ಡಾರ್ಕ್‌ ಚಾಕೊಲೇಟ್‌ ಸಿಕ್ತು ಅಂತಾ ಕಣ್ಮುಚ್ಚಿ ಬಾಯಿಗೆ ಹಾಕಿದ್ರೆ ಅಷ್ಟೇ ಕತೆ, ಚೂರು ಯಾಮಾರಿದ್ರೂ ಜೀವಕ್ಕೆ ಕಾದಿದೆ ಅಪಾಯ

Published : Oct 24, 2026, 08:20 PM IST
dark chocolate

ಸಾರಾಂಶ

ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಗ್ರಾಹಕರೊಬ್ಬರು ಖರೀದಿಸಿದ ಅಮೂಲ್ ಡಾರ್ಕ್ ಚಾಕೊಲೇಟ್‌ನಲ್ಲಿ ಜೀವಂತ ಹುಳುಗಳು ಪತ್ತೆಯಾಗಿವೆ. ಅವಧಿ ಮುಗಿಯದಿದ್ದರೂ ಚಾಕೊಲೇಟ್‌ನಲ್ಲಿ ಕೀಟಗಳು ಕಂಡುಬಂದಿರುವುದು ಆಹಾರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ.

ನವದೆಹಲಿ: ಡಾರ್ಕ್‌ ಚಾಕೊಲೇಟ್‌ ಪ್ರಿಯರಿಗೆ ಆಘಾತಕಾರಿ ಸುದ್ದಿಯೊಂದು ಬಂದಿದೆ. ಡಾರ್ಕ್‌ ಚಾಕೊಲೇಟ್‌ ಅಂದಕೂಡಲೇ ಕೆಲವರ ಬಾಯಲ್ಲಿ ನೀರು ಬರುತ್ತೆ. ಹೀಗೇ ಬಾಯಲ್ಲಿ ನೀರು ತರಿಸುವ ಚಾಕೊಲೇಟ್‌ ನಿಮ್ಮ ಆರೋಗ್ಯಕ್ಕೆ ಸುರಕ್ಷಿತವಾಗಿದೆಯಾ ಎಂಬ ಪ್ರಶ್ನೆ ಮತ್ತೊಮ್ಮೆ ಶುರುವಾಗಿದೆ. ಅಸಲಿಗೆ ಆಗಿದ್ದೇನು?

ಅಮೂಲ್.‌ ದೇಶದ ಪ್ರಸಿದ್ಧ ಡೈರಿ ಬ್ರಾಂಡ್‌ ಅಮೂಲ್!‌ ಈ ಅಮೂಲ್‌ಗೆ ಸರಿಸಾಟಿ ಆಗಿರುವ ಮತ್ತೊಂದು ಬ್ರಾಂಡ್‌ ಇನ್ನೂ ಇಲ್ಲ. ಹೀಗಿರುವಾಗ ಅಮೂಲನ್‌ನ ಶುದ್ಧತೆ ಮತ್ತು ಗುಣಮಟ್ಟದ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಉದ್ಭವಿಸಿದೆ. ಹಿಮಾಚಲ ಪ್ರದೇಶದ ಶಿಮ್ಲಾದ ಗ್ರಾಹಕರೊಬ್ಬರು ಡಾರ್ಕ್‌ ಚಾಕೊಲೇಟ್‌ ಖರೀದಿಸಿ ಆಘಾತಕ್ಕೆ ಒಳಗಾಗಿದ್ದಾರೆ. ಪ್ರಸಿದ್ಧ ಬ್ರ್ಯಾಂಡ್‌ನ ಚಾಕೊಲೇಟ್‌ ಒಳಗೆ ಹುಳುಗಳು ಓಡಾಡುತ್ತಿರೋದನ್ನ ನೋಡಿರೋದಾಗಿ ದೂರಿದ್ದಾರೆ. ಬೆನ್ನಲ್ಲೇ.. ಮಕ್ಕಳ ಆರೋಗ್ಯ ಮತ್ತು ಆಹಾರ ಉತ್ಪನ್ನಗಳ ಸುರಕ್ಷತೆಯ ಬಗ್ಗೆ ಪೋಷಕರು ಮತ್ತು ಸಾರ್ವಜನಿಕರಲ್ಲಿ ಕಳವಳ ಶುರುವಾಗಿದೆ. ಜೊತೆಗೆ ಪ್ರಸಿದ್ಧ ಬ್ರಾಂಡ್‌ ವಿರುದ್ಧ ಆಕ್ರೋಶವನ್ನು ಹೊರಹಾಕಿದೆ. ಮಕ್ಕಳಿಗೆ ಅದು ಹೇಗಿದೆ ನೋಡದೇ ನೇರವಾಗಿ ನೀಡಿದರೆ ಏನು ಕತೆ ಎಂಬ ಪ್ರಶ್ನೆಯೂ ಎದ್ದಿದೆ. ಜೊತೆಗೆ ಜನಪ್ರಿಯ ಬ್ರಾಂಡ್‌ ಒಂದು ಇಷ್ಟು ಕಳಪೆಗೆ ಇಳಿಯಾ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಏನಿದು ಪ್ರಕರಣ?

ಸಂದೀಪ್ ಶರ್ಮಾ, ನ್ಯೂ ಶಿಮ್ಲಾ ನಿವಾಸಿ. ಇವರು ಅಕ್ಟೋಬರ್ 17, 2026 ರಂದು ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಅಂಗಡಿಯಿಂದ 40 ಗ್ರಾಂ ತೂಕದ ಅಮುಲ್ ಡಾರ್ಕ್ ಫ್ರೂಟ್ ಅಂಡ್ ನಟ್ ಚಾಕೊಲೇಟ್ ಖರೀದಿಸಿದ್ದರಂತೆ.. ಖರೀದಿ ಬಳಿಕ ಶಿಮ್ಲಾಗೆ ಹಿಂತಿರುಗಿದ್ದರು. ಮನೆಗೆ ಬಂದು ಚಾಕೊಲೇಟ್ ಪ್ಯಾಕೆಟ್ ತೆರೆದಾಗ.. ಒಳಗೆ ಜೀವಂತ ಕೀಟಗಳು ತೆವಳುತ್ತಿರುವುದು ಕಂಡುಬಂದಿದೆ.. ಈ ದೃಶ್ಯ ನೋಡಿ ನನ್ನ ಇಡೀ ಕುಟುಂಬ ಆಘಾತಕ್ಕೆ ಒಳಗಾಗಿದೆ ಎಂದು ದೂರಿದ್ದಾರೆ..

ಇನ್ನು ಆ ಚಾಕೊಲೇಟ್‌ಗೆ ಎಕ್ಸ್‌ಪೈರಿ ಕೂಡ ಆಗಿರಲಿಲ್ಲ. ಅದರ ಎಕ್ಸ್‌ಪೈರಿ ಡೇಟ್‌ 2027 ಆಗಿತ್ತು. ಹೀಗಿದ್ದೂ ಚಾಕೊಲೇಟ್‌ ಒಳಗೆ ಹುಳುಗಳು ಹೇಗೆ ಆದವು. ಅದರ ಗುಣಮಟ್ಟ ಮತ್ತು ಪ್ಯಾಕಿಂಗ್‌ ಮೇಲೆ ಅನುಮಾನ ವ್ಯಕ್ತವಾಗಿದೆ. ಅಲ್ಲದೇ ಪ್ರಸಿದ್ಧ ಅಮೂಲ್‌ ಬ್ರಾಂಡ್‌ ತನ್ನ ಗುಣಮಟ್ಟವನ್ನು ಕಳೆದುಕೊಳ್ಳುತ್ತಿದೆಯಾ ಎಂಬ ಅನುಮಾನ ಮೂಡಿದೆ. ಹುಳು ಪತ್ತೆ ಆಗಿರೋದನ್ನು ಗಂಭೀರವಾಗಿ ಪರಿಗಣಿಸಿರುವ ಸಂದೀಪ್‌ ಶರ್ಮಾ, ಪ್ರಕರಣವನ್ನು ಅಲ್ಲಿಗೆ ನಿಲ್ಲಿಸಲಿಲ್ಲ.

ಗ್ರಾಹಕರ ಸುರಕ್ಷತೆಯನ್ನು ಇಟ್ಟುಕೊಂಡು ಅಮೂಲ್‌ ಗ್ರಾಹಕರ ಸೇವೆಗೆ ದೂರು ನೀಡಿದ್ದಾರೆ. ಕಂಪನಿಯು ಚಾಕೊಲೇಟ್‌ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದಂತೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೇ.. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಮತ್ತು ಆಡಳಿತಕ್ಕೆ ಮನವಿ ಮಾಡಿದ್ದಾರೆ. FSSAI ಪ್ರಸಿದ್ಧ ಡೈರಿ ಬ್ರಾಂಡ್‌ ವಿರುದ್ಧ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತದೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Rahul protest: ನ.01ರ ರಾಹುಲ್ ಪ್ರತಿಭಟನೆಗೆ ಬಿಗ್ ಟ್ವಿಸ್ಟ್; ಬಿಜೆಪಿ ಹೂಡಿದ ಬ್ರಹ್ಮಾಸ್ತ್ರಕ್ಕೆ 'ಕೈ' ಪಡೆ ವಿಲವಿಲ
ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸುತ್ತಲೇ ಮಾಂಸಾಹಾರ ಬ್ಯಾನ್? ಭಾರಿ ವಿವಾದ- ರಾಜಭವನ ಹೇಳಿದ್ದೇನು