ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್ ಕೊಟ್ಟ ಆಂಧ್ರ ಸರ್ಕಾರ; ನಮ್ಮಲ್ಲಿಯೂ ಸಿಗುತ್ತಾ?

Published : Mar 03, 2025, 08:30 AM ISTUpdated : Mar 03, 2025, 08:38 AM IST
ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್ ಕೊಟ್ಟ ಆಂಧ್ರ ಸರ್ಕಾರ; ನಮ್ಮಲ್ಲಿಯೂ ಸಿಗುತ್ತಾ?

ಸಾರಾಂಶ

ಆಶಾ ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ ಮತ್ತು ವೇತನ ಸಹಿತ ಮಾತೃತ್ವ ರಜೆಯನ್ನು ನೀಡಲು ನಿರ್ಧರಿಸಿದೆ. ನಿವೃತ್ತಿ ವಯಸ್ಸನ್ನು ಹೆಚ್ಚಿಸಿ, 30 ವರ್ಷ ಸೇವೆ ಸಲ್ಲಿಸಿದವರಿಗೆ 1.5 ಲಕ್ಷ ರು. ಗ್ರಾಚ್ಯುಟಿ ನೀಡಲಾಗುವುದು.

ಅಮರಾವತಿ: ಈಗಾಗಲೇ ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ದೇಶದಲ್ಲೇ ಅತಿ ಹೆಚ್ಚು, 10 ಸಾವಿರ ಸಂಬಳ ನೀಡುತ್ತಿರುವ ಸಿಎಂ ಚಂದ್ರಬಾಬು ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಇದೀಗ ಅವರಿಗೆ ಗ್ರಾಚ್ಯುಟಿ, ವೇತನ ಸಹಿತ ಮಾತೃತ್ವ ರಜೆಯಂತಹ ಸವಲತ್ತುಗಳನ್ನು ನೀಡಲು ಮುಂದಾಗಿದೆ. ಮಾ.1ರಂದು ಆರೋಗ್ಯ ಇಲಾಖೆಯ ಪರಿಶೀಲನಾ ಸಭೆ ವೇಳೆ ಈ ಕ್ರಮಗಳಿಗೆ ಅನುಮೋದನೆ ನೀಡಿದ ಸಿಎಂ, ಗ್ರಾಚ್ಯುಟಿ ಪಾವತಿಯನ್ನು ನಿಗದಿಪಡಿಸಲು, ಆಶಾ ಕಾರ್ಯಕರ್ತೆಯರ ವೇತನ, ಲಭ್ಯವಿರುವ ಸೌಲಭ್ಯ, ಅನ್ಯ ರಾಜ್ಯಗಳಲ್ಲಿರುವ ಸಮಸ್ಯೆಗಳ ಕುರಿತು ಅಧ್ಯಯನ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದರನ್ವಯ ಆಶಾ ಕಾರ್ಯಕರ್ತೆಯರ ನಿವೃತ್ತಿ ವಯಸ್ಸನ್ನು 60ರಿಂದ 62ಕ್ಕೆ ಏರಿಸಲಾಗುವುದು ಹಾಗೂ ಮೊದಲ 2 ಹೆರಿಗೆಗಳ ಸಮಯದಲ್ಲಿ 6 ತಿಂಗಳ(180 ದಿನ)ವರೆಗೆ ವೇತನ ಸಹಿತ ಮಾತೃತ್ವ ರಜೆ ನೀಡಲಾಗುವುದು. ಜೊತೆಗೆ, 30 ವರ್ಷ ಸೇವೆ ಸಲ್ಲಿಸಿದ ಕಾರ್ಯಕರ್ತೆಯರಿಗೆ ನಿವೃತ್ತಿ ಸಮಯದಲ್ಲಿ 1.5 ಲಕ್ಷ ರು. ಗ್ರಾಚ್ಯುಟಿ ನೀಡುವ ಮೂಲಕ ಬಹುಕಾಲದ ಬೇಡಿಕೆಯನ್ನು ಈಡೇರಿಸಲಾಗುವುದು. ಈ ಮೂಲಕ, ಆಂಧ್ರಪ್ರದೇಶ ಆಶಾ ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ ನೀಡಿದ ಮೊದಲ ರಾಜ್ಯ ಎನಿಸಿಕೊಳ್ಳಲಿದೆ. ಒಟ್ಟು 42,752 ಕಾರ್ಯಕರ್ತೆಯರು ಇವುಗಳ ಲಾಭ ಪಡೆಯಲಿದ್ದಾರೆ.

ಪ್ರಸ್ತುತ ಉತ್ತರಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರಿಗೆ 750 ರು., ಹಿಮಾಚಲ ಪ್ರದೇಶದಲ್ಲಿ 2 ಸಾವಿರ ರು., ರಾಜಸ್ಥಾನದಲ್ಲಿ 2,700 ರು,. ಪಶ್ಚಿಮ ಬಂಗಾಳ ಮತ್ತು ದೆಹಲಿಯಲ್ಲಿ 3 ಸಾವಿರ ರು., ಕರ್ನಾಟಕ ಹಾಗೂ ಹರ್ಯಾಣದಲ್ಲಿ 4 ಸಾವಿರ ರು., ಕೇರಳದಲ್ಲಿ 5 ಸಾವಿರ ರು., ಸಿಕ್ಕಿಂನಲ್ಲಿ 6 ಸಾವಿರ ರು., ತೆಲಂಗಾಣದಲ್ಲಿ 7.5 ಸಾವಿರ ರು. ವೇತನ ನೀಡಲಾಗುತ್ತಿದೆ.

ಇದನ್ನೂ ಓದಿ:200 ಆಶಾ ಕಾರ‍್ಯಕರ್ತರಿಗೆ ರೇಷ್ಮೆ ಸೀರೆ ವಿತರಣೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಭಾರತ-ಆಫ್ರಿಕಾ ಫೈನಲ್ ಫೈಟ್ - ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌