ಕಳೆದ ನಾಲ್ಕು ವರ್ಷಗಳಿಂದ ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಮಾಡಲಾಗುತ್ತಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ತಿರುಪತಿ ಲಡ್ಡುಗೂ ನಂದಿನಿ ತುಪ್ಪಕ್ಕೂ ಸಂಬಂಧವಿಲ್ಲ ಎಂದು ಕೆಎಂಎಫ್ ಅಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು (ಸೆ.19): ದೇಶದ ಅತ್ಯಂತ ಶ್ರೀಮಂತ ದೇಗುಲಗಳಲ್ಲಿ ಒಂದಾಗಿರುವ ತಿರುಪತಿ ತಿಮ್ಮಪ್ಪ ದೇವಸ್ಥಾನವಾದ ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಆರೋಪಕ್ಕೂ ನಂದಿನಿ ತುಪ್ಪಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಸ್ಪಷ್ಟೀಕರಣ ನೀಡಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ (ಮಾಜಿ ಸಿಎಂ ಜಗನ್‌ಮೋಹನ್ ಸರ್ಕಾರದ ಅವಧಿಯಲ್ಲಿ) ದೇಶದ ಅತ್ಯಂತ ಶ್ರೀಮಂತ ದೇಗುಲಗಳಲ್ಲಿ ಒಂದಾಗಿರುವ ತಿರುಪತಿ ತಿಮ್ಮಪ್ಪ ದೇವಸ್ಥಾನ ವಿತರಣೆ ಮಾಡಲಾದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಆದರೆ, ಕರ್ನಾಟಕ ಹಾಲು ಒಕ್ಕೂಟದಿಂದ (ಕೆಎಂಎಫ್) ತಿರುಪತಿಗೆ ಕಳೆದ 4 ವರ್ಷಗಳಿಂದ ನಂದಿನಿ ತುಪ್ಪವನ್ನೇ ಸರಬರಾಜು ಮಾಡಿಲ್ಲ. ಹೀಗಾಗಿ, ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಆರೋಪಕ್ಕೂ ನಂದಿನಿ ತುಪ್ಪಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಸ್ಪಷ್ಟೀಕರಣ ನೀಡಿದ್ದಾರೆ.
undefined
Big Breaking: ಬಿಜೆಪಿ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಕೆಂಪಣ್ಣ ಸಾವು!
ಈ ಕುರಿತು ಬುಧವಾರ ಬೆಂಗಳೂರಿನಲ್ಲಿ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಅವರು ತಿರುಪತಿ ಲಡ್ಡುನಲ್ಲಿ ಪ್ರಾಣಿ ಕೊಬ್ಬು ಆರೋಪದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ, ಆಂದ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರಿಂದ ಗಂಭೀರ ಆಪಾದನೆ ಮಾಡಲಾಗಿದೆ. ಆದರೆ, ನಮ್ಮಿಂದ ಕಳೆದ 4 ವರ್ಷಗಳಿಂದ ತಿರುಪತಿಗೆ ನಂದಿನಿ ತುಪ್ಪ ಪೂರೈಕೆಯಾಗಿಲ್ಲ. ಇತ್ತೀಚಿನ ಕೆಲ ದಿನಗಳಿಂದ ನಾವು ತುಪ್ಪ ಸರಬರಾಜು ಮಾಡುತ್ತಿದ್ದೇವೆ . ತಿರುಪತಿ ತಿಮ್ಮಪ್ಪ ದೇವಸ್ಥಾನ (ಟಿಟಿಡಿ) ಸಮಿತಿಯವರು ನಮ್ಮ ರಾಜ್ಯದ ನಂದಿನಿ ತುಪ್ಪದ ಪೂರೈಕೆಯನ್ನೇ ಸ್ಥಗಿತಗೊಳಿಸಿದ್ದರು ಎಂದು ಹೇಳಿದರು. ಹೀಗಾಗಿ, ತಿರುಪತಿ ಲಡ್ಡುನಲ್ಲಿ ಪ್ಋಆಣಿ ಕೊಬ್ಬಿಗೂ, ನಂದಿನಿ ತುಪ್ಪಕ್ಕೂ ಸಂಬಂಧವಿಲ್ಲ ಎಂದು ಹೇಳಿದರು.
ಬೆಂಗಳೂರು ಏರ್ಪೋರ್ಟ್ ಜೊತೆ ಕೈಜೋಡಿಸಿದ ಕನ್ನಡ ಸಾಹಿತ್ಯ ಪರಿಷತ್: ಬಿಎಐಎಲ್‌ನಲ್ಲಿ ಮಂಡ್ಯ ಸಮ್ಮೇಳನದ ಮಾಹಿತಿ!
ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪಿಸುತ್ತಿರುವುದು ಬೇರೆ ಬ್ರ್ಯಾಂಡ್ ಗಳ ತುಪ್ಪವನ್ನು. ನಮ್ಮ ನಂದಿನಿ ತುಪ್ಪಕ್ಕೆ ಅದರದೇ ಆದ ಶ್ರೇಷ್ಟತೆ ಹಾಗೂ ಮನ್ನಣೆಯಿದೆ. ಅವರು ಆರೋಪಿಸಿರುವುದು ನಮ್ಮ ಕೆಎಂಎಫ್ ನಿಂದ ಪೂರೈಕೆಯಾಗೋ ನಂದಿನಿ ತುಪ್ಪವನ್ನಲ್ಲ. ಈವರೆಗೂ 3.50 ಲಕ್ಷ ಕೆಜಿ ತೂಕ ಪೂರೈಕೆ ಮಾಡಿದ್ದೇವೆ. ನಂದಿನಿ ತುಪ್ಪದ ಬಗ್ಗೆ ಟಿಟಿಡಿ ಆಡಳಿತ ಸಂತುಷ್ಟವಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಅವರು ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಮಾಹಿತಿ ನೀಡಿದರು.