ಮಹಿಳೆಯ ಕೊಂ**ದು ಆಕೆಯ ದೇಹವನ್ನು ಕುರಿ ಕತ್ತರಿಸುವಂತೆ ಕಡಿದು ನಾಲೆಗೆ ಎಸೆದ ಕಸಾಯಿಖಾನೆ ಮಾಲೀಕ

Published : Sep 29, 2026, 07:37 PM IST
Andhra Women

ಸಾರಾಂಶ

ಆಂಧ್ರಪ್ರದೇಶದ ವಿಜಯವಾಡದಲ್ಲಿ ಹಣ ಮತ್ತು ಮಗುವಿನ ವಿಚಾರವಾಗಿ ನಡೆದ ಗಲಾಟೆಯಲ್ಲಿ ಮಂಗಳಗಿರಿ ಮೂಲದ ಕಲ್ಯಾಣಿ ಎಂಬ ಮಹಿಳೆಯನ್ನು ಬರ್ಬರವಾಗಿ ಹ** ಮಾಡಲಾಗಿದೆ. ಮಟನ್ ಅಂಗಡಿ ಮಾಲೀಕ ಮೊಹಮ್ಮದ್ ಶಫಿ ಎಂಬಾತ ಆಕೆಯನ್ನು ಕೊಲೆ ಮಾಡಿ, ದೇಹವನ್ನು ತುಂಡುಗಳಾಗಿ ಕತ್ತರಿಸಿ ವಿಟಿಪಿಎಸ್ ಕಾಲುವೆಗೆ ಎಸೆದಿದ್ದನು.

ವಿಜಯವಾಡ (ಸೆ.29): ಆಂಧ್ರಪ್ರದೇಶದ ವಿಜಯವಾಡದಲ್ಲಿ ಅತ್ಯಂತ ಭೀಕರ ಹ* ಪ್ರಕರಣವೊಂದು ಬಯಲಿಗೆ ಬಂದಿದೆ. ಮಂಗಳಗಿರಿ ಮೂಲದ ಕಲ್ಯಾಣಿ ಎಂಬ ಮಹಿಳೆಯನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿ, ಆಕೆಯ ದೇಹದ ಭಾಗಗಳನ್ನು ತುಂಡು ತುಂಡಾಗಿ ಕತ್ತರಿಸಿ ಇಬ್ರಾಹಿಂಪಟ್ನಂನ ವಿಟಿಪಿಎಸ್ (VTPS) ಕೂಲಿಂಗ್ ಕಾಲುವೆಗೆ ಎಸೆದಿದ್ದ 35 ವರ್ಷದ ಮಾಂಸದ ಅಂಗಡಿ ಮಾಲೀಕನನ್ನು ವಿಜಯವಾಡ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಭವಾನಿಪುರಂ ನಿವಾಸಿ, ಮಟನ್ ಅಂಗಡಿ ನಡೆಸುತ್ತಿದ್ದ ಮೊಹಮ್ಮದ್ ಶಫಿ (35) ಎಂದು ಗುರುತಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿ, ತಾಂತ್ರಿಕ ತನಿಖೆ ಮತ್ತು ಲಭ್ಯವಾದ ಮಹತ್ವದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೊಲೀಸರು ಸೆಪ್ಟೆಂಬರ್ 27 ರಂದು ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಲುವೆಯಲ್ಲಿ ತಲೆಯಿಲ್ಲದ ದೇಹ: ಶೋಧ ನಡೆಸಿದ ಎನ್‌ಡಿಆರ್‌ಎಫ್

ಸೆಪ್ಟೆಂಬರ್ 18 ರಂದು ಇಬ್ರಾಹಿಂಪಟ್ನಂನ ವಿಟಿಪಿಎಸ್ ಕೂಲಿಂಗ್ ಕಾಲುವೆಯ ಬಳಿ ತಲೆಯಿಲ್ಲದ ಮಹಿಳೆಯ ದೇಹದ ಭಾಗ ತೇಲುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಇಬ್ರಾಹಿಂಪಟ್ನಂ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು.

ಮಾರನೇ ದಿನ, ಡ್ರೋನ್ ಕ್ಯಾಮೆರಾಗಳು ಹಾಗೂ ಎನ್‌ಡಿಆರ್‌ಎಫ್ (NDRF) ಸಿಬ್ಬಂದಿಯ ನೆರವಿನೊಂದಿಗೆ ಕಾಲುವೆಯಲ್ಲಿ ಸುದೀರ್ಘ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರು, ಸಂತ್ರಸ್ತೆಯ ತಲೆ, ಕಾಲುಗಳು ಹಾಗೂ ಇತರ ದೇಹದ ಭಾಗಗಳನ್ನು ಹೊರತೆಗೆದಿದ್ದಾರೆ. ಆದರೆ, ಆಕೆಯ ಒಂದು ಕೈ ಮಾತ್ರ ಇನ್ನು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ತೆಯಾದ ದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಅಪರಿಚಿತ ದೇಹದ ವಿವರಗಳನ್ನು ಸುತ್ತಮುತ್ತಲಿನ ಪೊಲೀಸ್ ಠಾಣೆಗಳಿಗೆ ರವಾನಿಸಿದಾಗ, ಸಂತ್ರಸ್ತೆಯ ಸಹೋದರ ಆಕೆಯ ಕೈ ಮೇಲಿದ್ದ 'ಟ್ಯಾಟೂ' (Tattoo) ಮತ್ತು ಇತರ ಗುರುತುಗಳನ್ನು ಕಂಡು, ಅದು ಮಂಗಳಗಿರಿಯ ಕಲ್ಯಾಣಿ ಎಂದು ಗುರುತಿಸಿದ್ದಾರೆ.

ಹೆಂಡತಿ-ಮಕ್ಕಳನ್ನು ತವರಿಗೆ ಕಳುಹಿಸಿ ಹ*

ವಿಜಯವಾಡ ವೆಸ್ಟ್ ಜೋನ್ ಸಹಾಯಕ ಪೊಲೀಸ್ ಕಮಿಷನರ್ (ACP) ಎನ್‌ಎಸ್‌ವಿಕೆ ದುರ್ಗಾ ರಾವ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 17 ರಂದು ಭವಾನಿಪುರಂನಲ್ಲಿರುವ ಆರೋಪಿ ಮೊಹಮ್ಮದ್ ಶಫಿ ಮನೆಯಲ್ಲಿ ಈ ಹ* ನಡೆದಿದೆ. ಆರೋಪಿ ಶಫಿ, ತನ್ನ ಹೆಂಡತಿ ಮತ್ತು ಮಕ್ಕಳನ್ನು ಗುಂಟೂರಿಗೆ ಕಳುಹಿಸಿದ ನಂತರ ಕಲ್ಯಾಣಿಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದ. ಈ ವೇಳೆ ಹಣ ಹಾಗೂ ಕುಟುಂಬದ ವಶದಲ್ಲಿದ್ದ ಮಗುವಿನ ವಿಚಾರಕ್ಕೆ ಇಬ್ಬರ ನಡುವೆ ಭಾರಿ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡ ಶಫಿ, ಕತ್ತಿಯಿಂದ ಕಲ್ಯಾಣಿಯ ಕುತ್ತಿಗೆಯನ್ನು ಸೀಳಿ ಕೊ* ಮಾಡಿದ್ದಾನೆ.

ಗುರುತು ಸಿಗದಂತೆ ದೇಹ ತುಂಡರಿಸಿದ ಮಾಂಸ ಮಾರಾಟಗಾರ

ಕೊ*ಯ ನಂತರ ಪ್ರಕರಣವು ಅತ್ಯಂತ ಭೀಕರ ತಿರುವು ಪಡೆದುಕೊಂಡಿದೆ. ಕಸಾಯಿಖಾನೆ ನಡೆಸುತ್ತಿದ್ದ ಕಾರಣ ಕತ್ತರಿಸುವ ಅನುಭವವಿದ್ದ ಶಫಿ, ಕಲ್ಯಾಣಿಯ ಗುರುತು ಸಿಗದಂತೆ ಮಾಡಲು ಹಾಗೂ ಮೃತದೇಹವನ್ನು ಸುಲಭವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಆಕೆಯ ತಲೆ, ಕಾಲುಗಳು ಮತ್ತು ದೇಹದ ಇತರ ಭಾಗಗಳನ್ನು ಪ್ರತ್ಯೇಕವಾಗಿ ಕತ್ತರಿಸಿದ್ದಾನೆ. ಪ್ಯಾಕ್ ಮಾಡಿದ ಆ ದೇಹದ ತುಂಡುಗಳನ್ನು ಗೊಲ್ಲಪುಡಿ ಪ್ರದೇಶದ ಬಳಿಯಿರುವ ವಿಟಿಪಿಎಸ್ ಕೂಲಿಂಗ್ ಕಾಲುವೆಗೆ ತಂದು ಎಸೆದಿದ್ದ.

ಹಣ ಮತ್ತು ಮಗುವಿನ ವಿವಾದವೇ ಕೊ**ಗೆ ಕಾರಣ

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಎಸಿಪಿ ದುರ್ಗಾ ರಾವ್, "ಇದು ಹಣ ಮತ್ತು ಮಗುವಿನ ವಿಚಾರಕ್ಕೆ ನಡೆದ ಕೊ**ಯಾಗಿದೆ. ಕಲ್ಯಾಣಿ ತನ್ನ ಮಗುವನ್ನು ಶಫಿ ಕುಟುಂಬಕ್ಕೆ ಹಸ್ತಾಂತರಿಸಿದ್ದಳು ಮತ್ತು ಅದಕ್ಕೆ ಪ್ರತಿಯಾಗಿ ಪದೇ ಪದೇ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಳು. ಪ್ರತಿ ಬಾರಿಯೂ 5,000 ರೂ. ಅಥವಾ 10,000 ರೂ.ಗಳನ್ನು ಕೇಳಿ ಪಡೆಯುತ್ತಿದ್ದಳು. ಆರೋಪಿ ಆಕೆಗೆ ಸಣ್ಣಪುಟ್ಟ ಚಿನ್ನದ ಆಭರಣಗಳನ್ನು ಸಹ ಕೊಡಿಸಿದ್ದ," ಎಂದು ವಿವರಿಸಿದ್ದಾರೆ.

ತನಿಖೆಯ ವೇಳೆ ಕೊ*ಗೆ ಬಳಸಲಾದ ಕತ್ತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಶಫಿಗೆ ನೆರವು ನೀಡಿದ ಆರೋಪದ ಮೇಲೆ ಆತನ ಸ್ನೇಹಿತ ಅಬ್ದುಲ್ಲಾ ದುರ್ಗಾ ರಾವ್ ಎಂಬಾತನ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಆತ ಪ್ರಸ್ತುತ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು, ಕಲ್ಯಾಣಿಯ ಮಗು ಪ್ರಸ್ತುತ ಆರೋಪಿ ಶಫಿಯ ಪತ್ನಿಯ ವಶದಲ್ಲಿದೆ. ಮಗುವಿನ ಕಾನೂನಾತ್ಮಕ ಕಸ್ಟಡಿ ವಿಚಾರವಾಗಿ ಪೊಲೀಸರು ಸಲಹೆ ಪಡೆಯುತ್ತಿದ್ದು, ಮಗುವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ (ICDS) ಹಸ್ತಾಂತರಿಸುವ ಸಾಧ್ಯತೆಯಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಟಿ ರಂಗದಲ್ಲಿ ಇನ್ಫೋಸಿಸ್‌ನಿಂದ ಹೊಸ ಮಾದರಿ, 1ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗೆ ಬಿಗ್ ಆಫರ್ ನೀಡಿದ ಬೆಂಗಳೂರು ಕಂಪೆನಿ!
ಕಾಡಿನಲ್ಲಿ ಟ್ರಾಫಿಕ್ ಜಾಮ್ ಮಾಡಿದ ಪಡ್ಡೆಹುಲಿ! ಸಫಾರಿ ರಸ್ತೆಗೆ ಗಡದ್ದಾಗಿ ಅಡ್ಡ ಮಲಗಿದ ವ್ಯಾಘ್ರ!