ಅನಂತ್ ಅಂಬಾನಿ ಜಾಮ್ನಗರ್‌ನಲ್ಲಿ ನಡೆಯುತ್ತಿರುವ ವಿವಾಹ ಪೂರ್ವ ಸಮಾರಂಭದಲ್ಲಿ ತಮ್ಮ ತಂದೆ ತಾಯಿ, ರಾಧಿಕಾ ಹಾಗೂ ಬಾಲ್ಯದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಗುಜರಾತ್‌ನ ಜಾಮ್ನಗರ್‌ನಲ್ಲಿ 3 ದಿನಗಳ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಸಮಾರಂಭವು ಅದ್ಧೂರಿಯಾಗಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಅನಂತ್ ಅಂಬಾನಿ ತಮ್ಮ ಮನದಾಳದ ಕೆಲ ಮಾತುಗಳನ್ನು ನೆರೆದವರೊಂದಿಗೆ ಹಂಚಿಕೊಂಡಿದ್ದು, ಇದು ಕುಟುಂಬವನ್ನು ಭಾವುಕವಾಗಿಸಿತು.
ವಿಶೇಷವಾಗಿ ಅನಂತ್, 'ನನ್ನ ಬಾಲ್ಯವು ಹೂವಿನ ಹಾಸಿಗೆಯಾಗಿರಲಿಲ್ಲ. ತಾನು ಮುಳ್ಳುಗಳ ನೋವನ್ನು ಕೂಡಾ ಅನುಭವಿಸಿದ್ದೇನೆ. ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದು, ಈ ಸಂದರ್ಭದಲ್ಲಿ ನನಗೆ ಅಪ್ಪ ಅಮ್ಮ ಸಂಪೂರ್ಣ ಬೆಂಬಲವಾಗಿ ನಿಂತಿದ್ದರು' ಎಂದರು. ಈ ಮಾತುಗಳನ್ನು ಕೇಳುತ್ತಿದ್ದಂತೆ ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಭಾವನೆಗಳನ್ನು ಹತ್ತಿಕ್ಕಲಾಗದೆ ಕಣ್ಣೀರು ಸುರಿಸಿದ್ದಾರೆ.
ದಿನಕ್ಕೆ 3 ಗಂಟೆ ನಿದ್ದೆ
ರಾಧಿಕಾ ಮರ್ಚೆಂಟ್ ಅವರೊಂದಿಗಿನ ವಿವಾಹದ ಮೊದಲು ಗುಜರಾತ್‌ನ ಜಾಮ್‌ನಗರದಲ್ಲಿ ಸಮಾರಂಭ ಆಯೋಜಿಸಲು ಅವಿರತವಾಗಿ ಶ್ರಮಿಸಿದ್ದಕ್ಕಾಗಿ ಅನಂತ್ ಅಂಬಾನಿ ಅವರ ತಾಯಿ ನೀತಾ ಅಂಬಾನಿ ಅವರಿಗೆ ಧನ್ಯವಾದ ಅರ್ಪಿಸಿದರು.
ಅನಂತ್- ರಾಧಿಕಾ ವಿವಾಹಕ್ಕೆ ಎನರ್ಜಿ ತುಂಬಿದ ರಿಹಾನಾ; ಒಂದು ಪ್ರದರ್ಶನದ ಸಂಭಾವನೆ ಕೇಳಿದ್ರೆ ತಲೆ ತಿರುಗುತ್ತೆ!
'ಇದನ್ನೆಲ್ಲ ನನ್ನ ಅಮ್ಮನೇ ಸೃಷ್ಟಿಸಿದ್ದೇ ಹೊರತು ಬೇರೆ ಯಾರೂ ಅಲ್ಲ. ನನ್ನ ತಾಯಿ ಕಳೆದ 4 ತಿಂಗಳಿನಿಂದ ಮನೆಯ ಹೊರಗೆ ಇದ್ದು, 18-19 ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ. ನಾನು ಅಮ್ಮನಿಗೆ ತುಂಬಾ ಕೃತಜ್ಞನಾಗಿದ್ದೇನೆ,' ಎಂದಿದ್ದಾರೆ.
ಇನ್ನು ಮುಂದುವರಿದು, 'ನನ್ನ ಮತ್ತು ರಾಧಿಕಾಗೆ ವಿಶೇಷ ಭಾವನೆ ಉಂಟು ಮಾಡಲು ನೀವೆಲ್ಲ ಪಟ್ಟ ಶ್ರಮಕ್ಕಾಗಿ ಕೃತಜ್ಞತೆಗಳು' ಎಂದ ಅನಂತ್, 'ತಮ್ಮಿಡೀ ಕುಟುಂಬ ಕಳೆದ 2 ತಿಂಗಳಿಂದ ದಿನಕ್ಕೆ ಕೇವಲ 3 ಗಂಟೆ ನಿದ್ದೆ ಮಾಡಿದೆ' ಎಂದು ತಿಳಿಸಿದ್ದಾರೆ.
ರಾಧಿಕಾ ಸಿಕ್ಕಲು ಅದೃಷ್ಟ ಮಾಡಿದ್ದೆ..
'ರಾಧಿಕಾ ನನಗೆ ಹೇಗೆ ಸಿಕ್ಕಳೋ ಗೊತ್ತಿಲ್ಲ. ಆದರೆ, ಆಕೆ ನನಗೆ ಸಿಕ್ಕಿದ್ದು ನನ್ನ ಅದೃಷ್ಟವಾಗಿದೆ. ಪ್ರತಿದಿನ ಆಕೆಯ ಮೇಲೆ ನನ್ನ ಪ್ರೀತಿ ಹೆಚ್ಚುತ್ತಲೇ ಇದೆ. ರಾಧಿಕಾಳನ್ನು ನೋಡಿದಾಗ ಎದೆಯಲ್ಲಿ ಸುನಾಮಿ ಉಂಟಾಗುತ್ತದೆ' ಎಂದು ಅನಂತ್ ಹೇಳಿದ್ದಾರೆ.
ದಕ್ಷಿಣದ ಚಿತ್ರದಲ್ಲಿ ಅಭಿನಯಿಸಲು 'ನಿರ್ಮಾಪಕರೊಂದಿಗೆ ಮಲಗಲು' ಕೇಳಿದ್ರು; ಕರಾಳ ಅನುಭವ ಬಿಚ್ಚಿಟ್ಟ ಅಂಕಿತಾ
ಮೂರು ದಿನಗಳ ಮುಖ್ಯ ಕಾರ್ಯಕ್ರಮಕ್ಕಾಗಿ, ವಿಶ್ವದ ಕೆಲವು ಶ್ರೀಮಂತ ವ್ಯಕ್ತಿಗಳು ಸೇರಿದಂತೆ 1,000 ಕ್ಕೂ ಹೆಚ್ಚು ಅತಿಥಿಗಳು ಹಾಜರಾಗಿದ್ದಾರೆ. ಗಮನಾರ್ಹ ಆಹ್ವಾನಿತರಲ್ಲಿ ಬಿಲ್ ಗೇಟ್ಸ್, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಅಮೀರ್ ಖಾನ್, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರಂತಹ ಉನ್ನತ ಬಾಲಿವುಡ್ ತಾರೆಯರು ಸೇರಿದ್ದಾರೆ.