ಬೇಲಿಯೇ ಎದ್ದು ಹೊಲ ಮೇಯ್ದ ಸ್ಥಿತಿ: ಕೇಜ್ರಿವಾಲ್‌ ಬಗ್ಗೆಅಣ್ಣಾ ಹಜಾರೆ ವ್ಯಂಗ್ಯ

By Kannadaprabha News  |  First Published Mar 24, 2024, 9:05 AM IST

ಸರ್ಕಾರಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವೆಂಬ ಪಿಡುಗನ್ನು ತೊಲಗಿಸಬೇಕೆಂದು ಕೋರಿ ಲೋಕಪಾಲ್‌ ಮಸೂದೆ ಜಾರಿಗೆ ಆಗ್ರಹಿಸಿ ಹೋರಾಟದಲ್ಲಿ ಭಾಗಿಯಾಗಿದ್ದ ಅರವಿಂದ್‌ ಕೇಜ್ರಿವಾಲ್‌ ಅವರೇ ಲಂಚ ಪ್ರಕರಣದಲ್ಲಿ ಬಂಧಿತನಾಗಿರುವುದು ಹಾಸ್ಯಾಸ್ಪದವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತಿಳಿಸಿದ್ದಾರೆ. 
 


ನವದೆಹಲಿ (ಮಾ.24): ಸರ್ಕಾರಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವೆಂಬ ಪಿಡುಗನ್ನು ತೊಲಗಿಸಬೇಕೆಂದು ಕೋರಿ ಲೋಕಪಾಲ್‌ ಮಸೂದೆ ಜಾರಿಗೆ ಆಗ್ರಹಿಸಿ ಹೋರಾಟದಲ್ಲಿ ಭಾಗಿಯಾಗಿದ್ದ ಅರವಿಂದ್‌ ಕೇಜ್ರಿವಾಲ್‌ ಅವರೇ ಲಂಚ ಪ್ರಕರಣದಲ್ಲಿ ಬಂಧಿತನಾಗಿರುವುದು ಹಾಸ್ಯಾಸ್ಪದವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತಿಳಿಸಿದ್ದಾರೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ‘ಲೋಕಪಾಲ್‌ ಮಸೂದೆ ಜಾರಿಗೆ ಹೋರಾಟ ಮಾಡುವಾಗ ಕೇಜ್ರಿವಾಲ್‌ ರಾಜಕೀಯ ಪಕ್ಷವನ್ನು ಸ್ಥಾಪಿಸಿದಾಗ ನಮ್ಮ ಹೋರಾಟ ದಿಕ್ಕು ತಪ್ಪಿತು. ಬಳಿಕವೂ ನಾನು ಅವರಿಗೆ ಹಲವು ಬಾರಿ ಅಬಕಾರಿ ನೀತಿಯನ್ನು ಜಾರಿ ಮಾಡಬೇಡಿ ಎಂದು ವಿನಂತಿಸಿದ್ದೆ. ಈಗ ಅವರೇ ಲಮಚ ಪ್ರಕರಣದಲ್ಲಿ ಬಂಧನವಾಗಿರುವುದು ಹಾಸ್ಯಾಸ್ಪದವಾಗಿದೆ. ಈ ಹಗರಣದ ಸಂಪೂರ್ಣ ತನಿಖೆ ನಡೆದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಆಗ್ರಹಿಸಿದರು.

Tap to resize

Latest Videos

ಕೇಜ್ರಿಗೆ ಮದ್ಯ ನೀತಿ ಜಾರಿ ಮಾಡಬೇಡಿ ಎಂದಿದ್ದೆ: ಲೋಕಪಾಲ ಮಸೂದೆಗೆ ಜಾರಿ ಕೋರಿ ಅನಿರ್ದಿಷ್ಟ ಉಪವಾಸ ಮಾಡುವ ಮೂಲಕ ಅರವಿಂದ್‌ ಕೇಜ್ರಿವಾಲ್‌ ಅವರು ಮುನ್ನೆಲೆಗೆ ಬರಲು ಕಾರಣರಾಗಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು, ತಾವು ಕೇಜ್ರಿವಾಲ್‌ಗೆ ಮದ್ಯ ನೀತಿಯನ್ನು ಜಾರಿಗೆ ತರದಂತೆ ಹಲವು ಬಾರಿ ವಿನಂತಿಸಿದ್ದಾಗಿ ತಿಳಿಸಿದ್ದಾರೆ.

ತೈಮೂರ್‌, ಬಾಬರ್‌ ಯುಗದಲ್ಲಿ ಭಾರತದಲ್ಲಿ ಹಿಂದೂಗಳೇ ಇರಲಿಲ್ಲ: ಪ್ರಸೂನ್‌ ಬ್ಯಾನರ್ಜಿ

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ‘ಕೇಜ್ರಿವಾಲ್‌ ಅವರ ಬಂಧನಕ್ಕೆ ಅವರು ಮಾಡಿದ ಕರ್ಮಗಳೇ ಕಾರಣವಾಗಿದೆ. ನಾನು ಅವರಿಗೆ ಹಲವು ಬಾರಿ ಮದ್ಯ ಕುರಿತಾದ ನೀತಿಯನ್ನು ಜಾರಿ ಮಾಡಬೇಡಿ ಎಂದು ಪರಿಪರಿಯಾಗಿ ವಿನಂತಿಸಿದ್ದೆ. ಆದರೆ ಅವರು ಹೆಚ್ಚು ಆದಾಯ ಬರಲಿದೆ ಎನ್ನುವ ಸಲುವಾಗಿ ನೀತಿಯನ್ನು ಜಾರಿ ಮಾಡಿದರು. ಒಂದು ಕಾಲದಲ್ಲಿ ಮದ್ಯಪಾನದ ಕುರಿತಾಗಿ ಹೋರಾಡಿದವರೇ ಇಂದು ಮದ್ಯ ನೀತಿಯ ಹಗರಣದಲ್ಲಿ ಬಂಧನವಾಗಿರುವುದನ್ನು ಕೇಳಿ ಬಹಳ ದುಃಖವಾಗಿದೆ’ ಎಂದು ತಿಳಿಸಿದರು.

click me!