ಭಾರತದಲ್ಲಿ ಇದ್ದಿದ್ದರೆ ನೊಬೆಲ್‌ ಸಿಗುತ್ತಿರಲಿಲ್ಲ: ಅಭಿಜಿತ್ ಬ್ಯಾನರ್ಜಿ!

By Kannadaprabha NewsFirst Published Jan 27, 2020, 9:22 AM IST
Highlights

ಭಾರತದಲ್ಲಿ ಇದ್ದಿದ್ದರೆ ನೊಬೆಲ್‌ ಸಿಗುತ್ತಿರಲಿಲ್ಲ|  ಭಾರತೀಯ ಮೂಲದ ಅರ್ಥಶಾಸ್ತ್ರ ನೊಬೆಲ್‌ ವಿಜೇತ ಅಭಿಜಿತ್‌ ಬ್ಯಾನರ್ಜಿ 

ಜೈಪುರ[ಜ.27]: ‘ನಾನು ಭಾರತದಲ್ಲೇ ವಾಸವಿದ್ದಿದ್ದರೆ ನೊಬೆಲ್‌ ಪ್ರಶಸ್ತಿ ಸಿಗುತ್ತಿರಲಿಲ್ಲ’ ಎಂದು ಭಾರತೀಯ ಮೂಲದ ಅರ್ಥಶಾಸ್ತ್ರ ನೊಬೆಲ್‌ ವಿಜೇತ ಅಭಿಜಿತ್‌ ಬ್ಯಾನರ್ಜಿ ಹೇಳಿದ್ದಾರೆ.

ಧೋತಿ-ಕುರ್ತಾ, ಸೀರೆ: ನೊಬೆಲ್ ಸ್ವೀಕರಿಸಿದ ಬ್ಯಾನರ್ಜಿ ದಂಪತಿ!

ಜೈಪುರ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಅವರು ಈ ಮಾತುಗಳನ್ನು ಹೇಳಿದರು. ಆದರೆ ತಮ್ಮ ಅಭಿಪ್ರಾಯಕ್ಕೆ ತಕ್ಷಣವೇ ಸ್ಪಷ್ಟನೆ ನೀಡಿದ ಅವರು, ‘ಭಾರತದಲ್ಲಿ ಒಳ್ಳೆಯ ಪ್ರತಿಭೆಗಳು ಇಲ್ಲ ಎಂದಲ್ಲ. ಇದ್ದಾರೆ. ಆದರೆ ಸಾಧನೆ ಮಾಡಲು ವ್ಯವಸ್ಥೆ ಕೂಡ ಪೂರಕವಾಗಿರಬೇಕು’ ಎಂದು ಹೇಳಿದರು.

‘ಒಬ್ಬನಿಂದಲೇ ಸಾಧನೆ ಸಾಧ್ಯವಿಲ್ಲ. ಇತರರು ಪಟ್ಟಶ್ರಮದಿಂದ ಕೂಡ ನನಗೆ ಶ್ರೇಯಸ್ಸು ಬಂದಿದೆ’ ಎಂದರು. ಮುಂಬೈನಲ್ಲಿ ಜನಿಸಿದ್ದ ಬ್ಯಾನರ್ಜಿ ಈಗ ಅಮೆರಿಕ ವಾಸಿ.

ನಾನು ಮತ್ತು ನಿರ್ಮಲಾ ಸಹಪಾಠಿಗಳು: ಅಭಿಜಿತ್ ಬ್ಯಾನರ್ಜಿ!

click me!