2024ರೊಳಗೆ ಅಕ್ರಮ ವಿದೇಶಿ ವಲಸಿಗರನ್ನು ಹೊರಗಟ್ಟುತ್ತೇವೆ

By Kannadaprabha News  |  First Published Dec 3, 2019, 7:35 AM IST

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯನ್ನು ದೇಶಾದ್ಯಂತ ವಿಸ್ತರಿಸುವುದಾಗಿ ಹೇಳುತ್ತಾ ಬಂದಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಇದೀಗ ಅದಕ್ಕೆ 2024ರ ಕಾಲಮಿತಿಯನ್ನು ನಿಗದಿಪಡಿಸಿದ್ದಾರೆ. 


ಚಕ್ರಧರಪುರ [ನ.03]:  ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಅಸ್ಸಾಂನಲ್ಲಿ ನಡೆಸಲಾದ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯನ್ನು ದೇಶಾದ್ಯಂತ ವಿಸ್ತರಿಸುವುದಾಗಿ ಹೇಳುತ್ತಾ ಬಂದಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಇದೀಗ ಅದಕ್ಕೆ 2024ರ ಕಾಲಮಿತಿಯನ್ನು ನಿಗದಿಪಡಿಸಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಗೂ ಮುನ್ನ ಪ್ರತಿಯೊಬ್ಬ ಅಕ್ರಮ ವಲಸಿಗರನ್ನೂ ಗುರುತಿಸಿ, ದೇಶದಿಂದ ಹೊರದಬ್ಬುವುದಾಗಿ ಅವರು ಘೋಷಿಸಿದ್ದಾರೆ.

ಜಾರ್ಖಂಡ್‌ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಸೋಮವಾರ ಮಾತನಾಡಿದ ಅಮಿತ್‌ ಶಾ, ಇಂದು ನಾನು ಹೇಳುತ್ತಿದ್ದೇನೆ. 2024ರ ಸಾರ್ವತ್ರಿಕ ಲೋಕಸಭೆ ಚುನಾವಣೆಗೂ ಮುನ್ನ ಎನ್‌ಆರ್‌ಸಿಯನ್ನು ದೇಶಾದ್ಯಂತ ನಡೆಸಲಾಗುತ್ತದೆ. ಪ್ರತಿ ನುಸುಳುಕೋರನನ್ನೂ ಗುರುತಿಸಿ ದೇಶದಿಂದ ಹೊರದಬ್ಬಲಾಗುತ್ತದೆ ಎಂದರು.

Tap to resize

Latest Videos

ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಪಕ್ಷ ಪರಾಭವಗೊಳ್ಳಲು ಎನ್‌ಆರ್‌ಸಿ ಕುರಿತು ಮತದಾರರಲ್ಲಿ ಇರುವ ಆತಂಕವೇ ಕಾರಣ ಬಿಜೆಪಿ ನಾಯಕರು ಹೇಳಿದ್ದಾರೆ. ಈ ಅಪಸ್ವರದ ನಡುವೆಯೂ ಎನ್‌ಆರ್‌ಸಿ ವಿಚಾರದಲ್ಲಿ ರಾಜಿ ಇಲ್ಲ ಎಂದು ಅಮಿತ್‌ ಶಾ ಹೇಳಿರುವುದು ಮಹತ್ವ ಪಡೆದುಕೊಂಡಿದೆ.

‘ರಾಹುಲ್‌ ಬಾಬಾ (ರಾಹುಲ್‌ ಗಾಂಧಿ) ಅವರು ನುಸುಳುಕೋರರನ್ನು ದೇಶದಿಂದ ಹೊರಹಾಕಬೇಡಿ. ಅವರು ಎಲ್ಲಿಗೆ ಹೋಗುತ್ತಾರೆ? ಹೊಟ್ಟೆಹೊರೆಯಲು ಏನು ಮಾಡುತ್ತಾರೆ ಎನ್ನುತ್ತಿದ್ದಾರೆ. ಆದರೆ 2024ರ ಮುನ್ನ ಎಲ್ಲ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕಿಸಲಾಗುತ್ತದೆ’ ಎಂದರು.

ಇನ್ನು ರಾಮಮಮಂದಿರ ವಿಷಯವನ್ನು ಪ್ರಸ್ತಾಪಿಸಿದ ಅವರು, ‘ಈ ಕುರಿತ ಸುಪ್ರೀಂ ಕೋರ್ಟ್‌ ತೀರ್ಪನ್ನು ಮುಂದೂಡಿಸಲು ಕಾಂಗ್ರೆಸ್‌ ಯತ್ನಿಸಿತು. ಆದರೆ ನಾವು ಮುಂದುವರಿದು ತ್ವರಿತ ವಿಚಾರಣೆಗೆ ಕೋರಿದೆವು. ಇದರ ಫಲವಾಗಿ ರಾಮಮಂದಿರ ನಿರ್ಮಾಣ ಆಯೋಧ್ಯೆಯಲ್ಲಿ ಆಗಬೇಕು ಎಂಬ ತೀರ್ಪು ಬಂತು’ ಎಂದರು.

click me!