ಚೀನಾಗೆ ಸಡ್ಡು: ಲಡಾಖ್‌ ಗಡಿಗೆ ಹೆಚ್ಚುವರಿ 15,000 ಸೇನಾಪಡೆ ರವಾನೆ!

By Suvarna NewsFirst Published Jul 25, 2021, 9:55 AM IST
Highlights

* ಚೀನಾ ಸಂಭಾವ್ಯ ಆಕ್ರಮಣ ತಡೆಗೆ ಭಾರತದ ಮತ್ತೊಂದು ನಡೆ

* ಲಡಾಖ್‌ ಗಡಿಗೆ ಹೆಚ್ಚುವರಿ 15,000 ಸೇನಾಪಡೆ ರವಾನೆ

ನವದೆಹಲಿ(ಜು.25): ಕಳೆದ ವರ್ಷ ಸಂಘರ್ಷಕ್ಕೆ ಸಾಕ್ಷಿಯಾದ ಪೂರ್ವ ಲಡಾಖ್‌ ಗಡಿಯಲ್ಲಿ ಚೀನಾದ ಆಕ್ರಮಣವನ್ನು ತಡೆಯಲು ಭಾರತೀಯ ಸೇನೆ ಹೆಚ್ಚುವರಿಯಾಗಿ 15 ಸಾವಿರ ಪಡೆಗಳನ್ನು ನಿಯೋಜನೆ ಮಾಡಿದೆ.

ಜಮ್ಮು- ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ನಿಯೋಜನೆಗೊಂಡಿದ್ದ ಪಡೆಯನ್ನು ಹಲವು ದಿನಗಳ ಹಿಂದೆಯೇ ಲಡಾಖ್‌ಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹೆಚ್ಚುವರಿ ಪಡೆಗಳು ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿ ಮುನ್ನುಗ್ಗದಂತೆ ತಡೆಯುವ ಉದ್ದೇಶದಿಂದ ಲೇಹ್‌ ಮೂಲದ 14 ಕೋರ್‌ಗೆ ಬೆಂಬಲವಾಗಿ ಹೆಚ್ಚುವರಿ ಸೇನಾ ಪಡೆಗಳನ್ನು ಕಳುಹಿಸಿಕೊಡಲಾಗಿದೆ.

ಕಳೆದ ವರ್ಷ ಜೂನ್‌ನಲ್ಲಿ ಚೀನಾ ಮತ್ತು ಭಾರತದ ಮಧ್ಯೆ ಸಂಘರ್ಷ ಏರ್ಪಟ್ಟಿತ್ತು. ಅದಾದ ಬಳಿಕ ಗಡಿಯಲ್ಲಿ ಭಾರತ ತನ್ನ ಸೇನಾ ಜಮಾವಣೆಯನ್ನು ಹೆಚ್ಚಿಸಿದೆ. ಒಂದು ವೇಳೆ ಚೀನಾದ ಜೊತೆ ಯುದ್ಧ ಏರ್ಪಟ್ಟಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡುವ 17 ಮೌಂಟೇನ್‌ ಸ್ಟೆ್ರೖಕ್‌ ಕೋರ್‌ಗೆ ನೆರವಾಗಲು ಹೆಚ್ಚುವರಿಯಾಗಿ 10 ಸಾವಿರ ಸೇನಾಪಡೆಗಳನ್ನು ಈ ಹಿಂದೆ ಮಾಡಲಾಗಿತ್ತು.

click me!