇ ನಿಷೇಧ ಹೇರಲು ಹೊರಟಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಸೋನಿಯಾ ಗಾಂಧಿ ಮಾಡಿದ್ದ ಶಿಲಾನ್ಯಾಸ ಕಲ್ಲು ಅಟಲ್ ಟನಲ್‌ನಿಂದ ಮಾಯ!

10 ಸಾವಿರ ಅಡಿಗಿಂತಲೂ ಎತ್ತರದಲ್ಲಿರುವ ವಿಶ್ವದ ಅತೀ ಉದ್ದದ ಸುರಂಗ ಮಾರ್ಗದ ಸುರಕ್ಷತೆಗೆ ಏನೆಲ್ಲಾ ಕ್ರಮ ಕೈಗೊಳ್ಳಬಹುದು ಎಂಬುದರ ಕುರಿತಾಗಿ ಪೊಲೀಸ್‌ ಮಹಾ ನಿರ್ದೇಶಕ ದಲ್ಜೀತ್‌ ಸಿಂಗ್‌ ಠಾಕೂರ್‌ ಅವರು ಐವರು ಸದಸ್ಯರ ಸಮಿತಿಯೊಂದನ್ನು ರಚಿಸಿದ್ದು, ಅದು ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿರುವ ಚೆನಾನಿ-ನಶ್ರಿ ಹಾಗೂ ಬನಿಹಾಲ್‌ನಲ್ಲಿರುವ ಜವಾಹರ ಸುರಂಗ ಮಾರ್ಗದಲ್ಲಿ ಕೈಗೊಳ್ಳಲಾದ ಭದ್ರತೆ ಅಧ್ಯಯನ ನಡೆಸಿ ತನ್ನ ವರದಿ ಸಲ್ಲಿಸಿದೆ.

ಅದರ ಆಧಾರದ ಮೇರೆಗೆ ಅಟಲ್‌ ಸುರಂಗದಲ್ಲೂ ಸೇನೆ, ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳ ಸಾಗಣೆ ವಾಹನಗಳಿಗೆ ನಿಷೇಧ ಹೇರಬೇಕು ಎಂದು ಹಿಮಾಚಲ ಪೊಲೀಸರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

click me!