ಪೌರತ್ವ ಕಾಯ್ದೆ ಹೋರಾಟಕ್ಕೆ ಪಿಎಫ್‌ಐ ಹಣ | ಸಂಘಟನೆ ಕಾಯ್ದೆ ಖಾತೆಯಲ್ಲಿ 100 ಕೋಟಿ | ಡಿಜಿಹಳ್ಳಿ ಗಲಭೆಯಲ್ಲೂ ಇದರ ಕೈವಾಡ: ಇಡಿ
ಕೊಚ್ಚಿ(ಡಿ.25): ಕೇರಳ ಮೂಲದ ವಿವಾದಿತ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಹಾಗೂ ಅದರ ವಿದ್ಯಾರ್ಥಿ ಸಂಘಟನೆಯಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಖಾತೆಗಳಲ್ಲಿ ವಿವಿಧ ಮೂಲಗಳಿಂದ 100 ಕೋಟಿ ರು. ಹಣ ಸಂಗ್ರಹವಾಗಿರುವುದು ಪತ್ತೆಯಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಗುರುವಾರ ಹೇಳಿದೆ.
ಅಲ್ಲದೆ, ಸಿಎಎ ವಿರೋಧಿ ಪ್ರತಿಭಟನೆಗಳು ಹಾಗೂ ಇತ್ತೀಚಿನ ಬೆಂಗಳೂರು ಗಲಭೆಗಳಲ್ಲಿ ಪಿಎಫ್‌ಐ ಪಾತ್ರ ಕಂಡುಬಂದಿದೆ ಎಂಬ ಗಂಭೀರ ಆರೋಪವನ್ನು ಇ.ಡಿ. ಮಾಡಿದೆ. ಪಿಎಫ್‌ಐ ನಡೆಸಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ತನಿಖೆ ನಡೆಸುತ್ತಿರುವ ಇ.ಡಿ., ಕೊಚ್ಚಿಯ ವಿಶೇಷ ಅಕ್ರಮ ಹಣ ವರ್ಗಾವಣೆ ತಡೆ ಕೋರ್ಟ್‌ಗೆ ನೀಡಿರುವ ವರದಿಯಲ್ಲಿ ಈ ಮಾಹಿತಿ ನೀಡಿದೆ.
undefined
ಬ್ರಿಟನ್ ವೈರಸ್ ರಾಜ್ಯಕ್ಕೆ ಬಂತಾ..? ಸೀಕ್ವೆನ್ಸ್ ವರದಿ ಪ್ರಕಟ
ಬಂಧಿತ ಸಿಎಫ್‌ಐ ಕಾರ್ಯದರ್ಶಿ ಕೆ.ಎ. ರೌಫ್ ಶರೀಫ್‌ನನ್ನು ಇನ್ನೂ 3 ದಿನ ತನ್ನ ವಶಕ್ಕೆ ನೀಡುವಂತೆ ಕೋರಿಕೆ ಸಲ್ಲಿಸುವಾಗ ಈ ವರದಿಯನ್ನು ಇ.ಡಿ. ನೀಡಿದೆ. ‘ಕಳೆದ ಹಲವು ವರ್ಷಗಳಲ್ಲಿ ಸಿಎಫ್‌ಐ ಖಾತೆಯಲ್ಲಿ 100 ಕೋಟಿ ರು. ಹಣ ಇರಿಸಿರುವುದು ಪತ್ತೆಯಾಗಿದೆ. ನಗದು ರೂಪದಲ್ಲಿ ಠೇವಣಿಗೆ ಹಣ ನೀಡಿದ್ದು ಗೊತ್ತಾಗಿದೆ.
ಈ ಹಣದ ಮೂಲದ ಪತ್ತೆಗೆ ತನಿಖೆ ನಡೆದಿದೆ. 2013ರಿಂದ ಪಿಎಫ್‌ಐ ಅಕ್ರಮ ಹಣ ವರ್ಗಾವಣೆ ಆರಂಭಿಸಿದ್ದು, 2014ರ ನಂತರ ಇದು ಅತ್ಯಂತ ಜೋರಾಗಿದೆ’ ಎಂದು ವರದಿಯಲ್ಲಿ ಇ.ಡಿ. ಆರೋಪಿಸಿದೆ.
ಸಂಪುಟ ವಿಸ್ತರಣೆಗೆ ದಿನಾಂಕ ಫಿಕ್ಸ್.. ಈ ಶಾಸಕರಿಗೆ ಇಲ್ಲ ಮಂತ್ರಿ ಭಾಗ್ಯ?
ಇದೇ ವೇಳೆ, ‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಪಿಎಫ್‌ಐ ಭಾಗಿ ಆಗಿದೆ. 2019ರ ಡಿಸೆಂಬರ್‌ನಿಂದ 2020ರ ಫೆಬ್ರವರಿವರೆಗಿನ ಅವಧಿಯಲ್ಲಿ ಈ ಪ್ರತಿಭಟನೆಗಳಿಗೆ ಹಣ ನೀಡಿದೆ. 2020ರ ದಿಲ್ಲಿ ಗಲಭೆಯಲ್ಲಿ ಪಿಎಫ್‌ಐ ನಾಯಕರ ಪಾತ್ರ ಗಮನಕ್ಕೆ ಬಂದಿದೆ. ಇನ್ನು ಇತ್ತೀಚಿನ ಬೆಂಗಳೂರು ಗಲಭೆ (ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ)ಯಲ್ಲಿ ಕೂಡ ಪಿಎಫ್‌ಐ ಪಾತ್ರದ ಸಂಕೇತಗಳು ಕಂಡುಬಂದಿದ್ದು, ಅದರ ರಾಜಕೀಯ ಅಂಗವಾದ ಎಸ್‌ಡಿಪಿಐ ಕೈವಾಡ ಗೋಚರಿಸಿದೆ. ಸಾರ್ವಜನಿಕ ಶಾಂತಿಗೆ ಭಂಗ ತರುವ ಅನೇಕ ಚಟುವಟಿಕೆಗಳಲ್ಲಿ ಪಿಎಫ್‌ಐ ಭಾಗಿಯಾಗಿದೆ’ ಎಂಬ ಗಂಭೀರ ಆರೋಪವನ್ನು ಇ.ಡಿ. ಮಾಡಿದೆ.
‘ತನ್ನ ಚಟುವಟಿಕೆಗೆ ವಿದೇಶದಿಂದ ಇ.ಡಿ. ಹಣ ಸಂಗ್ರಹಿಸಿದ್ದು ಪಿಎಫ್‌ಐ ನಾಯಕರ ಮನೆ ಮೇಲೆ ದಾಳಿ ನಡೆಸಿದಾಗ ಗೊತ್ತಾಗಿದೆ. ವಿದೇಶದಲ್ಲೇ ಪಿಎಫ್‌ಐ ಸದಸ್ಯರನ್ನು ನೇಮಿಸಿಕೊಂಡು ಟಾರ್ಗೆಟ್ ವಿಧಿಸಿ ಹಣ ಸಂಗ್ರಹಿಸಲಾಗುತ್ತಿತ್ತು. ಆದರೆ ವಿದೇಶದಿಂದ ಬಂದ ಹಣದ ಬಗ್ಗೆ ಬ್ಯಾಂಕ್ ಖಾತೆಗಳಲ್ಲಿ ಉಲ್ಲೇಖವಿಲ್ಲ. ಹೀಗಾಗಿ ಈ ಹಣವನ್ನು ಹವಾಲಾ ಅಥವಾ ಭೂಗತ ರೂಪದಲ್ಲಿ ಸಂಗ್ರಹಿಸಿರುವ ಶಂಕೆ ಇದೆ’ ಎಂದು ವರದಿ ವಿವರಿಸಿದೆ.