Shillong Murder Case: ಮಧುಚಂದ್ರಕೆ ಕರೆದೊಯ್ದು ಪತಿಯ ಹತ್ಯೆಗೈದ ಬೆನ್ನಲ್ಲೇ ಲಖನೌದಲ್ಲಿ ಮತ್ತೊಂದು ಆಘಾತಕಾರಿ ಘಟನೆ!

Published : Jun 13, 2025, 12:54 AM ISTUpdated : Jun 13, 2025, 09:57 AM IST
uttara pradesh crime

ಸಾರಾಂಶ

ಮಧುಚಂದ್ರಕ್ಕೆಂದು ಕರೆದೊಯ್ದು, ಪ್ರೇಮಿಯೊಂದಿಗೆ ಸೇರಿಕೊಂಡು ನವವಿವಾಹಿತೆಯೊಬ್ಬಳು ಪತಿಯ ಹತ್ಯೆಗೈದ ಸುದ್ದಿ ದೇಶದಲ್ಲೇ ಸಂಚಲನ ಸೃಷ್ಟಿಸಿರುವ ಹೊತ್ತಿನಲ್ಲಿ, ಮತ್ತೊಂದು ಘಟನೆ ಉತ್ತರಪ್ರದೇಶದ ಲಖನೌನಲ್ಲಿ ನಡೆದಿದೆ.

ಲಖನೌ (ಜೂ.13): ಮಧುಚಂದ್ರಕ್ಕೆಂದು ಕರೆದೊಯ್ದು, ಪ್ರೇಮಿಯೊಂದಿಗೆ ಸೇರಿಕೊಂಡು ನವವಿವಾಹಿತೆಯೊಬ್ಬಳು ಪತಿಯ ಹತ್ಯೆಗೈದ ಸುದ್ದಿ ದೇಶದಲ್ಲೇ ಸಂಚಲನ ಸೃಷ್ಟಿಸಿರುವ ಹೊತ್ತಿನಲ್ಲಿ, ಮಹಿಳೆಯೊಬ್ಬಳು ತನ್ನ ಪತಿ ಹಾಗೂ 2ನೇ ಪ್ರೇಮಿಯೊಂದಿಗೆ ಸೇರಿಕೊಂಡು ಮೊದಲನೇ ಪ್ರಿಯತಮನನ್ನು ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಲಖನೌನಲ್ಲಿ ನಡೆದಿದೆ.

ಇಲ್ಲಿನ ರಹೀಮಾಬಾದ್‌ ನಿವಾಸಿಯಾಗಿದ್ದ ವಿಜಯ್‌ ಕುಮಾರ್‌ ಅಲಿಯಾಸ್‌ ಗಪ್ಪು ಮೃತ ದುರ್ದೈವಿ. ಜೂ.8ರಂದು ಗಪ್ಪುವಿನ ಶವ ಆತನ ಮನೆ ಬಳಿ ಪತ್ತೆಯಾಗಿತ್ತು. ತನಿಖೆ ಬಳಿಕ ಕುಂತಿ ರಾವತ್‌, ಆಕೆಯ ಪತಿ ರಾಂಭಜನ್‌ ಮತ್ತು ಜಬ್ಬಾರ್‌ನನ್ನು ಬಂಧಿಸಲಾಯಿತು.

ಏನಿದು ಘಟನೆ?:

ಗಪ್ಪುವಿನ ಪತ್ನಿ 3 ವರ್ಷಗಳ ಹಿಂದೆ ಮೃತಪಟ್ಟಿದ್ದುಳು. ಬಳಿಕ ಆತ, ತನ್ನ ಸಂಬಂಧಿಯಾದ ರಾಂಭಜನ್‌ನ ಹೆಂಡತಿ ಕುಂತಿ ಜತೆ ಸಂಬಂಧ ಬೆಳೆಸಿದ್ದ. ಕುಂತಿ ತನ್ನ ಪತಿಯ ಊಟಕ್ಕೆ ಮದ್ಯ ಸೇರಿಸಿ ಮತ್ತು ಬರಿಸಿ, ಗಪ್ಪು ಜತೆ ಕಾಲ ಕಳೆಯುತ್ತಿದ್ದಳು, ಅವನೊಂದಿಗೆ ಸುತ್ತಾಡುತ್ತಿದ್ದಳು. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಅವರ ಪರಿವಾರದಲ್ಲಿ ಗಲಾಟೆ ಸೃಷ್ಟಿಸಿತು.

ಕೆಲ ಕಾಲದ ಬಳಿಕ ಕುಂತಿ, ಇನ್ನೊಬ್ಬನೊಂದಿಗೆ ಸಂಬಂಧ ಹೊಂದಿರುವ ವಿಷಯ ತಿಳಿದು ಗಪ್ಪು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ. ಇದರಿಂದ ಕೋಪಗೊಂಡಾಕೆ ತನ್ನ ಪತಿ ಹಾಗೂ ಇನ್ನೊಬ್ಬ ಪ್ರಿಯಕರನೊಂದಿಗೆ ಸೇರಿ, ಗಪ್ಪುವಿನ ಕತ್ತು ಸೀಳಿ ಕೋಂದು, ದೇಹವನ್ನು ಮನೆಯ ಹತ್ತಿರ ಎಸೆದಿದ್ದಳು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು
ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ