
ಗುವಾಹಟಿ[ಜ.27]: ಅಸ್ಸಾಂನಲ್ಲಿ ಗಣರಾಜ್ಯೋತ್ಸವ ನಡೆಯುವ ಮುನ್ನ ಭಾನುವಾರ 4 ಕಡೆ ಬಾಂಬ್ ಸ್ಫೋಟಗಳು ಸಂಭವಿಸಿವೆ.
ದಿಬ್ರುಗಢ ಜಿಲ್ಲೆಯಲ್ಲಿ 3 ಹಾಗೂ ಚರೈದೇವ್ ಜಿಲ್ಲೆಯಲ್ಲಿ 1 ಸ್ಫೋಟ ಬೆಳಗ್ಗೆ 8.15ರಿಂದ 8.25ರ ನಡುವೆ ಈ 4 ಸ್ಫೋಟಗಳು ಘಟಿಸಿವೆ. ಇದರ ಬೆನ್ನಲ್ಲೇ ಸಂಜೆ ನಿಷೇಧಿತ ಉಲ್ಫಾ-ಐ ಉಗ್ರ ಸಂಘಟನೆಯು ಘಟನೆಯ ಹೊಣೆ ಹೊತ್ತುಕೊಂಡಿದೆ. ಇದೇ ಸಂಘಟನೆಯು ಗಣರಾಜ್ಯೋತ್ಸವ ಆಚರಣೆ ನಿಷೇಧಕ್ಕೂ ಕರೆ ನೀಡಿತ್ತು.
ಸ್ಫೋಟ ಸಂಭವಿಸಿದ 1 ಸ್ಥಳದ ಸಿಸಿಟೀವಿ ದೃಶ್ಯ ಲಭಿಸಿದ್ದು, ಅದರಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು, ಗ್ರೆನೇಡ್ ಎಸೆದು ಪರಾರಿಯಾಗಿರುವುದು ಕಂಡುಬರುತ್ತದೆ. ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಕೃತ್ಯ ಖಂಡಿಸಿದ್ದು, ಉಗ್ರ ಗುಂಪುಗಳು ಹತಾಶರಾಗಿ ಈ ಕೃತ್ಯ ಎಸಗಿದ್ದಾರೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ