ಸೋಶಿಯಲ್ ಮೀಡಿಯಾಆದಲ್ಲಿ ಆನಂದ್ ಮಹೀಂದ್ರಾ ಸದಾ ಆಕ್ಟೀವ್/ ಬಡತನದಲ್ಲಿದ್ದ ಬಾಕ್ಸರ್ ನೆರವಿಗೆ ಆನಂದ್ ಮಹೀಂದ್ರಾ/ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿರುವ ರಾಷ್ಟ್ರೀಯ ಬಾಕ್ಸರ್
ಮುಂಬೈ(ಏ. 18) ರಾಷ್ಟ್ರೀಯ ಮಟ್ಟದಲ್ಲಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಬಾಕ್ಸರ್ ಸಂಕಷ್ಟದ ಬದುಕಿನಲ್ಲಿದ್ದರು. ಬದುಕಿನ ಬಂಡಿ ಸಾಗಿಸಲು ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು.
ಬಾಕ್ಸರ್ ಅಬೀದ್ ಖಾನ್ ಸ್ಟೋರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಆನಂದ್ ಮಹೀಂದ್ರಾ ನೆರವು ನೀಡಿದ್ದಾರೆ. ಒಬ್ಬ ಬಾಕ್ಸರ್ ಮಾತ್ರ ಆಗಿರದ ಖಾನ್ ಕೋಚ್ ಆಗಿಯೂ ಐದು ವರ್ಷ ಕೆಲಸ ಮಾಡಿದ್ದಾರೆ.
undefined
ಮೂರು ಕಿಮೀ ಕಾಲುವೆ ತೋಡಿದ್ದ ರೈತನಿಗೆ ಮಹೀಂದ್ರಾ ಟ್ರ್ಯಾಕ್ಟರ್ ಗಿಫ್ಟ್
ಖಾನ್ ಅವರ ಜೀವನ ಉತ್ಸಾಹಕ್ಕೆ ಮೊದಲು ಅಭಿನಂದನೆ ಹೇಳುತ್ತೇನೆ ಎಂದಿರುವ ಅವರು ಜನರಿಂದಲೇ ಸಲಹೆ ಕೇಳಿದ್ದಾರೆ. ಬಾಕ್ಸಿಂಗ್ ಸ್ಟಾರ್ಟ್ ಅಪ್ ಓಪನ್ ಮಾಡಲು ಖಾನ್ ಅವರಿಗೆ ಹೇಗೆ ನೆರವು ನೀಡಬಹುದು ತಿಳಿಸಿ ಎಂದು ಕೇಳಿಕೊಂಡಿದ್ದಾರೆ. ಯಾವುದಾದರೂ ರೀತಿಯಲ್ಲಿ ಸಹಾಮ ಮಾಡಲು ಸಿದ್ಧ ಎಂದು ತಿಳಿಸಿದ್ದಾರೆ.
ಇಡ್ಲಿ ಅಮ್ಮ ಎಂದು ಖ್ಯಾತಿ ಪಡೆದಿದ್ದ ಮಹಿಳೆಗೆ ಕೆಲ ದಿನಗಳ ಹಿಂದೆ ಮಹೀಂದ್ರಾ ಹೊಸ ಮನೆ ಮಾಡಿಸಿಕೊಟ್ಟಿದ್ದರು. ಹಲವು ವರ್ಷಗಳಿಂದ ಒಂದು ರೂ. ಗೆ ಇಡ್ಲಿ ನೀಡಿಕೊಂಡು ಬಂದ ಮಹಿಳೆ ನೆರವಿಗೆ ಮಹೀಂದ್ರಾ ನಿಂತಿದ್ದರು.