UP Elections: ಯುಪಿ ಚುನಾವಣೆ ಮುಂದಕ್ಕೆ? ಮೋದಿ, ಆಯೋಗಕ್ಕೆ ಹೈಕೋರ್ಟ್‌ ಮನವಿ!

By Suvarna NewsFirst Published Dec 24, 2021, 4:24 AM IST
Highlights

* ಒಮಿಕ್ರೋನ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆ

* ಚುನಾವಣೆ ಮುಂದೂಡಲು ನರೇಂದ್ರ ಮೋದಿ ಮತ್ತು ಚುನಾವಣಾ ಆಯೋಗಕ್ಕೆ ಅಲಹಾಬಾದ್‌ ಹೈಕೋರ್ಟ್‌ ಮನವಿ 

* ಚುನಾವಣೆಗೆ ಸಂಬಂಧಿಸಿದಂತೆ ಜನ ಸೇರುವುದನ್ನು ತಡೆಯಬೇಕು ಎಂದು ಉಲ್ಲೇಖ

ಅಲಹಾಬಾದ್‌(ಡಿ.24): ಒಮಿಕ್ರೋನ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುಂಬರುವ ಉತ್ತರ ಪ್ರದೇಶ ಚುನಾವಣೆಯನ್ನು ಒಂದು ಅಥವಾ 2 ತಿಂಗಳು ಮುಂದೂಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಚುನಾವಣಾ ಆಯೋಗಕ್ಕೆ ಅಲಹಾಬಾದ್‌ ಹೈಕೋರ್ಟ್‌ ಮನವಿ ಮಾಡಿದೆ. ಜೊತೆಗೆ ಚುನಾವಣೆಗೆ ಸಂಬಂಧಿಸಿದಂತೆ ಜನ ಸೇರುವುದನ್ನು ತಡೆಯಬೇಕು ಎಂದು ಹೇಳಿದೆ.

ಹೈಕೋರ್ಟ್‌ನಲ್ಲಿ ಜಾಮೀನು ಸಂಬಂಧಿ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ಸಮಯದಲ್ಲಿ ಕೋರ್ಟ್‌ ಈ ವಿಷಯವನ್ನು ಪ್ರಸ್ತಾಪಿಸಿದೆ. ‘ಚುನಾವಣಣಾ ರಾರ‍ಯಲಿಗಳನ್ನು ತಡೆಯದೇ ಇದ್ದರೆ ಮುಂದಿನ ಪರಿಣಾಮಗಳು 2ನೇ ಅಲೆಗಿಂತಲೂ ಭೀಕರವಾಗಿರುತ್ತದೆ. ಬಂಗಾಳದಲ್ಲಿ ನಡೆದ ಗ್ರಾಮಪಂಚಾಯತ್‌ ಚುನಾವಣೆಯ ನಂತರ ಅತಿ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದರು. ಹಾಗಾಗಿ ಈ ಚುನಾವಣೆಯ ಸಮಯದಲ್ಲೂ ಇಂತಹ ಸಮಸ್ಯೆ ತಲೆದೋರಬಹುದು. ಹಾಗಾಗಿ ಚುನಾವಣಾ ರಾರ‍ಯಲಿಗಳನ್ನು ನಿಷೇಧಿಸಿ ಮತ್ತು ಚುನಾವಣೆಯನ್ನು ಸ್ವಲ್ಪ ಕಾಲ ಮುಂದೂಡಿ ಎಂದು ಕೋರ್ಟ್‌ ಮನವಿ ಮಾಡಿದೆ.

Latest Videos

ಇದೇ ವೇಳೆ ಕೋವಿಡ್‌ ಲಸಿಕೆ ವಿತರಿಸಲು ಮೋದಿ ಕೈಗೊಂಡ ಕ್ರಮಗಳನ್ನು ನ್ಯಾಯಮೂರ್ತಿ ಶೇಖರ್‌ ಯಾದವ್‌ ಶ್ಲಾಘಿಸಿದರು.

 2 ಕೋಟಿ ಮೌಲ್ಯದ ಭೂಮಿ ಕೆಲವೇ ನಿಮಿಷದಲ್ಲಿ 18 ಕೋಟಿಗೆ ಮಾರಾಟ!

ಹಲವು ವರ್ಷಗಳ ಹೋರಾಟದ ಬಳಿಕ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ (Ram Temple) ಸುತ್ತಮುತ್ತ ನಡೆದಿದೆ ಎನ್ನಲಾದ ಭೂ ಅಕ್ರಮದ ಕುರಿತಾಗಿ ಕಾಂಗ್ರೆಸ್ (Congress )ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಗುರುವಾರ ಅತ್ಯಂತ ವಿವರವಾದ ಮಾಹಿತಿ ನೀಡಿದರು. ಬಿಜೆಪಿಯ ಮುಖಂಡರ (BJP leaders) ಸಂಬಂಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು  ದೇವಸ್ಥಾನದ ಸುತ್ತಮುತ್ತಲೂ ಅಕ್ರಮವಾಗಿ ಭೂಮಿ ಖರೀದಿ ಮಾಡಿದ್ದರ ಕುರಿತಾಗಿ ಬಂದಿರುವ ಪ್ರತ್ಯೇಕ ಆರೋಪಗಳ ಬಗ್ಗೆ ಉತ್ತರ ಪ್ರದೇಶ ಸರ್ಕಾರ (Uttar Pradesh government) ಈಗಾಗಲೇ ತನಿಖೆಯನ್ನೂ ಆರಂಭ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ಆಸ್ತಿ ಮಾರಾಟದ ದಾಖಲೆಗಳನ್ನು ತೋರಿಸಿದರು.  ರಾಮಮಂದಿರ ಸುತ್ತಮುತ್ತಲಿನ ಜಾಗ ಅಂದಾಜು 2 ಕೋಟಿ ರೂಪಾಯಿ ಮೌಲ್ಯದ್ದಾಗಿದ್ದು, ಇದನ್ನು ಎರಡು ಬಾರಿ ಮಾರಾಟ ಮಾಡಲಾಗಿದೆ. ಮೊದಲ ಬಾರಿಗೆ ಇದನ್ನು 8 ಕೋಟಿಗೆ ಮಾರಾಟ ಮಾಡಲಾಗಿದ್ದರೆ, 2ನೇ ಬಾರಿಗೆ 18.5 ಕೋಟಿ ರೂಪಾಯಿಗೆ 2020ರಲ್ಲಿ ಕೇಂದ್ರ ಸರ್ಕಾರ ನಿರ್ಮಿಸಿರುವ ರಾಮಮಂದಿರ ಟ್ರಸ್ಟ್ ಗೆ ಮಾರಾಟ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

2017ರಲ್ಲಿ ನಿರ್ದಿಷ್ಟ ವ್ಯಕ್ತಿಗೆ ಮಾರಾಟ ಮಾಡಲಾಗಿದ್ದ ಒಂದು ತುಂಡು ಭೂಮಿಯನ್ನು ಆ ವ್ಯಕ್ತಿ ಎರಡು ಭಾಗಗಳಲ್ಲಿ ಮಾರಾಟ ಮಾಡಿದ್ದಾನೆ. ಮೊದಲ ಭಾಗವನ್ನು ರಾಮಮಂದಿರ ಟ್ರಸ್ಟ್ ಗೆ ನೇರವಾಗಿ 8 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಇನ್ನು 2ನೇ ಭಾಗವನ್ನು ಇದಾದ 19 ನಿಮಿಷಗಳ ನಂತರ ರವಿ ಮೋಹನ್ ತಿವಾರಿ (Ravi Mohan Tiwari) ಎನ್ನುವ ವ್ಯಕ್ತಿಗೆ 2 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಐದು ನಿಮಿಷದ ಬಳಿಕ ರವಿ ಮೋಹನ್ ತಿವಾರಿ 2 ಕೋಟಿ ರೂ. ಮೌಲ್ಯದ ಈ ಭೂಮಿಯನ್ನು 18.5 ಕೋಟಿ ರೂಪಾಯಿಗೆ ರಾಮಮಂದಿರ ಟ್ರಸ್ಟ್ ಗೆ ಮಾರಾಟ ಮಾಡುತ್ತಾರೆ. ಕೇವಲ 2 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚಿನ ಮೌಲ್ಯವಿರುವ ಈ ಭೂಮಿಯನ್ನು ರಾಮಮಂದಿರ ಟ್ರಸ್ಟ್ ಗೆ 8 ಕೋಟಿ ಹಾಗೂ 18.5 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.

click me!