
World heritage: ತನ್ನ ಶ್ರೀಮಂತ ನೈಸರ್ಗಿಕ ಸಂಪತ್ತು, ಸಾಂಸ್ಕೃತಿಕ ಪರಂಪರೆಗೆ ಭಾರತವು ಜಾಗತಿಕಮಟ್ಟದಲ್ಲಿ ವಿಶೇಷ ಮನ್ನಣೆ ಪಡೆದಿದೆ, ಯುನೆಸ್ಕೋ ಪಟ್ಟಿಯಲ್ಲಿ ಈಗಾಗಲೇ ಭಾರತದ ಅನೇಕ ತಾಣಗಳು ಸೇರ್ಪಡೆಯಾಗಿವೆ. ಇದೀಗ ವಿಶ್ವ ಪರಂಪರೆಯ ತಾಣಗಳ ತಾತ್ಕಾಲಿಕ ಪಟ್ಟಿ(Tentative List)ಗೆ ಭಾರತದ ಮೂರು ಹೊಸ ತಾಣಗಳು ಸೇರ್ಪಡೆಯಾಗಿವೆ.
ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಭಾರತದ ಮೂರು ಹೊಸ ತಾಣಗಳು ಸೇರ್ಪಡೆಯೊಂದಿಗೆ ಅವುಗಳ ನಾಮನಿರ್ದೇಶನಕ್ಕೆ ನಿರ್ಣಾಯಕವಾಗಿದೆ. ಅಂದರೆ ಯಾವುದೇ ವಿಶೇಷ ತಾಣಗಳು ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆಯಾಗಲು ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಯಾಗುದು ಮೊದಲ ಹೆಜ್ಜೆಯಾಗಿದೆ. ಇದರಿಂದ ಈ ತಾಣಗಳು ಅಂತಾರಾಷ್ಟ್ರೀಯ ಗಮನ ಸೆಳೆಯಲು ಸಂರಕ್ಷಿಲು ಸಾಧ್ಯವಾಗುತ್ತದೆ.
ಹೊಸದಾಗಿ ಸೇರ್ಪಡೆಗೊಂಡ ತಾಣಗಳೆಂದರೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಬರಾಟಾಂಗ್ ಮತ್ತು ಅಂಡಮಾನ್ ಸಬ್ಡಕ್ಷನ್ ಜ್ವಾಲಾಮುಖಿಗಳ ಕಾರ್ಸ್ಟ್-ಮಡ್-ಜ್ವಾಲಾಮುಖಿ ಸಂಕೀರ್ಣ(Karst-mud-volcano Complex of Baratang) ಮತ್ತು ಛತ್ತೀಸ್‌ಗಢದಲ್ಲಿರುವ ಸಿರ್ಪುರ್ ಸಾಂಸ್ಕೃತಿಕ ಮತ್ತು ಪುರಾತತ್ವ ಭೂದೃಶ್ಯ(Sirpur Cultural and Archaeological Landscape). ಜಾಗತಿಕ ಮನ್ನಣೆ ಪಡೆಯಲು ಬಯಸುವ ಯಾವುದೇ ತಾಣಕ್ಕೆ ಈ ಸೇರ್ಪಡೆ ಕಡ್ಡಾಯ ಮತ್ತು ಫಸ್ಟ್ ಸ್ಟೆಪ್ ಎಂದು ಯುನೆಸ್ಕೋಗೆ ಭಾರತದ ಶಾಶ್ವತ ನಿಯೋಗವು ಹೈಲೈಟ್ ಮಾಡಿದೆ. ಇದಕ್ಕಾಗಿ ಅಗತ್ಯ ದಾಖಲೆ ಸಿದ್ಧಪಡಿಸುವಲ್ಲಿ ಭಾರತದ ಪುರಾತತ್ವ ಸಮೀಕ್ಷೆಯ ಶ್ರದ್ಧೆಯ ಕೆಲಸವನ್ನು ಇದರ ಹಿಂದಿದೆ.
ವಿಶಿಷ್ಟ ಭೂವೈಜ್ಞಾನಿಕ ಮತ್ತು ಪರಿಸರ ಭೂದೃಶ್ಯವಾದ ಬರಾಟಾಂಗ್ ದ್ವೀಪ(Baratang Island)ವು ಸುಣ್ಣದ ಕಲ್ಲು ಗುಹೆಗಳು, ಮಣ್ಣಿನ ಜ್ವಾಲಾಮುಖಿಗಳು (ಸ್ಥಳೀಯವಾಗಿ 'ಜಲ್ಕಿ' ಎಂದು ಕರೆಯಲಾಗುತ್ತದೆ) ಮತ್ತು ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಭೂವೈಜ್ಞಾನಿಕ ಇತಿಹಾಸಕ್ಕೆ ಹೆಸರುವಾಸಿಯಾಗಿದೆ. ಈ ಮಣ್ಣಿನ ಜ್ವಾಲಾಮುಖಿಗಳು, ಅವುಗಳ ಉರಿಯುತ್ತಿರುವ ಪ್ರತಿರೂಪಗಳಿಗಿಂತ ಭಿನ್ನವಾಗಿದ್ದು, ಮಣ್ಣು ಮತ್ತು ಅನಿಲಗಳ ತಂಪಾದ ಸ್ಲರಿಗಳನ್ನು ಹೊಂದಿದೆ. ದ್ವೀಪದ ವೈಶಿಷ್ಟ್ಯಗಳು ಪ್ರದೇಶದ ಟೆಕ್ಟೋನಿಕ್ ವಿಕಸನ ಮತ್ತು ಭೂಗತ ಜಲವಿಜ್ಞಾನದ ಬಗ್ಗೆ ಅಮೂಲ್ಯವಾದ ಒಳನೋಟ(insight) ನೀಡುತ್ತದೆ. ಅಷ್ಟೇ ಅಲ್ಲದೆ ಬರಾಟಾಂಗ್ ಮೀಸಲು ಅರಣ್ಯ/ಜರಾವಾ ಬುಡಕಟ್ಟು ಮೀಸಲು ಪ್ರದೇಶದ ಅಡಿಯಲ್ಲಿ ರಕ್ಷಿಸಲ್ಪಟ್ಟಿವೆ.
ಅಂಡಮಾನ್‌ನ ವಿಶೇಷತೆಯನ್ನು ನಾರ್ಕೊಂಡಮ್ ಮತ್ತು ಬ್ಯಾರೆನ್ ದ್ವೀಪಗಳು ಮತ್ತಷ್ಟು ಹೆಚ್ಚಿಸಿವೆ. ಬರ್ಮಾ, ಅಂಡಮಾನ್ ಮತ್ತು ಜಾವಾ ಪ್ರದೇಶಗಳಲ್ಲಿರುವ ಇತ್ತೀಚಿನ ಭೂವೈಜ್ಞಾನಿಕ ಕಾಲಘಟ್ಟದ ವಿಶಿಷ್ಟ ಜ್ವಾಲಾಮುಖಿ ದ್ವೀಪಗಳು ಇವು. ಈ ದ್ವೀಪಗಳು ಜ್ವಾಲಾಮುಖಿಗಳ ರಚನೆ ಮತ್ತು ಅಲ್ಲಿನ ವಿಶಿಷ್ಟ ಪರಿಸರದ ಬಗ್ಗೆ ತಿಳಿಸುತ್ತವೆ. ಈಗಾಗಲೇ ಬ್ಯಾರೆನ್ ದ್ವೀಪವನ್ನು ಭೂವೈಜ್ಞಾನಿಕ ಪರಂಪರೆಯ ತಾಣವೆಂದು ಗುರುತಿಸಲಾಗಿದೆ. ನಾರ್ಕೊಂಡಮ್ ದ್ವೀಪವನ್ನು ಪ್ರಮುಖ ಪಕ್ಷಿ ತಾಣವೆಂದು ಗುರುತಿಸಲಾಗಿದೆ.
ಇದೇ ವೇಳೆ ಛತ್ತೀಸ್‌ಗಢದ ಮಹಾಸಮುಂದ್ ಜಿಲ್ಲೆಯ ಸಿರ್ಪುರ್ ಗ್ರಾಮವು ಪುರಾತನ ಇತಿಹಾಸ ಮತ್ತು ವಿಶಿಷ್ಟ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಮಹಾನದಿ ನದಿಯ ದಡದಲ್ಲಿರುವ ಈ ಪ್ರದೇಶದಲ್ಲಿ ವಿವಿಧ ಧರ್ಮಗಳಿಗೆ ಸೇರಿದ ಪುರಾತನ ಧಾರ್ಮಿಕ ತಾಣಗಳು ಮತ್ತು ಐತಿಹಾಸಿಕ ಕಟ್ಟಡಗಳಿವೆ. ಇಲ್ಲಿನ ಪುರಾತತ್ವ ಅವಶೇಷಗಳು ಹಿಂದಿನ ಕಾಲದ ನಗರ ಜೀವನದ ಬಗ್ಗೆ ತಿಳಿಸುತ್ತವೆ. ಇದರ ಜೊತೆಗೆ, ಸಮೀಪದಲ್ಲಿರುವ ಬರ್ನವಾಪರಾ ವನ್ಯಜೀವಿ ಅಭಯಾರಣ್ಯ ಹಾಗೂ ಗೊಂಡ್, ಬೈಗಾ ಸೇರಿದಂತೆ ಸ್ಥಳೀಯ ಬುಡಕಟ್ಟು ಜನರ ವಾಸವಾಗಿರುವುದು ಒಟ್ಟಾರೆ ಈ ಪ್ರದೇಶದ ಮಹತ್ವವನ್ನು ಹೆಚ್ಚಿಸಿದೆ. ಹೀಗೆ ಸಿರ್ಪುರ್ ಪ್ರಾಚೀನ ಇತಿಹಾಸ, ಬುಡಕಟ್ಟು ಸಂಸ್ಕೃತಿ ಮತ್ತು ನೈಸರ್ಗಿಕ ಸೌಂದರ್ಯದ ಸಂಗಮವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ