HDFC ಬ್ಯಾಂಕ್‌ಗೆ ಹೊಸ ಸಾರಥಿ, ಸ್ಯಾಲರಿ ಕೇಳಿದ್ರೆ ಬೆಚ್ಚಿ ಬೀಳ್ತೀರಿ; ₹50 ಕೋಟಿಗಿಂತ ಸ್ವಲ್ಪ ಕಡಿಮೆ

Published : Oct 09, 2026, 09:44 PM IST
HDFC Bank New CEO Anup Bagchi

ಸಾರಾಂಶ

HDFC Bank New CEO Anup Bagchi: ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ನೂತನ ಎಂಡಿ ಮತ್ತು ಸಿಇಒ ಆಗಿ ಅನುಪ್ ಬಾಗ್ಚಿ ಆಯ್ಕೆಯಾಗಿದ್ದಾರೆ. ಇವರು ವಾರ್ಷಿಕ ಕೋಟಿ ಕೋಟಿ ರೂ.ಗಳ ಬೃಹತ್ ವೇತನ ಪ್ಯಾಕೇಜ್ ಪಡೆಯಲಿದ್ದು, ಇದು ತೀವ್ರ ಕುತೂಹಲ ಮೂಡಿಸಿದೆ. ಈ ಪ್ಯಾಕೇಜ್‌ನಲ್ಲಿ ಸ್ಥಿರ ಸಂಬಳ, ಬೋನಸ್, ಇಎಸ್‌ಒಪಿ ಹಾಗೂ ಕಾರು, ಮನೆಯಂತಹ ಉಚಿತ ಸೌಲಭ್ಯಗಳು ಸೇರಿವೆ.

ನವದೆಹಲಿ (ಅಕ್ಟೋಬರ್ 9): ಹೆಚ್‌ಡಿಎಫ್‌ಸಿ ಬ್ಯಾಂಕ್‌ಗೆ ನೂಥನ ಸಾರಥಿಯ ಆಯ್ಕೆ ಆಗಿದೆ. ಹೆಸರು ಅನುಪ್ ಬಾಗ್ಚಿ (Anup Bahchi. ಬ್ಯಾಂಕ್ ನೀಡಿರುವ ಮಾಹಿತಿ ಪ್ರಕಾರ ಅನುಪ್, ಎಂಡಿ ಮತ್ತು ಸಿಇಓ ಆಗಿ ಆಯ್ಕೆ ಆಗಿದ್ದಾರೆ. ಈ ಬ್ಯಾಂಕ್‌ನ ಹೊಸ ಮುಖ್ಯಸ್ಥರು ಹುದ್ದೆಗಿಂತ ಸ್ಯಾಲರಿ ವಿಚಾರದಲ್ಲಿ ದೊಡ್ಡ ಮೊಟ್ಟದಲ್ಲಿ ಸುದ್ದಿ ಆಗುತ್ತಿದ್ದಾರೆ.

ಎಷ್ಟು ಸಂಬಳ?

ವರದಿಗಳ ಪ್ರಕಾರ.. ಬ್ಯಾಂಕ್ ವರ್ಷಕ್ಕೆ 43 ಕೋಟಿ ರೂಪಾಯಿ ಪಡೆಯಲಿದ್ದಾರೆ. ಬ್ಯಾಂಕ್ ಷೇರು ಹಾಗೂ ವಿನಿಮಯ ಕೇಂದ್ರಗಳಿಗೆ ನೀಡಿರುವ ಮಾಹಿತಿ ಪ್ರಕಾರ 43 ಕೋಟಿ ರೂಪಾಯಿ ತೋರಿಸಲಾಗಿದೆ. ಜೊತೆಗೆ ಪ್ಯಾಕೇಜ್‌ನಲ್ಲಿ ಸ್ಥಿರ ಸಂಬಳ ಇರಲಿದೆ.ಅವರ ಕಾರ್ಯಕ್ಷಮತೆ ಮೇಲೆ ಬೋನಸ್ ಸಿಗಲಿದೆ. ಅನುಪ್ ಅವರು 27 ರಂದು ಬ್ಯಾಂಕ್‌ನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅನುಪ್ ಈ ಹಿಂದೆ ಐಸಿಐಸಿ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ.

ಸಂಬಳ ಹೇಗೆ ನೀಡಲಾಗುತ್ತದೆ?

ಅನುಪ್ ಅವರು 8.97 ಕೋಟಿ ಹಣವನ್ನು ಸ್ಥಿರ ಸ್ಯಾಲರಿ ರೂಪದಲ್ಲಿ ಪಡೆಯಲಿದ್ದಾರೆ. ಜೊತೆಗೆ ವೇರಿಯಬಲ್ ಪೇ 26.92 ಸಿಗಲಿದೆ. ವೇರಿಯಬಲ್ ಪೇನಲ್ಲಿ ಒಂದು ಭಾಗ ನಗದು ರೂಪದಲ್ಲಿ ನೀಡಿದ್ರೆ, ಇನ್ನೊಂದು ಭಾಗವನ್ನು ಉದ್ಯೋಗಿ ಸ್ಟಾಕ್‌ ಆಯ್ಕೆಯಲ್ಲಿ ನೀಡಲಾಗತ್ತದೆ. ಅಥವಾ ಇಎಸ್ಓ ರೂಪದಲ್ಲಿ ಸಿಗಲಿದೆ. ಇನ್ನು ನಗದು ಪಾವತಿಯು 8.88 ಕೋಟಿ ರೂಪಾಯಿ ಆಗಿದ್ರೆ, 18.04 ಕೋಟಿ ಮೌಲ್ಯದ ESOPಗಳನ್ನ ವರ್ಷಕ್ಕೆ ನಾಲ್ಕು ಕಂತುಗಳಲ್ಲಿ ಹಂತಹಂತವಾಗಿ ನೀಡಲಾಗುತ್ತದೆ.

ಬೋನಸ್ ಹೇಗೆ?

ಅನುಪ್ ಅವರು ವರ್ಷಕ್ಕೆ 7.3 ಕೋಟಿ ರೂಪಾಯಿ ಬೋನಸ್ ಸಿಗಲಿದೆ. ಇದರಲ್ಲಿ 3.19 ಕೋಟಿ ಸ್ಟಾಕ್ ಯೂನಿಟ್‌ಗಳು ಮತ್ತು 4.16 ಕೋಟಿ ಮೌಲ್ಯದ ಇಎಸ್‌ಒಪಿ ಸಿಗಲಿದೆ.

ಕಾರು, ಮನೆ ಎಲ್ಲವೂ ಫ್ರೀ

ಇನ್ನು, ಇವರ ಪ್ಯಾಕೇಜ್‌ನಲ್ಲಿ ಮೂಲ ಸೌಕರ್ಯಗಳನ್ನೂ ನೀಡಲಿದೆ. ಮೂಲ ಸೌಕರ್ಯಗಳಿಗಾಗಿ ಬ್ಯಾಂಕ್ ಬರೋಬ್ಬರಿ 1.66 ಕೋಟಿ ನೀಡಲಿದೆ. ಕಾರು ಮತ್ತು ಸಾರಿಗೆ ವೆಚ್ಚಕ್ಕಾಗಿ 54 ಲಕ್ಷ ರೂಪಾಯಿ ಹಣವನ್ನ ನೀಡಲಿದೆ. ಎಕ್ಸ್‌ ಶೋ ರೂಮ್‌ನ 1.40 ಕೋಟಿ ಬೆಲೆಯ ಕಾರನ್ನು ಖರೀದಿಸಲು ಅರ್ಹರಾಗಿರುತ್ತಾರೆ. ರಿಯಾಯತಿ ಬಡ್ಡಿದರದಲ್ಲಿ 3.75 ಕೋಟಿ ರೂಪಾಯಿ ಸಾಲವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಬೇರೆಲ್ಲಾ ಬ್ಯಾಂಕ್‌ಗಳ ಮುಖ್ಯಸ್ಥರ ಸಂಬಳ ಹೇಗಿದೆ?

ಕೋಟಕ್ ಮಹೀಂದ್ರಾ ಬ್ಯಾಂಕ್ ಸಿಇಒ ಅಶೋಕ್ ವಾಸ್ವಾನಿ ₹17.23 ಕೋಟಿ ರೂಪಾಯಿ ಪ್ಯಾಕೇಜ್ ಹೊಂದಿದ್ದರೆ ಆಕ್ಸಿಸ್ ಬ್ಯಾಂಕ್ ಸಿಇಒ ಅಮಿತಾಬ್ ಚೌಧರಿ ₹10.30 ಕೋಟಿ ರೂಪಾಯಿ. ಇನ್ನು, ಎಚ್‌ಡಿಎಫ್‌ಸಿ ಬ್ಯಾಂಕಿನ ಪ್ರಸ್ತುತ ಸಿಇಒ ಶಶಿಧರ್ ಜಗದಿಶನ್ ₹28.65 ಕೋಟಿ ಸ್ಯಾಲರಿ ಇದೆ ಎಂದು ವರದಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಿಲಕ ಇಟ್ಟುಕೊಂಡ್ರೆ, ಕೇಸರಿ ಶಾಲು ಹಾಕಿಕೊಂಡ್ರೆ ಅಂಧಭಕ್ತ ಆಗ್ತಾರಾ?: ರಾಹುಲ್ ಗಾಂಧಿ ಪೋಸ್ಟರ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ
ಭಾರತೀಯ ಸಂಜಾತೆ ಮಡಿಲಿಗೆ ನೊಬೆಲ್​ ಶಾಂತಿ ಪ್ರಶಸ್ತಿ: ಬಣ್ಣದಿಂದ ಕ್ಷಣಕ್ಷಣವೂ ಅವಮಾನಕ್ಕೀಡಾಗಿದ್ದ ಈಕೆ ಯಾರು