ಜಮ್ಮು - ಕಾಶ್ಮೀರದಲ್ಲಿ ಎಲ್ಲಾ ಭಾರತೀಯರಿಗೆ ಭೂಮಿ ಖರೀದಿಗೆ ಅವಕಾಶ, ಕೇಂದ್ರದ ಮಹತ್ವದ ಹೆಜ್ಜೆ!

By Suvarna News  |  First Published Oct 27, 2020, 7:44 PM IST

ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಮೇಲಿನ ವಿಶೇಷ ಸ್ಥಾನಮಾನ ರದ್ದು ಮಾಡಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ಬಳಿಕ ಕೇಂದ್ರ ಸರ್ಕಾರ ಕೆಲ ನಿಯಮಕ್ಕೆ ತಿದ್ದುಪಡಿ ಮಾಡಿದೆ. ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲಾ ಭಾರತೀಯರಿಗೆ ಭೂಮಿ ಖರೀದಿಗೆ ಅವಕಾಶ ನೀಡಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.


ಜಮ್ಮು ಮತ್ತು ಕಾಶ್ಮೀರ(ಅ.27):  ಜಮ್ಮು ಮತ್ತು ಕಾಶ್ಮೀರದ ಆರ್ಟಿಕಲ್ 370 ರದ್ದು ಮಾಡಿ ಒಂದು ವರ್ಷ ಕಳೆದಿದೆ. ಇದೀಗ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಜಮ್ಮ ಮತ್ತು ಕಾಶ್ಮೀರದಲ್ಲಿ ಭೂಮಿ ಖರೀದಿಸಲು ಇದ್ದ ನಿರ್ಭಂಧ ತೆರವುಗೊಳಿಸಿದ ಕೇಂದ್ರ ಸರ್ಕಾರ ಇದೀಗ ಎಲ್ಲರಿಗೂ ಭೂಮಿ ಖರೀದಿಸಲು ಅವಕಾಶ ನೀಡಿದೆ.

ಆರ್ಟಿಕಲ್ 370 ರದ್ದು: ಜಮ್ಮು ಕಾಶ್ಮೀರದ ಸಂವಿಧಾನದಲ್ಲೇ ಇತ್ತು ಸ್ಪಷ್ಟ ಅವಕಾಶ

Latest Videos

ಜಮ್ಮು ಕಾಶ್ಮೀರ ಹಾಗೂ ಲಡಾಖ್ ಭೂ ಕಾನೂನು ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ತಿದ್ದುಪಡಿಗೊಂಡಿರುವ ನೂತನ ಕಾನೂನಿನಲ್ಲಿ ಜಮ್ಮು ಮತ್ತು ಕಾಶ್ಮೀರದ ಹೊರಗಿನ ನಿವಾಸಿಗೂ ಭೂಮಿ ಖರೀದಿಸಲು ಅವಕಾಶ ನೀಡಿದೆ. ಆದರೆ ಕೃಷಿ ಭೂಮಿ ಖರೀದಿಗೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ. 

ಕಣಿವೆರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳ ಮೈತ್ರಿ: ಜಮ್ಮುಕಾಶ್ಮೀರ ವಿಶೇಷ ಸ್ಥಾನಮಾನ ಹಿಂಪಡೆಯಲು ಪಣ

ಆರ್ಟಿಕಲ್ 370ರ ವಿಶೇಷ ಸ್ಥಾನಮಾನ ರದ್ದು ಮಾಡುವ ಮೊದಲು ಹೊರ ರಾಜ್ಯದ ನಿವಾಸಿಗಳಿಗೆ ಜಮ್ಮ ಮತ್ತು ಕಾಶ್ಮೀರದಲ್ಲಿ ಭೂಮಿ ಖರೀದಿಗೆ ಅವಕಾಶ ಇರಲಿಲ್ಲ. ಕಾಶ್ಮೀರದ ಪ್ರಜೆಗೆ ಮಾತ್ರ ಈ ಅಧಿಕಾರ ನೀಡಲಾಗಿತ್ತು. ಆದರೆ ಇದೀಗ ಭೂ ಖರೀದಿ ಕಾನೂನಿಗೆ ತಿದ್ದುಪಡಿ ತರಲಾಗಿದೆ.  ನೂತನ ಕಾನೂನು ತಕ್ಷಣದಿಂದಲೇ ಜಾರಿಯಾಗಲಿದೆ.

ಜಮ್ಮು ಕಾಶ್ಮೀರದಲ್ಲಿ ಇಂದಿನಿಂದ ಹೊಸ ಅಧ್ಯಾಯ! ಏನೇನು ಬದಲಾಗಲಿದೆ?.

ಕೇಂದ್ರ ಸರ್ಕಾರದ ನೂತನ ತಿದ್ದುಪಡಿಗೆ ನ್ಯಾಷನಲ್ ಕಾನ್ಫೆರನ್ಸ್ ಮುಖಂಡ ಓಮರ್ ಅಬ್ದುಲ್ಲಾ ಖಂಡಿಸಿದ್ದಾರೆ. ಸಣ್ಣ ಭೂಮಾಲಿಕರಿಗೆ ನೇರ ಹೊಡೆತ ನೀಡಲಿದೆ. ತಕ್ಷಣವೇ ಕೇಂದ್ರ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಎಂದು ಅಬ್ದುಲ್ಲಾ ಟ್ವಿಟರ್ ಮೂಲಕ ಆಗ್ರಹಿಸಿದ್ದಾರೆ.
 

click me!