ರೇಪಿಸ್ಟ್‌ಗಳ ವಿರುದ್ಧ ಸರ್ಕಾರದ ಬ್ರಹ್ಮಾಸ್ತ್ರ: ಅತ್ಯಾಚಾರಿಗಳಿಗೆ 21 ದಿನದಲ್ಲೇ ಗಲ್ಲು!

By Web DeskFirst Published Dec 13, 2019, 3:09 PM IST
Highlights

ರೇಪಿಸ್ಟ್‌ಗಳ ವಿರುದ್ಧ ಆಂಧ್ರ ಸರ್ಕಾರದ ಬ್ರಹ್ಮಾಸ್ತ್ರ| ದಿಶಾ ವಿಧೇಯಕ ಅಂಗೀಕರಿಸಿದ ಆಂಧ್ರ ಸರ್ಕಾರ| ಆತ್ಯಾಚಾರ ನಡೆದ 21 ದಿನಗಳಲ್ಲೇ ಆರೋಪಿಗೆ ಗಲ್ಲು ಶಿಕ್ಷೆ| ಐತಿಹಾಸಿಕ ವಿಧೇಯಕ ಜಾರಿಗೆ ಮುಂದಾದ ಸರ್ಕಾರ| ಪಶುವೈದ್ಯೆ ರೇಪಿಸ್ಟ್‌ಗಳ ಎನ್‌ಕೌಂಟರ್ ಬೆನ್ನಲ್ಲೇ ಕಠಿಣ ಕಾನೂನು

ಅಮರಾವತಿ[ಡಿ.13]: ಪಶುವೈದ್ಯೆ ರೇಪಿಸ್ಟ್‌ಗಳ ಎನ್‌ಕೌಂಟರ್ ಬೆನ್ನಲ್ಲೇ ರೇಪಿಸ್ಟ್‌ಗಳ ವಿರುದ್ಧ ಆಂಧ್ರ ಸರ್ಕಾರದ ಬ್ರಹ್ಮಾಸ್ತ್ರ ಪ್ರಯೋಗಿಸಿದೆ. ಜಗನ್ ನೇತೃತ್ವದ ಆಂಧ್ರ ಪ್ರದೇಶ ಸರ್ಕಾರ ಐತಿಹಾಸಿಕ ಕಾನೂನು ಜಾರಿಗೊಳಿಸಿದ್ದು, ಈ ನೂತನ ಕಾನೂನಿನ ಅನ್ವಯ ಅತ್ಯಾಚಾರಿಗಳಿಗೆ 21 ದಿನದಲ್ಲೇ ಗಲ್ಲು ಶಿಕ್ಷೆಯಾಗಲಿದೆ. ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ದಿಶಾ ವಿಧೇಯಕ ಮಂಡನೆಯಾಗಿದ್ದು, ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ.

Andhra Pradesh Assembly has passed Andhra Pradesh Disha Bill 2019 (Andhra Pradesh Criminal Law (Amendment) Act 2019). The bill provides for awarding death sentence for offences of rape and gang rape and expediting verdict in trials of such cases within 21 days. pic.twitter.com/VZ6JCVo236

— ANI (@ANI)

ದಿಶಾ ಕಾನೂನಿನಲ್ಲಿ ಏನಿದೆ?

*ಮಹಿಳೆಯರ ಮೇಲಿನ ಅತ್ಯಾಚಾರ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆ

*ಹೊಸ ಕಾನೂನಿನಡಿ ಕೇವಲ 14 ದಿನಗಳಲ್ಲೇ ವಿಚಾರಣೆ ಪೂರ್ಣಗೊಳಿಸಬೇಕು

*ತ್ವರಿತ ವಿಚಾರಣೆ ಬಳಿಕ 21 ದಿನಗಳಲ್ಲಿ ತೀರ್ಪು ನೀಡಲಿರುವ ನ್ಯಾಯಾಲಯ

*ಪ್ರತಿ ಜಿಲ್ಲೆಗಳಲ್ಲೂ ವಿಶೇಷ ನ್ಯಾಯಾಲಯಗಳ ಸ್ಥಾಪನೆ

*ಸಂತ್ರಸ್ಥೆ ಪರ ವಾದಿಸಲು ಸರ್ಕಾರಿ ವಿಶೇಷ ವಕೀಲರ ನೇಮಕ

*ಪ್ರಕರಣಗಳಲ್ಲಿ ಸೆಕ್ಷನ್ 354(E) ಮತ್ತು 354(F) ಸೇರಿಸಲು ಒಪ್ಪಿಗೆ

*ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರನ್ನು ನಿಂದಿಸಿದರೂ ಶಿಕ್ಷೆ

*2 ರಿಂದ ನಾಲ್ಕು ವರ್ಷಗಳ ಶಿಕ್ಷೆ ನೀಡಲು ದಿಶಾ ಕಾಯ್ದೆಯಲ್ಲಿ ಅವಕಾಶ

*ಮಹಿಳೆಯರ ವಿರದ್ಧ ಸುಳ್ಳು ಬರಹ ಹಾಕಿದ್ರೂ 2 ವರ್ಷ ಜೈಲು ಶಿಕ್ಷೆ

*ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ 10 ರಿಂದ 14 ವರ್ಷ ಜೈಲು

*ಪ್ರಕರಣದ ತೀವ್ರತೆ ಆಧರಿಸಿ ಜೀವಾವಧಿ ಶಿಕ್ಷೆ ನೀಡುವ ಅವಕಾಶ

*ಪೋಕ್ಸೋ ಕಾಯ್ದೆಯಡಿ ಕನಿಷ್ಠ 5 ವರ್ಷ ಜೈಲು ಶಿಕ್ಷೆಗೆ ಅವಕಾಶ

click me!